ಚಂದ್ರವಳ್ಳಿ ನ್ಯೂಸ್, ವಿಜಯಪುರ:
ಕೆನಡಾದಲ್ಲಿ ನಡೆದ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ತಿಗಣಿಬಿದರಿ ಗ್ರಾಮದ ಯುವಕ ಸಚಿನ್ ಸಾಳುಂಕೆ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಸಚಿನ್ ಸಾಳುಂಕೆ ಅವರ ಈ ಸಾಧನೆಯನ್ನು ಬಸವನಾಡಿನ ಹೆಮ್ಮೆ ಹಾಗೂ ಇಡೀ ದೇಶಕ್ಕೆ ಕೀರ್ತಿ ತಂದ ಕ್ಷಣ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಪದಕ ಗೆದ್ದ ಸಾಧನೆಯ ವಿವರ:
ಸ್ಪರ್ಧಾ ವಿಭಾಗ: ಪುರುಷರ 105 ಕೆ.ಜಿ ವಿಭಾಗ.
ಸಾಧಿಸಿದ ತೂಕ: 310 ಕೆ.ಜಿ ಸ್ಕ್ವಾಟ್, 180 ಕೆ.ಜಿ ಬೆಂಚ್ ಹಾಗೂ 270 ಕೆ.ಜಿ ಡೆಡ್‌ಲಿಫ್ಟ್ ನಡೆಸುವ ಮೂಲಕ ಕಠಿಣ ಸವಾಲು ಒಡ್ಡಿದರು.
ಎದುರಾಳಿಗೆ ಸೋಲು: ಅಮೋಘ ಪ್ರದರ್ಶನದ ಮೂಲಕ ಇಂಗ್ಲೆಂಡ್‌ನ ಪ್ರಬಲ ಸ್ಪರ್ಧಿಯನ್ನು ಹಿಮ್ಮೆಟ್ಟಿಸಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.
ಕಳೆದ 10 ವರ್ಷಗಳಿಂದ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಚಿನ್, ಕಳೆದ 5 ವರ್ಷಗಳಿಂದ ಪವರ್‌ಲಿಫ್ಟಿಂಗ್‌ನಲ್ಲಿ ನಿರಂತರ ಹಾಗೂ ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಇವರ ಈ ಸಾಧನೆ ನಾಡಿನ ಯುವಜನತೆಗೆ ದೊಡ್ಡ ಸ್ಫೂರ್ತಿಯಾಗಿದೆ ಎಂದು ಸಚಿವರು ಅಭಿನಂದನೆ ಸಲ್ಲಿಸಿ, ಕ್ರೀಡಾಪಟುವಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.




