Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತೀಯ ಕಿಸಾನ್ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

Advertisement
ಭಾರತೀಯ ಕಿಸಾನ್ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ಭಾರತೀಯ ಕಿಸಾನ್ ಸಂಘದ ನೂತನ ಪದಾದಿಕಾರಿಗಳನ್ನು ಕರ್ನಾಟಕ ದಕ್ಷಿಣಾ ಪ್ರಾಂತ್ಯ ಪ್ರಮುಖ ನಾರಾಯಣ ಸ್ವಾಮಿ ರವರ ಮಾರ್ಗದರ್ಶನದಲ್ಲಿ ಅಯ್ಕೆ ಮಾಡಲಾಯಿತು.

ನಗರದ ಪ್ರವಾಸಿ ಮಂದಿರದಲ್ಲಿ ಅಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಕಿಸಾನ್ ಸಂಘ ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪದಾಧಿಕಾರಿಗಳನ್ನು ಸಂಘದ ಬೈಲ ಪ್ರಕಾರ ಮೂರು ವರ್ಷಗಳಿಗೊಮ್ಮೆ ಹೊಸ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ಚುನಾವಣಾ ಅಧಿಕಾರಿಯಾಗಿ ಭಾರತೀಯ ಕಿಸಾನ್ ಸಂಘ ಪ್ರಮುಖ ಅಂಜಿನಪ್ಪ ರವರು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.

ಸಂಘದ ಸದಸ್ಯರ ಕೈ ಎತ್ತುವ ಮೂಲಕ ಆಯ್ಕೆ ಮಾಡಲಾಗಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ತಾಲ್ಲೂಕು ಅಧ್ಯಕ್ಷರಾಗಿ ದಡಘಟ್ಟ ಮಡುಗು ಗ್ರಾಮದ ಮದ ಡಿ.ಕೆ ಸಂಪತ್ ಕುಮಾರ್ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಗುಂಡಪ್ಪನಾಯಕನಹಳ್ಳಿಯ ರಾಜಕುಮಾರ್ ಜಿ.ಕೆ, ಪ್ರಧಾನ ಕಾರ್ಯದರ್ಶಿಯಾಗಿ ರಾಜ ಘಟ್ಟ ಗಣೇಶ , ಸಹ ಕಾರ್ಯದರ್ಶಿಯಾಗಿ ಲಕ್ಷ್ಮೀದೇವಿ, ರಾಧಮಣಿ ಮಹಿಳಾ ಪ್ರಮುಖರಾಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ದಕ್ಷಿಣಾ ಪ್ರಾಂತ್ಯ ಪ್ರಮುಖ್ ನಾರಾಯಣ ಸ್ವಾಮಿ ರವರು ಮಾತನಾಡಿ ಭಾರತ ದೇಶದಲ್ಲಿ ಇಪ್ಪತೈದು ಸಾವಿರಕೂ ಸಂಘಟನೆ ಗಳಿಗಿಂತ ಹೆಚ್ಚು ಇವೆ ಅದರೆ ಅವುಗಳೆಲ್ಲಾ ವ್ಯಕ್ತಿ ಆಧಾರಿತ ಸಂಘಗಳಾಗಿದ್ದು ಸ್ಥಾಪನೆ ಮಾಡಿದ ವ್ತಕ್ತಿ ಇರುವವರೆಗೂ ಆ ಸಂಘ ಕಾರ್ಯ ರೂಪದಲ್ಲಿ ಇರುತ್ತೆ ಆ ವ್ಯಕ್ತಿ ಸಾವನ್ನಪ್ಪಿದ ನಂತರ ಆ ಸಂಘ ಅಸ್ಥಿತ್ವವನ್ನು ಕಳೆದು ಕೊಳ್ಳುತ್ತವೆ.ಆದರೆ ಭಾರತೀಯ ಕಿಸಾನ್ ಸಂಘ ಯಾರೆ ಇರಲಿ ಯಾರೆ ಬರಲಿ ಇದು ಕಾರ್ಯ ರೂಪದಲ್ಲಿ ಇರುತ್ತದೆ. ಈ ಸಂಘ ಸ್ಥಾಪನೆ ಯಾಗಿದ್ದು 1979 ಮಾರ್ಚ್ 4 ರಂದು ರಾಜಸ್ಥಾನದ ಕೋಟಾದಲ್ಲಿ. ಇಂದಿನ ದಿನಗಳಲ್ಲಿ ದೇಶ ಮೂಲೆ ಮೂಲೆಗಳಲ್ಲಿ ಗ್ರಾಮ ತಾಲ್ಲೂಕು ಜಿಲ್ಲೆಗಳಲ್ಲಿ ತಂಡಗಳನ್ನು ರಚನೆ ಮಾಡಿ ರೈತ ಸಮಸ್ಯೆ ಸೂಕ್ತ ಪರಿಹಾರ ಮಾಡುವುದು ಈ ಸಂಘದ ಉದ್ದೇಶವಾಗಿದೆ ಎಂದು ಹೇಳಿದರು.

ನಂತರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಕೆ ಸಂಪತ್ ಕುಮಾರ್ ಮಾತನಾಡಿ ನನ್ನನ್ನು ಗುರುತಿಸಿ ಭಾರತೀಯ ಕಿಸಾನ್ ಸಂಘದ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ರೈತರ ಸೇವೆ ಮಾಡಲು ಅನುವು ಮಾಡಿಕೊಟ್ಟಂತಹ ಭಾರತೀಯ ಕಿಸಾನ್ ಸಂಘದ ಎಲ್ಲಾ ಪ್ರಮುಖರಿಗೂ ಧನ್ಯವಾದಗಳು. ನನಗೆ ನೀಡಿದ ಜವಾಬ್ದಾರಿಯನ್ನು ಶ್ರದ್ಧಾಪೂರ್ವಕವಾಗಿ ನಿಭಾಯಿಸುತ್ತೇನೆ. ಸದಾ ರೈತರ ಪರವಾಗಿ ಇರುತ್ತೇನೆ ಎಂದು ಹೇಳಿದರು.

ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಜಿ.ಕೆ ರಾಜ್ ಕುಮಾರ್ ಮಾತನಾಡಿ ನನಗೆ ತಾಲ್ಲೂಕು ಘಟಕದ ಉಪಾಧ್ಯಕ್ಷರಾಗಿ ನೇಮಕ ಮಾಡಿರುವುದಕ್ಕೆ ಎಲ್ಲಾ ಪ್ರಮುಖರಿಗೂ ಧನ್ಯವಾದಗಳು. ಭಾರತೀಯ ಕಿಸಾನ್ ಸಂಘ ಒಂದು ಹೆಮ್ಮರ. ಇಂತಹ ಸಂಘದಲ್ಲಿ ಕೆಲಸ ಮಾಡುವುದು ನನ್ನ ಅದೃಷ್ಟ.ಇನ್ನು ಮುಂದೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆಗೂಡಿ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರತಿಯೊಂದು ಹಳ್ಳಿಯಲ್ಲೂ ಭಾರತೀಯ ಕಿಸಾನ್ ಸಂಘ ಮೊಳಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘ ದಕ್ಷಿಣಾ ಪ್ರಾಂತ್ಯದ ಪ್ರಮುಖ್ ಪುಟ್ಟಸ್ವಾಮಿ ಗೌಡ, ದೊಡ್ಡಬಳ್ಳಾಪುರದ ನಿಕಟ ಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್, ಕಾರ್ಯದರ್ಶಿ ಹರಿಕುಮಾರ್ ,ಜಿಲ್ಲಾ ಮಹಿಳ ಪ್ರಮುಖ್ ಅಂಬಿಕಾ ಹಾಗು ಜಿಲ್ಲಾ ತಾಲ್ಲೂಕು ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ