Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಿಡಿಕೋಟೆ, ಧರ್ಮಪುರ, ಈಶ್ವರಗೆರೆ, ಬಬ್ಬೂರು ಕರಿಯಾಲ ಗ್ರಾಮ ಪಂಚಾಯಿತಿಗಳಲ್ಲಿ ಹಗರಣ

Advertisement
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪಿಡಿ ಕೋಟೆ
, ಧರ್ಮಪುರ, ಈಶ್ವರಗೆರೆ, ಬಬ್ಬೂರು ಮತ್ತು ಕರಿಯಾಲ ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮಾರ್ಗಸೂಚಿಗಳನ್ನೇ ಸಂಪೂರ್ಣವಾಗಿ ಉಲ್ಲಂಘನೆ ಮಾಡಿ ಸರ್ಕಾರದ ಹಣ ದುರುಪಯೋಗಪಡಿಸಿಕೊಂಡಿರುವ ಅಧಿಕಾರಿಗಳನ್ನು ಅಮಾನತ್ತು ಮಾಡುವಂತೆ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ ರಾಜ್ಯಾಧ್ಯಕ್ಷ ಡಾ. ರಾಘವೇಂದ್ರ ಎಸ್.ಆರ್ ರಾಜ್ಯ ಸರ್ಕಾರಕ್ಕೆ ದೂರು ನೀಡಿ ಒತ್ತಾಯಿಸಿದೆ.

ಹಿರಿಯೂರು ತಾಲೂಕಿನ ಹಲವು ಗ್ರಾಪಂಗಳಲ್ಲಿ ತುಂಬಿರುವಂತಹ ಕೆರೆ, ಕಟ್ಟಿ, ಕಾಲುವೆ, ಹಳ್ಳಗಳ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಕೆಲಸವಾಗದಿದ್ದರೂ ಸಹ ಎನ್‌ಎಂಆರ್ ಹಾಕಿ ಎಂಐಎಸ್ ಮಾಡುತ್ತಿದ್ದಾರೆ.

ಎನ್‌ಎಂಎಂಎಸ್ ಫೋಟೋದಲ್ಲಿ ಫಲಾನುಭವಿಗಳು ಇಲ್ಲದೆ ಇದ್ದರೂ ಸಹ ಕಮಿಷನ್ ಆಸೆಗೋಸ್ಕರ ಸಂಪೂರ್ಣ ಎನ್‌ಎಮ್‌ಆರ್ ಗೆ ಹಾಜರಾತಿ ನೀಡಿ ಎಂಐಎಸ್ ಮಾಡುತ್ತಿದ್ದಾರೆ. ಸ್ಥಳಕ್ಕೆ ಹೋಗದೆ ಚೆಕ್ ಮೆಜರ್ಮೆಂಟ್ ಬರೆಯುತ್ತಿದ್ದಾರೆ. ಸ್ಥಳ ಪರಿಶೀಲನೆ ಮಾಡದೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಎಂಐಎಸ್ ಮಾಡುತ್ತಿದ್ದಾರೆ.

ಇಂಜಿನಿಯರ್ ಗಳು ಮತ್ತು ತಾಂತ್ರಿಕ ಸಂಯೋಜಕರು ಮತ್ತು ಸಹಾಯಕ ನಿರ್ದೇಶಕರು ಸ್ಥಳಕ್ಕೆ ಹೋಗುವುದಿಲ್ಲ. ಎನ್‌ಎಂಎಂಎಸ್ ಹಾಜರಾತಿಯಲ್ಲಿ ಎರಡು ಸಲ ಫೋಟೋ ಹೊಡೆಯಬೇಕು ಆದರೆ ಒಂದೇ ಸಲ ಒಡೆದು ಎಂಐಎಸ್ ಮಾಡುತ್ತಿದ್ದಾರೆ.  ಎನ್‌ಎಂಆರ್ ಪ್ರತಿಯಲ್ಲಿ ಹಾಜರಾತಿಗೆ ಫೋರ್ಜರಿ ಸಹಿ ಹಾಕಿದ್ದಾರೆ.

ಕೆಲಸವೇ ಪ್ರಾರಂಭವಾಗದಿದ್ದರೂ ಸಹ ಎನ್‌ಎಂಆರ್ ಹಾಜರಾತಿ ಪ್ರತಿಯನ್ನು ಎಸ್ಟಿಮೇಟ್ ಪ್ರಕಾರ ಕಾಮಗಾರಿಗಳು ಆಗದೇ ಇದ್ದರೂ ಸಹ ಸಂಪೂರ್ಣವಾಗಿ ಎನ್‌ಎಂಆ‌ರ್ ಹಾಕಿದ್ದು ಸಮಗ್ರ ತನಿಖೆ ಮಾಡಿ ತಪ್ಪಿತಸ್ಥ ಪಿಡಿಒಗಳ ಅಮಾನತು ಮಾಡುವಂತೆ ಮನವಿ ಮಾಡಿದ್ದಾರೆ.

ಎಸ್ಟಿಮೇಟ್ ಪ್ರಕಾರ ಕಾಮಗಾರಿ ಆಗದೆ ಇದ್ದರೂ ಸಹ ಎಂಬಿ ಬರೆಯುತ್ತಾರೆ. ಎನ್‌ಎಂಆರ್‌ನಲ್ಲಿರುವ ಕೂಲಿ ಕಾರ್ಮಿಕರಿಗೂ ಫೋಟೋದಲ್ಲಿರುವ ಕೂಲಿ ಕಾರ್ಮಿಕರು ಬೇರೆ ಬೇರೆ ಇದ್ದು ಪರ್ಸೆಂಟೇಜ್ ತೆಗೆದುಕೊಂಡು ಕಣ್ಣು ಮುಚ್ಚಿ ಸಹಿ ಹಾಕುತ್ತಾರೆ. ಮೇಲುಸ್ತುವಾರಿ ಮಾಡಬೇಕಾದ ಅಧಿಕಾರಿಗಳು ಹವಾ ನಿಯಂತ್ರಣ ಕೋಣೆಯಲ್ಲಿ ಕೂತಿರುತ್ತಾರೆ. ಪ್ರತಿಸಲ ಮಾಡುವ ಸಾಮಾಜಿಕ ಲೆಕ್ಕಪರಿಶೋಧನೆ ಎನ್ನುವುದು ಒಂದು ಭ್ರಷ್ಟಾಚಾರದ ದಂಧೆಯಾಗಿದೆ.

ಯಾರೋ ಒತ್ತಾಯಕ್ಕೆ ಎನ್‌ಎಂಎಂಎಸ್ ಫೋಟೋ ಹೊಡೆಯುತ್ತಿದ್ದಾರೆ. ಸರ್ಕಾರದ ಆದೇಶಗಳ ಪ್ರಕಾರ ಯಾರಿಗೆ ಅಂದರೆ ಅವರಿಗೆ ಎನ್‌ಎಂಎಂಎಸ್ ಫೋಟೋ ತೆಗೆಯಲು ಪಾಸ್ವರ್ಡ್ ಮತ್ತು ಐಡಿ ಕೊಡುವಂತಿಲ್ಲ. ಆದರೆ ಯಾರಿಗೆ ಬೇಕೆಂದರೆ ಅವರಿಗೆ ಇಲ್ಲಿ ನೀಡಿರುತ್ತಾರೆ.

ಎಷ್ಟು ದೂರು ಕೊಟ್ಟರು ಜಿಲ್ಲೆಯಲ್ಲಿ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳಾಗಲಿ ಉಪ ಕಾರ್ಯದರ್ಶಿಗಳಾಗಲಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಲಿ ಯಾರು ಸಹ ಕ್ರಮ ಕೈಗೊಳ್ಳಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ  ಎಂದು ಅವರು ಆರೋಪಿಸಿದ್ದಾರೆ.

ಸರ್ಕಾರದ ಮಾರ್ಗಸೂಚಿಗಳನ್ನು ಮತ್ತು ಆಯುಕ್ತರ ಆದೇಶಗಳನ್ನು ಪಾಲನೆ ಮಾಡಬೇಕೆಂದು ಕಿಂಚಿತ್ತು ಅರಿವಿಲ್ಲದ ರೀತಿಯಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಸುಮಾರು ಕೋಟಿಗಟ್ಟಲೆ ಹಣವನ್ನು ದುರುಪಯೋಗಪಡಿಸಿಕೊಂಡು ಕರ್ತವ್ಯ ಲೋಪ ಎಸೆಗಿರುತ್ತಾರೆ. ಇವರಿಗೆ ಬೆನ್ನೆಲುಬಾಗಿ ನಿಂತುಕೊಂಡ ತಾಲ್ಲೂಕು ಕಾರ್ಯಕ್ರಮ ಅಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರು ಕಣ್ಣು ಮುಚ್ಚಿ ಕೂತಿದ್ದಾರೆ. ಆದ್ದರಿಂದ ಕೃತ್ಯದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾದಂತಹ ಎಲ್ಲಾ ಅಧಿಕಾರಿಗಳನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ ಕೂಡಲೇ ಅಮಾನತು ಆದೇಶ ಹೊರಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ