Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಸ್‌ಡಿಪಿಐ ವತಿಯಿಂದ ರಂಜಾನ್ಇಫ್ತಾರ್ ಕೂಟ – ಸೌಹಾರ್ದತೆಯ ಸಂಕೇತ

Advertisement
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಮುಸ್ಲಿಂ ಬಂಧುಗಳು ರಂಜಾನ್ ಹಬ್ಬದ ಪ್ರಯುಕ್ತ ಇಫ್ತಾರ್ ಕೂಟವನ್ನು ಮುಸ್ಲಿಮರಿಗೆ, ಅನ್ಯ ಧರ್ಮದ ಸ್ನೇಹಿತರಿಗೆ ಶುಕ್ರವಾರ ಆಯೋಜಿಸಿದ್ದರು.

ಪವಿತ್ರ ಮಾಸದ ಅಂಗವಾಗಿ ಸಾಮಾಜಿಕ ಸೌಹಾರ್ದತೆಯ ಸಂದೇಶ ಸಾರುವ ಉದ್ದೇಶದಿಂದ ಎಸ್‌ಡಿಪಿಐ ವತಿಯಿಂದ ಇಫ್ತಾರ್ ಕೂಟ ಆಯೋಜಿಸಲಾಯಿತು. ಎಸ್‌ಡಿಪಿಐ ಅಧ್ಯಕ್ಷ ಜಮೀರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಇಫ್ತಾರ್ ಕೂಟದ ವಿಶೇಷ ಎಂದರೆ ಸರ್ವ ಧರ್ಮದವರು, ರಾಜಕೀಯ ಪಕ್ಷಗಳ ಮುಖಂಡರು, ಸ್ನೇಹಿತರು, ಬಂಧು ಬಳಗದವರು ಇಫ್ತಾರ್ ಕೂಟದಲ್ಲಿ  ಭಾಗವಹಿಸಿದ್ದರು.
ಈ ಕೂಟದಲ್ಲಿ
, ಮುಸ್ಲಿಮರು ದಿನವಿಡೀ ಉಪವಾಸ ಮಾಡಿದ ನಂತರ ಸೂರ್ಯಾಸ್ತಮದ ನಂತರ ತಮ್ಮ ಉಪವಾಸ ಮುರಿದು ಎಲ್ಲರೊಂದಿಗೆ ಬೋಜನ ಸವಿದರು.

ಇಫ್ತಾರ್ ಕೂಟದಲ್ಲಿ, ಮುಸ್ಲಿಮರು ಸಾಮಾನ್ಯವಾಗಿ ಖರ್ಜೂರ, ನೀರು, ಮತ್ತು ಇತರ ಪೌಷ್ಟಿಕ ಆಹಾರಗಳನ್ನು ಸೇವಿಸುತ್ತಾರೆ. ಈ ಕೂಟವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸೇರಿ ಆಹಾರವನ್ನು ಹಂಚಿಕೊಳ್ಳಲು ಮತ್ತು ಒಟ್ಟಿಗೆ ಪ್ರಾರ್ಥಿಸಲು ಒಂದು ಅವಕಾಶ ಒದಗಿಸಿಕೊಟ್ಟಿತು.
ಈ ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಧರ್ಮಗುರುಗಳು ಹಾಗೂ ಸಮಾಜದ ಗಣ್ಯರು ಭಾಗವಹಿಸಿ ಸಹೋದರತ್ವ, ಏಕತೆ ಮತ್ತು ಸೌಹಾರ್ದತೆಯ ಮಹತ್ವ ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ಸ್ವಾಮಿ ಶಿವಮುನಿ ಅವರು, ಕ್ರೈಸ್ತ ಧರ್ಮಗುರು ಫಾದರ್ ಸತ್ಯೇಂದ್ರ ಪ್ರಕಾಶ್ ಹಾಗೂ ಮುಸ್ಲಿಂ ಧರ್ಮಗುರು ಸಿಗ್ಬತುಲ್ಲಾ ಹಜ್ರತ್ ಅವರು ಉಪಸ್ಥಿತರಿದ್ದರು.

ಜಾಮಿಯಾ ಮಸೀದಿ ಮುತ್ತವಲ್ಲಿಗಳಾದ ಸಯ್ಯದ್ ಮುನೀರ್ ಮುಲ್ಲಾ, ಜಾಮಿಯಾ ಮಸೀದಿ ಸದಸ್ಯರಾದ ನೂರೊಲ್ಲಾ ಮತ್ತು ಮುಬಾರಕ್, ಮಸೀದಿ ಮುತ್ತವಲ್ಲಿಗಳಾದ ಜಬೀ, ಕಾಂಗ್ರೆಸ್ ಮುಖಂಡ ನೌಶಾದ್ ಭಾಯಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇಫ್ತಾರ್ ಕೂಟದ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವವನ್ನು ಬೆಳೆಸುವ ಸಂದೇಶವನ್ನು ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಲಾಯಿತು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ