Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶೇಕಡಾ 10ರಷ್ಟು ದಾಟದ ಸಕ್ರಿಯವಾಗಿರುವ ವೃತ್ತಿನಿರತರು

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯದಲ್ಲಿ ಸರಿ ಸುಮಾರು ಒಂದು ಅಂದಾಜಿನಂತೆ. ಸಕ್ರೀಯವಾಗಿರುವ ವೃತ್ತಿನಿರತರು. ಕರ್ನಾಟಕದ ಜನಸಂಖ್ಯೆಯ ಶೇಕಡಾವಾರು. ರಾಜಕಾರಣಿಗಳು 
1%, ಅಧಿಕಾರಿಗಳು 3%, ನ್ಯಾಯಾಧೀಶರು ಮತ್ತು ವಕೀಲರು .50%, ಪತ್ರಕರ್ತರು .50%,

ಧರ್ಮಾಧಿಕಾರಿಗಳು .25%, ವೈದ್ಯರು .15%, ಪೊಲೀಸರು .50%, ಶಿಕ್ಷಕರು .75%, ತೆರಿಗೆ ಸಂಗ್ರಹಕಾರರು .15%, ಲೆಕ್ಕಾಧಿಕಾರಿಗಳು .10%, ಹೋರಾಟಗಾರರು .25%..... ಬಹುಶಃ ಇನ್ನೊಂದಿಷ್ಟು ಇದಕ್ಕೆ ಸೇರಿಸಿದರು ಶೇಕಡಾ 10% ದಾಟುವುದಿಲ್ಲ.

ಇನ್ನುಳಿದ ಶೇಕಡಾ 90% ಮಕ್ಕಳು, ಯುವಕರು, ಮಹಿಳೆಯರು, ರೈತರು, ಕಾರ್ಮಿಕರು, ವ್ಯಾಪಾರಸ್ಥರು, ಚಾಲಕರು, ದರ್ಜಿಗಳು, ಪೂಜಾರಿಗಳು ಇತ್ಯಾದಿ ಇತ್ಯಾದಿ....

ಒಂದು ವೇಳೆ ಮೇಲಿನ ಶೇಕಡಾ 10% ಜನ ಪ್ರಾಮಾಣಿಕತೆ ಮತ್ತು ದಕ್ಷತೆಯ ಒಂದು ಪ್ರತಿಜ್ಞೆ ಸ್ವೀಕರಿಸಿದರೆ ಏನಾಗಬಹುದು. ಏಕೆಂದರೆ ಈ ಹತ್ತರಷ್ಟು ಜನ ಅಕ್ಷರಸ್ಥರು, ವಿದ್ಯಾವಂತರು ಬುದ್ದಿವಂತರು ಅಧಿಕಾರ ಹೊಂದಿರುವವರು, ಕೆಲವರನ್ನು ಹೊರತುಪಡಿಸಿ ಬಹುತೇಕರು ನಿಗದಿತ ಸರ್ಕಾರಿ ಅಥವಾ ಅರೆ ಸರ್ಕಾರಿ ಆದಾಯ ಹೊಂದಿರುವವರು, ಬಹುತೇಕ ಸಂಪನ್ಮೂಲಗಳನ್ನು ಬಳಸುತ್ತಿರುವವರು, ಸಮಾಜದ ಜನರ ಅಭಿವೃದ್ಧಿಗೆ ಶ್ರಮಿಸುತ್ತಿರುವವರು, ರಾಜ್ಯದ ಎಲ್ಲಾ ಸಮಕಾಲೀನ ಸಮಸ್ಯೆ ಮತ್ತು ಮಾಹಿತಿಯ ಅರಿವಿರುವವರು.

ಇವರುಗಳೇನಾದರೂ ಮುಂದಿನ ಕೇವಲ 3/4 ವರ್ಷಗಳಲ್ಲಿ ಕಾನೂನಿನ ಅಡಿಯಲ್ಲಿ, ನೈತಿಕತೆಯ ನೆಲೆಯಲ್ಲಿ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮತ್ತು ದಕ್ಷತೆಯಿಂದ ನಿರ್ವಹಿಸಿದ್ದೇ ಆದರೆ ಕರ್ನಾಟಕ ರಾಜ್ಯದ ಭವಿಷ್ಯ, ಜನರ ಜೀವನಮಟ್ಟದ ಆಧಾರದಲ್ಲಿ ಹೇಗಾಗಬಹುದು ಊಹಿಸಿ.

ಅವರೇನು ಸ್ವಾತಂತ್ರ್ಯ ಹೋರಾಟಗಾರರಂತೆ ಪ್ರಾಣ ತ್ಯಾಗ ಮಾಡಬೇಕಾಗಿಲ್ಲ, ಉಪವಾಸ ಸತ್ಯಾಗ್ರಹ ಮಾಡಬೇಕಾಗಿಲ್ಲ, ಮನೆ ಮಠ ಸಂಸಾರ ತೊರೆಯಬೇಕಾಗಿಲ್ಲ. ಕೇವಲ ಸರ್ಕಾರದ ಸಂಬಳ ಮಾತ್ರ ಪಡೆಯುವುದು ಮತ್ತು ಅದಕ್ಕೆ ತಕ್ಕ ಕರ್ತವ್ಯ ನಿರ್ವಹಿಸುವುದು. ಅಷ್ಟು ಮಾತ್ರ ಮಾಡಿದರೆ ಸಾಕು. ಸರ್ಕಾರದ ಸಂಬಳ ಇಲ್ಲದವರು ಒಂದು ಮಿತಿ ಮೀರದ ಲಾಭದ ಒಳಗೆ ಕೆಲಸ ಮಾಡಿದರೆ ಸಾಕು.

ಅತಿ ಮುಖ್ಯವಾಗಿ....ಕರ್ನಾಟಕದಲ್ಲಿ...ನಮ್ಮ ರಾಜ್ಯದ ಎಲ್ಲಾ ಅಧಿಕಾರ ಇರುವ ರಾಜಕಾರಣಿಗಳು ಮತ್ತು ಸರ್ಕಾರಿ ನೌಕರರು ಒಂದು ವರ್ಷದ ಮಟ್ಟಿಗೆ ತಮ್ಮ ಕೆಲಸವನ್ನು ಸೇವೆ ಎಂದು ಪರಿಗಣಿಸಿ ಯಾವುದೇ ಲಂಚ ಸ್ವೀಕರಿಸದೆ ಸಹಜವಾಗಿ ಮತ್ತು ಪ್ರಾಮಾಣಿಕವಾಗಿ ತಮ್ಮ ಎಂದಿನ ಸರಳ ಕೆಲಸಗಳನ್ನು  ಅಧಿಕೃತ ಸಂಬಳವನ್ನು ಪಡೆದು ಮಾಡಿದರೆ ಈ ರಾಜ್ಯದ ಈಗಿನ ಆದಾಯಕ್ಕೆ ಹೆಚ್ಚುವರಿಯಾಗಿ ಸುಮಾರು ಒಂದು ಲಕ್ಷ  ಕೋಟಿಯಷ್ಟು  ಸುಲಭವಾಗಿ ಏರಿಕೆಯಾಗುತ್ತದೆ.

ಇಷ್ಟೇ ಪ್ರಾಮಾಣಿಕತೆಯ ಕೆಲಸ ಇಲ್ಲಿಯವರೆಗೂ ಅವರ ಬೇಜವಾಬ್ದಾರಿ, ನಿರ್ಲಕ್ಷ್ಯ , ಸೋಮಾರಿತನದಿಂದ ಸರ್ಕಾರಕ್ಕೆ ಆಗುತ್ತಿರುವ ನಷ್ಟವನ್ನು ಉಳಿಸಿ ತಮ್ಮ ಕೆಲಸಗಳನ್ನು ಕ್ರಮಬದ್ಧಗೊಳಿಸಿದರೆ ಈ ಆದಾಯದ ಜೊತೆಗೆ ಮತ್ತೆ ಕನಿಷ್ಠ ಒಂದು ಲಕ್ಷ ಕೋಟಿಯಷ್ಟು ಉಳಿತಾಯ ರೂಪದಲ್ಲಿ ಸಿಗುತ್ತದೆ.

ಅಂದರೆ ಹೊಟ್ಟೆ ತುಂಬಿ ಸಂಸಾರ ನಡೆಸುವಷ್ಟು  ಸಂಬಳ ಪಡೆಯುವ ಸರ್ಕಾರಿ ಅಧಿಕಾರಿಗಳ ಕೇವಲ ಒಂದು ವರ್ಷದ ಪ್ರಾಮಾಣಿಕ ದುಡಿಮೆ ರಾಜ್ಯದ ಈಗಿನ ಆದಾಯವನ್ನು ದ್ವಿಗುಣ ಗೊಳಿಸುತ್ತದೆ.

ಆ ಹಣವನ್ನು ರಾಜಕಾರಣಿಗಳು ಅಷ್ಟೇ ಪ್ರಾಮಾಣಿಕತೆಯಿಂದ ಉಪಯೋಗಿಸಿದರೆ ಖಂಡಿತವಾಗಿಯೂ ಜನರ ಜೀವನಮಟ್ಟ ಬಹಳಷ್ಟು ಉತ್ತಮವಾಗುತ್ತದೆ.

ಇದರಿಂದಾಗಿ, ಆರೋಗ್ಯ, ಶಿಕ್ಷಣ, ಸ್ವಚ್ಚತೆ, ಕ್ರೀಡೆ ಸಂಗೀತ ಸಾಹಿತ್ಯ ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಪ್ರಗತಿ ಕಾಣುವುದಲ್ಲದೆ ವೇಶ್ಯಾವಾಟಿಕೆ, ವಲಸೆ, ಬಾಲ ಕಾರ್ಮಿಕ ಪದ್ದತಿ, ಅಪಘಾತ, ಅಪೌಷ್ಟಿಕತೆ, ಶಿಶು ಮರಣ, ಕಳ್ಳತನ ದರೋಡೆ ಕೊಲೆ ಮುಂತಾದುವುಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತದೆ. ಕೇವಲ ಕೆಲವೇ ಲಕ್ಷಗಳ ಸಂಖ್ಯೆಯಲ್ಲಿ ಇರುವ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಸಂಕಲ್ಪ ಮಾಡಿದರೆ ಎಷ್ಟೊಂದು ಮಹತ್ವದ ಬದಲಾವಣೆ ಸಾಧ್ಯ.

ಇದರ ಪರೋಕ್ಷ ಪರಿಣಾಮ ಸಾಮಾನ್ಯ ಜನರ ಮೇಲಾಗಿ ಅವರೂ ಕೂಡ ಜಾಗೃತರಾಗುತ್ತಾರೆ. ಇಡೀ ವ್ಯವಸ್ಥೆ ಉತ್ತಮ ಗುಣಮಟ್ಟದ ಸಮಾಜವಾಗಿ ರೂಪಗೊಳ್ಳುತ್ತದೆ. ಆ ಸೌಭಾಗ್ಯದ ದಿನಗಳನ್ನು ಕಾಣಲು ನಾವೆಲ್ಲರೂ ಮನಸ್ಸುಗಳ ಅಂತರಂಗದ ಚಳವಳಿ ರೂಪಿಸೋಣ‌. ಇದು ತುಂಬಾ ಕಷ್ಟ ನಿಜ. ಆದರೆ ಅಸಾಧ್ಯವಲ್ಲ.

ಸೂರ್ಯನಲ್ಲಿಗೇ ಉಪಗ್ರಹ ಕಳಿಸುವ ತಯಾರಿಯಲ್ಲಿರುವಾಗ ಇದು ಯಾವ ಮಹಾ ಕಷ್ಟ ಅಲ್ಲವೇ...... ‌
ಲೇಖನ-ವಿವೇಕಾನಂದ. ಎಚ್. ಕೆ.
9844013068.......

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ