Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಳೆ ನೀರು ಸಂಗ್ರಹ ತೊಟ್ಟಿಯಾದ ಶಾಲಾ ಆವರಣ

Advertisement
ಆರ್.ಎನ್.ರಘು, ಚಿಕ್ಕಂದವಾಡಿ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ತಾಲ್ಲೂಕು ಚಿಕ್ಕಂದವಾಡಿ ಗ್ರಾಮದಲ್ಲಿ ಇಡೀ ರಾತ್ರಿ ಸುರಿದ ಮಳೆಗೆ ಪ್ರಾಥಮಿಕ ಶಾಲೆಯು ನೀರಿನಿಂದ ಆವೃತವಾಗಿ ನೀರು ಹೊರಹೋಗಲು ಸ್ಥಳವಕಾಶವಿರುವುದಿಲ್ಲ ಮಳೆ ನೀರು ಶೇಖರಣಾ ತೊಟ್ಟಿಯಾಗಿ ನಿರ್ಮಾಣವಾಗಿದೆ. ಜೊತೆಗೆ ಈ ಶಾಲೆಯಲ್ಲಿ  ಮಕ್ಕಳ  ಆಟ
, ಪಾಠ, ಊಟ ಹಾಗೂ  ಓದಿಗೆ ತೊಂದರೆಗಳು ಎದುರಾಗಿವೆ.

 ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕೆ.ಬಿ. ರಂಗಸ್ವಾಮಿ ಮಾತನಾಡಿ ಇಡೀ ರಾತ್ರಿ ಸುರಿದ ಮಳೆಗೆ ಶಾಲೆಯ ಆವರಣ ನೀರಿನಿಂದ ಆವೃತವಾಗಿ, ಮಕ್ಕಳಿಗೆ ಅಡುಗೆ ತಯಾರಿಸುವ ಕೋಣೆಗೆ ನೀರು ಬಂದಿದ್ದು ಆತಂಕ ವ್ಯಕ್ತಪಡಿಸಿದೆ. ಈ ಶಾಲೆಯ ಆವರಣಕ್ಕೆ ಬಂದ ನೀರು ಹೊರಹೋಗಲು  ಯಾವುದೇ ನಿಗದಿತ ಸೌಲಭ್ಯವಿಲ್ಲ, ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯತ್ ಹಾಗೂ ಗ್ರಾಮದ ಸದಸ್ಯರ ಸಹಾಯದೊಂದಿಗೆ ನೀರನ್ನು ಹೊರ ಹಾಕುವ ವ್ಯವಸ್ಥೆಗೆ ಮನವಿ ಮಾಡಲಾಗಿದೆ. 

ಶಾಲೆಗೆ ಹಿಂದಿನ ಸಾಲಿನ ಅನುದಾನದಡಿಯಲ್ಲಿ ಸಿದ್ಧಗೊಂಡ ನಾಲ್ಕು ಹೊಸ  ಕಟ್ಟಡಗಳನ್ನು  ಬಳಸಲಾಗುತ್ತಿದೆ, ಜೊತೆಗೆ ಮಕ್ಕಳಿಗೆ ನೂತನ ಶೌಚಾಲಯ ಹಾಗೂ  ಅಡುಗೆ ಕೋಣೆ ಕಟ್ಟಡಗಳು ಪ್ರಗತಿಯಲ್ಲಿದೆ, ಈ ಕಾಮಗಾರಿ ಬೇಗನೆ ಆಗುವುದರಿಂದ ಇನ್ನಷ್ಟು ಸಮಸ್ಯೆಗಳು ಕಡಿಮೆಯಾಗುವ ಜೊತೆಗೆ ಈ ಶಾಲೆಗೆ ಇನ್ನು 2-3 ಕೊಠಡಿಗಳ ಅವಶ್ಯವಿದ್ದು. ಈ ಶಾಲೆಯ ಮೂಲ ಸಮಸ್ಯೆ ಚರಂಡಿ ನೀರು ಹೊರ ಹೋಗಲು ಜಾಗದ ಕೊರತೆ ಎದ್ದು ಕಾಣುತ್ತಿದೆ.

ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಚ್.ಆರ್. ಪ್ರದೀಪ್ ಮಾತನಾಡಿ ಪ್ರಾಥಮಿಕ ಶಾಲೆಯು ತಗ್ಗು ಪ್ರದೇಶದಲ್ಲಿದ್ದು ಈ ಆವರಣದಲ್ಲಿ ಈಗಾಗಲೇ ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದು, ಮಳೆ ನೀರು ಹೊರ ಹೋಗಲು, ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ, ಅಲ್ಲಿರುವ  ಸಣ್ಣ ಪುಟ್ಟ ಕೆಲಸಗಳನ್ನು ಸಹ ಸಂಪೂರ್ಣವಾಗಿ ಬಗೆಹರಿಸಲಾಗುವುದು.

ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ಎನ್. ಮೂರ್ತಿ ಮಾತನಾಡಿ ನೂತನವಾಗಿ ನಿರ್ಮಾಣವಾಗುತ್ತಿರುವ ಅಡುಗೆ ಕೋಣೆ ಹಾಗೂ ಶೌಚಾಲಯಗಳ ಕಟ್ಟಡಗಳ ಕೆಲಸ ಅರ್ಧಕ್ಕೆ ನಿಂತಿವೆ, ಸಮಯಕ್ಕೆ ಸರಿಯಾಗಿ ಅನುದಾನದಡಿ ಬಿಲ್ಲುಗಳು ಆಗದೆ ಇರುವ ಕಾರಣ ಕಾಮಗಾರಿ ಪ್ರಗತಿ ಕುಂಠಿತವಾಗಿದ್ದುಈ ಹಿನ್ನೆಲೆಯಲ್ಲಿ ಕಟ್ಟಡ ಕಾಮಗಾರಿಗಳು ಪೂರ್ಣಗೊಂಡು, ಅಡುಗೆ ಕೋಣೆ ಹಾಗೂ ಶೌಚಾಲಯಗಳು ಮಕ್ಕಳ ಬಳಕೆಗೆ ಬೇಗನೆ ಸಿಗುವಂತಾಗಲಿ.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ