Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉದ್ಘಾಟನೆಗೆ ಬಾರದ ಶಾಸಕರ ನಿರ್ಲಕ್ಷ್ಯತೆ ಖಂಡಿಸಿ ಪ್ರತಿಭಟನೆ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ದಲಿತರ ಕಾಲೋನಿಯಲ್ಲಿನ ಉದ್ಘಾಟನೆಗೆ ಬರುವುದಾಗಿ ಹೇಳಿದ್ದ
ಶಾಸಕರು ಏಕಾಏಕಿ ಕಾರ್ಯಕ್ರಮ ರದ್ದು ಮಾಡಿದ್ದಾರೆ. ತಮ್ಮನ ಮದುವೆ ಆಹ್ವಾನ ಪತ್ರಿಕೆ ಹಂಚುವ ಕಾರಣಕ್ಕೆ ಗ್ರಂಥಾಲಯ ಉದ್ಘಾಟನೆಗೆ ಶಾಸಕರು ಬಾರದೆ ಅಂಬೇಡ್ಕರ್ ರವರಿಗೆ ಅಗೌರವ ತೋರಿಸಿದ್ದಾರೆಂದು ವೀರಭಧ್ರನಪಾಳ್ಯದ ನಿವಾಸಿಗಳು ಪತ್ರಿಭಟನೆ ನಡೆಸಿದರು.

ದೊಡ್ಡಬಳ್ಳಾಪುರ ನಗರದ 12ನೇ ವಾರ್ಡ್ ನ ವೀರಭಧ್ರನಪಾಳ್ಯದಲ್ಲಿ ನೂತನವಾಗಿ ಗ್ರಂಥಾಲಯ ನಿರ್ಮಾಣ ಮಾಡಲಾಗಿದ್ದು, ಸ್ಥಳೀಯ ಯುವಕರು ಸಹಾಯ ಧನದಿಂದ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಗಣರಾಜ್ಯೋತ್ಸವ ಹಿನ್ನಲೆ ಇಂದು ಗ್ರಂಥಾಲಯ ಉದ್ಘಾಟನೆಗೆ ಸ್ಥಳೀಯ ಯುವಕರು ಸಿದ್ಧತೆ ನಡೆಸಿದ್ದರು. ಕಾರ್ಯಕ್ರಮಕ್ಕೆ ಶಾಸಕ ಧೀರಜ್ ಮುನಿರಾಜುಗೆ ಆಹ್ವಾನ ನೀಡಲಾಗಿತ್ತು. ಶಾಸಕರು ಕಾರ್ಯಕ್ರಮಕ್ಕೆ ಬರುವುದಾಗಿ ಭರವಸೆ ನೀಡಿದ್ದರು. ಶಾಸಕರ ಮಾತಿನ ನಂಬಿಕೆ ಮೇಲೆ ಯುವಕರು ಗ್ರಂಥಾಲಯ ಉದ್ಘಾಟನೆಗೆ ಸಿದ್ಧತೆ ನಡೆಸಿದ್ದರು.

ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆಗೆ ಸಮಯ ನಿಗದಿ ಮಾಡಲಾಗಿತ್ತು, ಬೆಳಗ್ಗೆ ಶಾಸಕರ ಸಿಬ್ಬಂದಿಗೆ ಪೋನ್ ಮಾಡಿದಾಗ ಶಾಸಕರು ಸಹೋದರನ ಮದುವೆ ಆಹ್ವಾನ ಪತ್ರಿಕೆ ಹಂಚುವ ಸಲುವಾಗಿ ಹೊರಗೆ ಹೋಗಿದ್ದು ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದು ಸ್ಥಳೀಯ ಯುವಕರ ಆಕ್ರೋಶಕ್ಕೆ ಕಾರಣವಾಗಿದೆ.

ಶಾಸಕರ ನಿರ್ಲಕ್ಷ್ಯತೆಯ ವಿರುದ್ಧ ಆಕ್ರೋಶಗೊಂಡ ಸ್ಥಳೀಯ ಯುವಕರು ಗ್ರಂಥಾಲಯ ಕಟ್ಟಡದ ಮುಂದೆ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಮಾತನಾಡಿದ ಯುವಕ ವಿಜಯಕುಮಾರ್, ಶಾಸಕರು ಸಂವಿಧಾನ ವಿರೋಧಿಯಾಗಿದ್ದು, ದಲಿತರ ಕಾಲೊನಿಯಲ್ಲಿನ ಗ್ರಂಥಾಲಯ ಎಂಬ ಕಾರಣಕ್ಕೆ ಉದಾಸೀನತೆ ತೋರಿದ್ದಾರೆ, ಗ್ರಂಥಾಲಯ ಅಧಿಕಾರಿ ಸರೋಜಮ್ಮನವರಿಗೆ ಧಮ್ಕಿ ಹಾಕಿ ಗ್ರಂಥಾಲಯ ಕಟ್ಟಡಕ್ಕೆ ಬೀಗ ಹಾಕಿ ಕೊಂಡು ಹೋಗುವಂತೆ ಹೇಳಿದ್ದಾರೆ.

ಇಂದು ಗಣರಾಜ್ಯೋತ್ಸವ ಹಿನ್ನಲೆ ಒಳ್ಳೇಯ ದಿನವಾದ ಕಾರಣಕ್ಕೆ ಗ್ರಂಥಾಲಯ ಉದ್ಘಾಟನೆಗಾಗಿ ಪೆಂಡಾಲ್ ಸೇರಿದಂತೆ ಅಲಂಕಾರಕ್ಕಾಗಿ ಹಣ ಖರ್ಚು ಮಾಡಲಾಗಿತ್ತು. ಇವತ್ತು ಶಾಸಕರು ಸಹೋದರನ ಮದುವೆ ಆಹ್ವಾನ ಪತ್ರಿಕೆ ಹಂಚುವ ಕಾರಣಕ್ಕೆ ಕಾರ್ಯಕ್ರಮಕ್ಕೆ ಬರದೆ ಉದಾಸೀನತೆ ತೋರಿದ್ದಾರೆ. ಮಧ್ಯಾಹ್ನದೊಳಗೆ ಬರದೆ ಇದ್ದರೆ ನಾವೇ ಬಾಗಿಲ ಬೀಗ ಹೊಡೆದು ಗ್ರಂಥಾಲಯ ಉದ್ಘಾಟನೆ ಮಾಡುವ ಎಚ್ಚರಿಕೆ ನೀಡಿದರು.

 ಈ ವೇಳೆ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಸದಸ್ಯ ಅಂಜನಮೂರ್ತಿ, ಸ್ಥಳೀಯ ಯವಕರಾದ ಸಂತೋಷ, ರಮೇಶ್, ಹರೀಶ್.ವೈ ಎನ್, ನಂದೀಶ್ಮಂಜುನಾಥ್, ಚಂದ್ರು, ಮುನಿರಾಜುಶಿವು, ಮುರುಳಿ, ನವೀನ್ ಮುಂತಾದವರು ಇದ್ದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ