Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಒಳಮೀಸಲಾತಿ ಗಣತಿಯಲ್ಲಿ "ಛಲವಾದಿ" ಹೊಲೆಯ ಎಂದು ಬರೆಸಿ-ಸೊಣ್ಣಪ್ಪನ ಹಳ್ಳಿ ರಮೇಶ್

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಒಳಮೀಸಲಾತಿ ಗಣತಿಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಂಬಂದಿತ ಉಪ-ಜಾತಿಗಳನ್ನು "ಛಲವಾದಿ" ಹೊಲೆಯ ಎಂದು ನಮೂದಿಸುವ ಮೂಲಕ ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ನಮ್ಮ ನಮ್ಮ ಹಕ್ಕನ್ನು ಪಡೆಯಲು ಸಹಕರಿಸಬೇಕೆಂದು ಸೋಣ್ಣಪ್ಪನ ಹಳ್ಳಿ ರಮೇಶ್ ಮನವಿ ಮಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ  ಸಮುದಾಯಗಳ ನೈಜ ಸ್ಥಾನ, ಅಭಿವೃದ್ಧಿ ತಿಳಿಯಲು ನಾಗಮೋಹನ್ ದಾಸ್ ಆಯೋಗದ ಮುಖೇನ  ಸಮೀಕ್ಷೆಗೆ ಮುಂದಾಗಿದ್ದು, ಮನೆ ಬಾಗಿಲಿಗೆ ಬರುವ ಶಿಕ್ಷಕರ ಬಳಿ ಮೂಲ ಜಾತಿಯನ್ನು ಹೊಲಯ / ಛಲವಾದಿ ಎಂದು ಸ್ಪಷ್ಟವಾಗಿ ನಮೂದಿಸುವ ಮೂಲಕ  ಸಮುದಾಯದ ಬಂಧುಗಳು ಸಹಕರಿಸಬೇಕು ಎಂದರು.

ಮುಖಂಡರಾದ ಗೂಳ್ಯ ಹನುಮಣ್ಣ ಮಾತನಾಡಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು 2024ರ ಆಗಸ್ಟ್ 1 ರಲ್ಲಿ ಆಯಾ ರಾಜ್ಯಗಳಿಗೆ ದತ್ತಾಂಶದ ಮಾನದಂಡದ ಆಧಾರದ ಮೇಲೆ ಒಳಮೀಸಲು ಜಾರಿ ಮಾಡುವ ಅಧಿಕಾರವನ್ನು ನೀಡಿದ್ದು, ಈ ಹಿನ್ನಲೆ ರಾಜ್ಯ ಸರ್ಕಾರವು ಈ ಹಿಂದಿನ ಸರ್ಕಾರಗಳು ಮಾಡಿದ ಲೋಪಗಳನ್ನು ಸರಿಪಡಿಸುವ ಸಲುವಾಗಿ  ಸಮೀಕ್ಷೆಗೆ ಮುಂದಾಗಿದೆ, ಸಮುದಾಯದ ಬಂಧುಗಳು ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ಮೂಲ ಜಾತಿ ಯನ್ನು ಆದಿ ದ್ರಾವಿಡ ಅಥವಾ ಆದಿ ಕರ್ನಾಟಕ ಎಂದು ನಮೂದಿಸದೆ ಹೊಲಯ ಎಂದು ನಮೂದಿಸಬೇಕಿದೆ ಎಂದರು.

ಮುಖಂಡ ಮುನಿಯಪ್ಪ ಮಾತನಾಡಿ ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿದ್ದು, ಕೆಲ ದ್ವಂದ್ವಗಳಿಂದ ನಾವು ಹೆಚ್ಚಿದ್ದೇವೆ ಎಂಬ ಭಾವನೆ ಹಲವು ಸಮುದಾಯಗಳಲ್ಲಿ ಇದೆ, ಈ ಪ್ರಶ್ನೆಗೆ ಸೂಕ್ತ ಉತ್ತರವನ್ನು ಈ ಸಮೀಕ್ಷೆ ನೀಡುವ ಭರವಸೆ ಇದೆ ಎಂದರು.

ಈ ಸಮೀಕ್ಷೆಯನ್ನು ಸೂಕ್ತ ರೀತಿಯಲ್ಲಿ ನೆಡೆಸಿ ವರದಿ ಸಲ್ಲಿಕೆ ಮಾಡಲು ನ್ಯಾ. ನಾಗಮೋಹನ್ ದಾಸ್ ಅವರ ಆಯೋಗ ನೇಮಕ ಮಾಡಿದೆ. ಹಾಗಾಗಿ ಆಯಾ ಜಾತಿಗಳು ಮೂಲ ಜಾತಿಯನ್ನು ಸ್ಪಷ್ಟವಾಗಿ ನಮೂದು ಮಾಡಿಸಬೇಕು ಎಂದರು.

 ಹೊಲಯ ಸಮುದಾಯದಲ್ಲಿ 37ಕ್ಕೂ ಅಧಿಕ ಉಪಜಾತಿಗಳಾಗಿದ್ದು, ಮೂಲ ಜಾತಿ ಕಾಲಂನಲ್ಲಿ ಹೊಲಯ ಅಥವಾ ಛಲವಾದಿ ಎಂದು ನಮೂದು ಮಾಡಿ ಎಂಬ ಮಾಹಿತಿಯನ್ನು ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ಮನೆ ಮನೆಗೆ ಕರಪತ್ರ ತಲುಪಿಸಿ ಪ್ರಚಾರ ಮಾಡುವ ಮೂಲಕ ಜಾಗೃತಿ ಮೂಡಿಸಲಿದ್ದೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಛಲವಾದಿ ಸಮುದಾಯದ ಮುಖಂಡರಾದ ಮುನಿಯಪ್ಪ, ಮರಿಯಪ್ಪ, ಮುನಿರಾಜು, ಕೊನಘಟ್ಟ ರಾಮಾಂಜಿನಪ್ಪ, ತಳಗವಾರ ಪುನೀತ್, ಕನ್ನಮಂಗಲ ರಮೇಶ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ