Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಥ ಸಪ್ತಮಿ ಶನೇಶ್ವರ ದೇವಾಲಯದಲ್ಲಿ ಶನೇಶ್ವರ ಜಯಂತಿ ಆಚರಣೆ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಗರದ ಖಾಸ್‍ಬಾಗ್ ದರ್ಗಾಪುರದಲ್ಲಿನ ಶ್ರೀ ರಥಸಪ್ತಮಿ ಶನೇಶ್ವರ ಸ್ವಾಮಿ ದೇವಾಲಯದಲ್ಲಿ
ರಜತ ಮಹೋತ್ಸವ  ಹಾಗೂ ಶ್ರೀ ಶನೇಶ್ವರ ಜಯಂತಿ ಶ್ರದ್ಧಾ ಭಕ್ತಿ ಸಂಭ್ರಮಗಳಿಂದ ನೆರವೇರಿತು. 

ಕಾರ್ಯಕ್ರಮದ ಅಂಗವಾಗಿ ಅಭಿಷೇಕ, ಬೆಳ್ಳಿ ಕವಚ ಧಾರಣೆ, ಶನೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮ ನಡೆಯಿತು.  ಮಕರ, ಕುಂಭ, ಮೀನ ರಾಶಿಯವರಿಗೆ ವಿಶೇಷವಾಗಿ ಶನೇಶ್ವರ ಶಾಂತಿ ತಿಲ ಹೋಮ ಹಮ್ಮಿಕೊಳ್ಳಲಾಗಿತ್ತು. 

ಈ ಸಂದರ್ಭದಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಪಸೀಹಳ್ಳಿ ಯ ಪುಷ್ಪಾಂಡಜ ಆಶ್ರಮದ ದಿವ್ಯ ಜ್ಞಾನಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಯಜ್ಞ ಎಂದರೆ ಜಾಗೃತಿ ಎಂದು ಅರಿಯ ಬೇಕಿದ್ದು, ದೇವಾಲಯಗಳಲ್ಲಿ ಬಂದು ಹೋಗುವಾಗ ನಮ್ಮ ಮನಸ್ಸುಗಳ ಪರಿವರ್ತನೆಯಾಗಿ, ಸಮಾಜ ಮುಖಿ ಚಿಂತನೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಜ್ಞಾನ, ಕರ್ಮ, ಉಪಾಸನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಪ್ರಕೃತಿಯಲ್ಲಿ ಭಗವಂತನನ್ನು ನಾವು ವಿವಿಧ ರೀತಿಗಳಲ್ಲಿ ಆರಾಸುತ್ತಿದ್ದರೂ, ಬೇರೆ, ಬೇರೆ ಹೆಸರು ಗಳಿದ್ದರೂ ನಮ್ಮ ಭಕ್ತಿ ಸಮರ್ಪಣೆ ಯಾಗುವುದು ಭಗವಂತನಿಗೆ.

ದೇವಾಲಯಗಳಿಗೆ ಬಂದು ನಮ್ಮ ಜಡತ್ವ, ನಕಾರಾತ್ಮಕ ಚಿಂತನೆಗಳನ್ನು ಬಿಟ್ಟು, ಒಳ್ಳೆಯ ಆಲೋಚನೆಗಳ ಮರು ಪೂರಣ ಮಾಡಿಕೊಳ್ಳಬೇಕು. ಸರಿ,ತಪ್ಪುಗಳ ವಿವೇಚನೆ ಇರಬೇಕು. ಮಾನವೀಯತೆಯನ್ನು ನಾವು ಮರೆಯಬಾರದು.  ಧಾರ್ಮಿಕ ಕಾರ್ಯಗಳ ಜೊತೆಗೆ ಪ್ರಕೃತಿಯನ್ನು ಉಳಿಸುವ ಕೆಲಸ ವಾಗಬೇಕಿದ್ದು, ಹುಟ್ಟು ಹಬ್ಬ ಮೊದಲಾದ ಸಂದರ್ಭಗಳಲ್ಲಿ ಸಸಿವ ನೆಟ್ಟು ಪರಿಸರ ಸಂರಕ್ಷಿಸುವ, ಪರಿಸರವನ್ನು ಸ್ವಚ್ಛವಾಗಿ ಟ್ಟುಕೊಳ್ಳುವ ಕಾರ್ಯ ಕೈಗೊಳ್ಳಬೇಕು ಎಂದರು.

ಈ ವೇಳೆ ಶ್ರೀ ರಥಸಪ್ತಮಿ ಶನೇಶ್ವರ ಸ್ವಾಮಿ ದೇವಾಲಯ ಸಮಿತಿಯ ಅಧ್ಯಕ್ಷ ಡಿ.ಎನ್.ದೊಡ್ಡನರಸಪ್ಪ, ಉಪಾಧ್ಯಕ್ಷ ಪೈಲ್ವಾನ್ ಶ್ರೀನಿವಾಸ್, ಪ್ರಧಾನ ಅರ್ಚಕ ಹಾಗೂ ಸಂಸ್ಥಾಪಕ ಎಂ.ಪುಟ್ಟಯ್ಯ, ಮುಖ್ಯ ಸಲಹೆಗಾರ ಎಂ.ಎಸ್.ಮಂಜುನಾಥ್, ವ್ಯವಸ್ಥಾಪಕ ಹಾಗೂ ಅರ್ಚಕ ಪು.ಮಹೇಶ್, ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನ ಕುಂಟೆ ಮೊದಲಾದವರು ಹಾಜರಿದ್ದರು. 

ಕಾರ್ಯಕ್ರಮದ ಅಂಗವಾಗಿ ಗಂಗಾಧರಯ್ಯ ಅವರಿಂದ ಹರಿಕಥೆ, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮಗಳು ನಡೆದವು. ಸಂಜೆ ಲಲಿತಾ ಸಹಸ್ರನಾಮ, ಪ್ರಾಕಾರೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಕನಕಾಭಿಷೇಕ ಭಜನೆ ಕಾರ್ಯಕ್ರಮಗಳು ನಡೆದವು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ