ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು
ಗಜಲ್ ರಚನೆ, ಅಧ್ಯಯನ, ವಿಮರ್ಶೆ, ಉಪನ್ಯಾಸದ ಜೊತೆಗೆ ಹಲವು ಗಜಲ್ ಸಂಕಲನಗಳಿಗೆ ರೇಖಾಚಿತ್ರಗಳು ಮತ್ತು ಮುಖಪುಟ ವಿನ್ಯಾಸಗಳನ್ನು ಮಾಡುವುದರ ಮುಖಾಂತರ ಕನ್ನಡ ಗಜಲ್ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ,
ಮೊಳಕಾಲ್ಮೂರಿನ ಸಾಹಿತಿ ಮತ್ತು ಚಿತ್ರ ಕಲಾವಿದರಾದ *ಜಬೀವುಲ್ಲಾ ಎಂ. ಅಸದ್ ಅವರಿಗೆ ಅಕ್ಷರ ದೀಪ ಫೌಂಡೇಶನ್ ಗದಗ ಹಾಗೂ ಸರ್ವ ಗಜಲ್ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ: 06/09/2026 ರಂದು ಧಾರವಾಡದ
ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ "ರಾಷ್ಟ್ರೀಯ ಗಜಲ್ ಸಿರಿ" ನೀಡಿ ಗೌರವಿಸಲಾಗುವುದು ಎಂದು ಸರ್ವಧ್ಯಕ್ಷರಾದ ಡಾ. ಶ್ರೀಶೈಲ ಮಾದಣ್ಣವರರು ತಿಳಿಸಿದ್ದಾರೆ.




