ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕುಂಚಿಟಿಗ ಅಧಿಕಾರಿಗಳ ಮತ್ತು ನೌಕರರ ಸಂಘ, ಬೆಂಗಳೂರು ವತಿಯಿಂದ 2026–27ನೇ ಸಾಲಿನ ವೃತ್ತಿಪರ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯದ ಕುಂಚಿಟಿಗ ಸಮುದಾಯದ ಆರ್ಥಿಕವಾಗಿ ಹಿಂದುಳಿದ, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಲಭ್ಯವಿರುತ್ತದೆ.
ಪ್ರಸ್ತುತ ಸಾಲಿನಲ್ಲಿ ವೈದ್ಯಕೀಯ (Medical), ಎಂಜಿನಿಯರಿಂಗ್ (Engineering), ಪಶುವೈದ್ಯಕೀಯ (Veterinary), ಕೃಷಿ (Agriculture) ಹಾಗೂ ತೋಟಗಾರಿಕೆ (Horticulture) ಪದವಿ ಕೋರ್ಸ್‌ಗಳ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕುಂಚಿಟಿಗ ಅಧಿಕಾರಿಗಳ ಮತ್ತು ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್.ಕೆ ಲಕ್ಷ್ಮಣ್ ಅವರು ಕರೆ ನೀಡಿದ್ದಾರೆ.
ಅರ್ಜಿ ಸಲ್ಲಿಸಲು ಪ್ರಮುಖ ಷರತ್ತುಗಳು ಹಾಗೂ ಅರ್ಹತೆಗಳು:
ಅರ್ಹ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ ಶೇ. 90 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು.
ಪ್ರವೇಶ ಪಡೆದಿರುವ ಕಾಲೇಜು ಅಥವಾ ಶಿಕ್ಷಣ ಸಂಸ್ಥೆಯಿಂದ ಪಡೆದ ಅಧಿಕೃತ ದೃಢೀಕರಣ ಪತ್ರವನ್ನು ಲಗತ್ತಿಸಬೇಕು.
ಸಂಬಂಧಪಟ್ಟ ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಲ್ಲಿಸಬೇಕು.
ದೃಢೀಕರಿಸಿದ ಆಧಾರ್ ಕಾರ್ಡ್ ಪ್ರತಿ ಹಾಗೂ ಸಂಪರ್ಕಕ್ಕಾಗಿ ಮೊಬೈಲ್ ಸಂಖ್ಯೆ ಒದಗಿಸಬೇಕು. ಪೋಷಕರ (ತಂದೆ–ತಾಯಿ) ವೃತ್ತಿಯ ವಿವರಗಳನ್ನು ನಮೂದಿಸಬೇಕು.
ಅರ್ಜಿ ಸಲ್ಲಿಕೆ ವಿವರ:
ನಿಗದಿತ ವಿದ್ಯಾರ್ಥಿವೇತನದ ಅರ್ಜಿ ನಮೂನೆಯನ್ನು ಪಡೆದು, ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ದಿನಾಂಕ 12–09–2026 ರೊಳಗೆ ನೋಂದಾಯಿತ ಅಂಚೆ (Registered Post) ಮೂಲಕ ಕೆಳಗಿನ ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ:
ಶ್ರೀ ಎಸ್.ಕೆ. ಲಕ್ಷ್ಮಣ್, ಕೆ.ಎ.ಎಸ್ (ನಿ).
ನಂ. 171, ಎ.ಇ.ಸಿ.ಎಸ್. ಲೇಔಟ್, 1ನೇ ಮುಖ್ಯರಸ್ತೆ,
ಸಂಜಯನಗರ ಪೊಲೀಸ್ ಠಾಣೆ ಹಿಂಭಾಗದ ರಸ್ತೆ,
ಸಂಜಯನಗರ, ಬೆಂಗಳೂರು – 560094.
ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:
7349573825, 9844526677, 8073721238, 9686604842 (ಜಿ.ಹೆಚ್. ನಾಗಹನುಮಯ್ಯ, ಕಾರ್ಯದರ್ಶಿ).



