Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಏ. 21ರಿಂದ 23 ರ ವರೆಗೆ ಸಾಣೆಹಳ್ಳಿ ಶಿವ ಸಂಚಾರ ನಾಟಕೋತ್ಸವ

Advertisement
ಚಂದ್ರವಳ್ಳಿ ನ್ಯೂಸ್,ದೊಡ್ಡಬಳ್ಳಾಪುರ:
ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ಏಪ್ರಿಲ್ 21
, 22 ಮತ್ತು 23 ರಂದು ಮೂರು ದಿನಗಳ ಶಿವ ಸಂಚಾರ ನಾಟಕೋತ್ಸವ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜು ತಿಳಿಸಿದರು ‌.

   ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ  ನಡೆದ ಶಿವ ಸಂಚಾರ ನಾಟಕೋತ್ಸವ ಕುರಿತ ಸುದ್ದಿಗೋಷ್ಠಿಯಲ್ಲಿ ನಟರಾಜ್ ಮಾತನಾಡಿ ಹೊಸದುರ್ಗ ತಾಲ್ಲೂಕಿನ ಸಾಣೆಹಳ್ಳಿ ಶ್ರೀ ಶಿವಕುಮಾರ ಕಲಾ ಸಂಘದ ಕಲಾವಿದರು  ಮೂರು ದಿನಗಳು ಪ್ರತಿ ದಿನ ಸಂಜೆ 6.30 ಗಂಟೆಗೆ ನಡೆಯುವ  ನಾಟಕೋತ್ಸವದಲ್ಲಿ ಏ.21 ಮಂಗಳವಾರ  ಜಂಗಮದೆಡೆಗೆ, ಏ.22 ರಂದು ಬುಧವಾರ ಕಳ್ಳರ ಸಂತೆ  ಮತ್ತು ಏ.23 ಗುರುವಾರ ಶಿವಯೋಗಿ ಸಿದ್ದರಾಮೇಶ್ವರ  ನಾಟಕಗಳು ಪ್ರದರ್ಶನಗೊಳ್ಳುತ್ತವೆ.

    ಶಿವ ಸಂಚಾರ  ಮೂರು ದಿನಗಳ ನಾಟಕೋತ್ಸವವು  ದೊಡ್ಡಬಳ್ಳಾಪುರ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತುದೊಡ್ಡಬಳ್ಳಾಪುರ     ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಚಾರಿಟೀಸ್ ಟ್ರಸ್ಟ್ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ದೊಡ್ಡಬಳ್ಳಾಪುರ ತಾಲ್ಲೂಕು ಕಲಾವಿದರ ಸಂಘ  ಇವುಗಳ ಸಹಯೋಗದಲ್ಲಿ ನಡೆಯಲಿದ್ದು  ಸಾಣೇಹಳ್ಳಿ ಮಠದ  ಶ್ರೀ ಶಿವಕುಮಾರ ಕಲಾ ಸಂಘ ಶಿವಸಂಚಾರ ಎಂಬ ರಂಗತಂಡದ ಮೂಲಕ ಪ್ರತಿ ವರ್ಷ ನಾಟಕೋತ್ಸವ ಸಾಣೇಹಳ್ಳಿ ಶಿವಕುಮಾರ ಬಯಲು ರಂಗಮಂದಿರದಲ್ಲಿ ನಡೆಯುತ್ತದೆ.  ಪ್ರತಿ ವರ್ಷ ಮೂರು ನಾಟಕಗಳನ್ನು  ಶಿವಸಂಚಾರ ನಾಟಕ ತಂಡದ ಮೂಲಕ ರಾಜ್ಯದ ವಿವಿಧ ಸ್ಥಳಗಳಲ್ಲಿ ರಂಗಪ್ರದರ್ಶನ ಮಾಡುತ್ತಿದೆ ಎಂದರು.ದೊಡ್ಡಬಳ್ಳಾಪುರ ತಾಲ್ಲೂಕು  ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಜಂಗಮದೆಡೆಗೆ ನಾಟಕವನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ‌ರಚಿಸಿದ್ದಾರೆ. ಆರ್.ಜಗದೀಶ್ ಜಂಗಮದೆಡೆಗೆ  ನಾಟಕಕ್ಕೆ  ಸಂಗೀತ‌ಮತ್ತು ನಿರ್ದೇಶನ ಮಾಡಿದ್ದಾರೆ. ಈ ನಾಟಕ ಬಸವಣ್ಣನವರ ಬದುಕಿನ‌ಸುತ್ತ ನಡೆದ ಘಟನಾವಳಿಗಳ‌ಚಿತ್ರಣವಾಗಿದೆ. ಜಂಗಮದೆಡೆಗೆ ನಾಟಕವು ಬಸವಣ್ಣನವರ ಬಹುಮುಖಿ ಬದುಕಿಗೆ  ಹಿಡಿದ ಕನ್ನಡಿಯಾಗಿದೆ.

     ಕಳ್ಳರ ಸಂತೆ ನಾಟಕವು 15 ನೇ ಶತಮಾನದ ಕವಿ ವಿದ್ಯಾಪತಿಯ ಕಥೆಯಿಂದ ಪ್ರೇರಿತವಾಗಿದೆ.  ವಿದ್ಯಾಪತಿಯ  ಕಥೆಯನ್ನು ಆಧರಿಸಿ ಕೃಷ್ಣಮೂರ್ತಿ ಎನ್. ತಾಳಿಕಟ್ಟಿ   ಅವರು ಕಳ್ಳರ ಸಂತೆ ನಾಟಕ ರಚನೆ, ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದಾರೆ. ಮನುಷ್ಯನ ಅನೀತಿಯ ನಡಾವಳಿಗಳನ್ನು ಕೆಲವು ಹಾಸ್ಯ ಸನ್ನಿವೇಶಗಳ ಮೂಲಕ‌ನಾಟಕವು ಸಾಂಕೇತಿಕವಾಗಿ ತೆರೆದಿಟ್ಟು ಎಲ್ಲರೂ ಆತ್ಮಾವಲೋಕನ‌ಮಾಡಿಕೊಳ್ಳುವಂತೆ ಮಾಡುತ್ತದೆ.

  ಶಿವಯೋಗಿ ಸಿದ್ದರಾಮೇಶ್ವರ  ನಾಟಕವನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚಿಸಿದ್ದಾರೆ. ವೈ.ಡಿ.ಬದಾಮಿ ರಂಗ ನಿರ್ದೇಶನ ಮಾಡಿದ್ದಾರೆ.   ಈ ನಾಟಕವು  12ನೇ ಶತಮಾನದ  ವಚನಕಾರಶಿವಯೋಗಿ ಸಿದ್ಧರಾಮೇಶ್ವರರ ಜೀವನ, ಕಾಯಕ ಮತ್ತು ಭಕ್ತಿ ಕುರಿತಾಗಿದೆ.  ಸಿದ್ದರಾಮರ ಬದುಕಿನ ವಿವಿಧ ಆಯಾಯಗಳನ್ನು ಕಟ್ಟಿಕೊಡುತ್ತದೆ  ಶಿವಯೋಗಿ ಸಿದ್ದರಾಮೇಶ್ವರ ನಾಟಕ. ಶಿವಶರಣರ ತತ್ವ ಸಿದ್ದಾಂತಗಳನ್ನು ರಂಗಭೂಮಿಯ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ  ಜಂಗಮದೆಡೆಗೆ ಮತ್ತು ಶಿವಯೋಗಿ ಸಿದ್ದರಾಮೇಶ್ವರ ನಾಟಕಗಳಲ್ಲಿ ಇದೆ ಎಂದರು.

ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಮಾತನಾಡಿದೊಡ್ಡಬಳ್ಳಾಪುರ ರಂಗ ಕಲೆಗಳ ತವರೂರು. ಕನ್ನಡ ಚಿತ್ರರಂಗದ ಅದ್ವಿತೀಯ ಮೇರು ನಟರಾದ ಡಾ. ರಾಜಕುಮಾರ್, ಬಾಲಣ್ಣ, ನರಸಿಂಹರಾಜು ಸೇರಿದಂತೆ ರಾಜ್ಯದ ಹೆಸರಾಂತ  ರಂಗಭೂಮಿ ಕಲಾವಿದರು ದೊಡ್ಡಬಳ್ಳಾಪುರ ದಲ್ಲಿ ನಾಟಕಗಳನ್ನು ಅಭಿಯಿಸುವ ಮೂಲಕ ದೊಡ್ಡಬಳ್ಳಾಪುರ ದ ಕಲಾ ರಸಿಕರಿಗೆ ರಸದೌತಣ ವನ್ನು ಉಣ ಬಡಿಸಿದ್ದಾರೆ.ನಮ್ಮ ತಾಲೂಕು ರಂಗಕರ್ಮಿಗಳಿಗೆ ನಾಟಕೋತ್ಸವಗಳಿಗೆ

ವಿಶೇಷ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ.  ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪೌರಾಣಿಕ ನಾಟಕಗಳು ನಿರಂತರವಾಗಿ ನಡೆಯುತ್ತದೆ.  ರಂಗತಿರುಗಾಟ ತಂಡಗಳಾದ ನೀನಾಸಂ, ಸಮುದಾಯ, ರಂಗಾಯಣ    ಮುಂತಾದ   ಕಲಾತಂಡಗಳ ಕಲಾವಿದರು ಹಲವಾರು ನಾಟಕ ಪ್ರದರ್ಶನ ನೀಡಿದ್ದಾರೆ.  ಸದಾಭಿರುಚಿಯ ನಾಟಕಗಳಿಗೆ ದೊಡ್ಡಬಳ್ಳಾಪುರ ಕಲಾಭಿಮಾನಿಗಳು ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.

      ಸುದ್ದಿಗೋಷ್ಠಿಯಲ್ಲಿ  ದೊಡ್ಡಬಳ್ಳಾಪುರ ತಾಲ್ಲೂಕು ಕಲಾವಿದರ ಸಂಘದ ಅಧ್ಯಕ್ಷ ರಾಮಾಂಜಿನಪ್ಪ, ಕಾರ್ಯದರ್ಶಿ ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎ.ಜಯರಾಮ್,    ಮುಖ್ಯಶಿಕ್ಷಕಿ  ನಿಖಿಲಾ ಮುಂತಾದವರು ಹಾಜರಿದ್ದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರು ಕ್ಲೈಮೇಟ್ ಸಮ್ಮಿಟ್ ಆಲ್ಟರ್ನೇಟಿವ್’26: ಲೋಗೋ ಮತ್ತು ವೆಬ್‌ಸೈಟ್ ಅನಾವರಣನಮ್ಮ ಬೆಂಗಳೂರಿಗೆ ಮತ್ತೊಂದು ಗರಿ: ಐಎಸ್ಒ ಮಾನ್ಯತೆ ಪಡೆದ ದೇಶದ ಮೊದಲ ಜಲಮಂಡಳಿ ಸಮಾಜದ ಋಣ ತೀರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು-ಭೋವಿಶ್ರೀಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಳ್ಳಿ- ನ್ಯಾ.ರೋಣ ವಾಸುದೇವ್ ಕರೆ ಆಸಿಡ್ ದಾಳಿಗೆ ಒಳಗಾದ ನೊಂದ ವ್ಯಕ್ತಿಗಳಿಗೆ ಒಂದು ತಿಂಗಳಲ್ಲೇ ಮಧ್ಯಂತರ ಪರಿಹಾರ ವಿತರಣೆಯಾದವ ಗೊಲ್ಲರ ಸಂಘದ ಆಡಳಿತಾಧಿಕಾರಿ ಅವಧಿ ವಿಸ್ತರಣೆಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಶಾಖಾಧಿಕಾರಿ ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನಸಂಸದರ ಕಚೇರಿ ಎದುರು ಕಮ್ಯುನಿಸ್ಟ್ ಪಕ್ಷ ಪ್ರತಿಭಟನೆ ಆರೋಗ್ಯ ರಕ್ಷಣೆಗೆ ಜೀವನ ಶೈಲಿ ಬದಲಾಗಬೇಕು- ಮಾಜಿ ಸಚಿವ ಆಂಜನೇಯ ವಿದ್ಯಾರ್ಥಿವೇತನ ಬಿಡುಗಡೆಗೆ ಸಿಎಂಗೆ ಮನವಿ