Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿವರಾತ್ರಿ ಪ್ರಯುಕ್ತ ಬ್ರಹ್ಮಕುಮಾರಿ ವಿವಿ ವತಿಯಿಂದ ಮೂರು ದಿನ ಶಿವನಾಮಸ್ಮರಣೆ:ವಿಮಲಕ್ಕ

Advertisement
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಪ್ರತಿವರ್ಷದಂತೆ ಈ ವರ್ಷವೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮೂರು ದಿನಗಳ ಕಾಲ ೮೯ನೇ ಶಿವರಾತ್ರಿ ಉತ್ಸವ ಹಬ್ಬವನ್ನು ಭಕ್ತಿ
, ಶ್ರದ್ದೆಯಿಂದ ವಿವಿಧ ಹಂತದಲ್ಲಿ ಆಚರಿಸಲು ನಿರ್ಧರಿಸಿದ್ದು, ಶಿವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಶಿವನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸಂಚಾಲಕಿ ಬಿ.ಕೆ.ವಿಮಲಕ್ಕ ತಿಳಿಸಿದರು.

ಅವರು, ಭಾನುವಾರ ಕಾರ್ಯಾಲಯದ ಆವರಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಶಿವರಾತ್ರಿ ಹಬ್ಬಕ್ಕೆ ತನ್ನದೇಯಾದ ವಿಶೇಷತೆ, ವೈವಿಧ್ಯತೆ ಇದೆ. ಕೇವಲ ತಮ್ಮ ದೇಶದ ಶಿವಭಕ್ತರು ಮಾತ್ರ ಶಿವನನ್ನು ಆರಾಧಿಸುತ್ತಿದ್ದರು. ಆದರೆ, ಈಗ ಶಿವರಾತ್ರಿ ಹಬ್ಬ ಅಂತರಾಷ್ಟ್ರೀಯ ಮಾನ್ಯತೆ ಪಡೆದಿದ್ದು, ಅಮೇರಿಕ, ದಕ್ಷಿಣಅಮೇರಿಕ, ಇರಾನ್, ಆಸ್ಟ್ರೀಯ, ಈಜೀಪಿಟ್, ಫ್ರಾನ್ಸ್, ಚೀನಾ, ಗ್ರೀಕ್, ಯುರೋಫ್‌ನಂತರ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಶಿವನ ಆರಾಧನೆ ನಡೆಯುತ್ತಿದೆ.

 ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಫೆ.೨೫ರ ಮಂಗಳವಾರ ಸಂಜೆ ೬ಕ್ಕೆ ಶಿವರಾತ್ರಿ ಮಹೋತ್ಸವವನ್ನು ರೈತ ಸಶಕ್ತಿಕರಣ ಉತ್ಸವವಾಗಿ ಆಚರಣೆ ಮಾಡುತ್ತಿದ್ದು, ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಕಾರ್ಯಕ್ರಮ ಉದ್ಘಾಟಿಸುವರು. ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ, ತಹಶೀಲ್ದಾರ್ ರೇಹಾನ್‌ಪಾಷ, ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ, ಸಹಾಯಕ ಕೃಷಿ ಅಧಿಕಾರಿ ಜೆ.ಅಶೋಕ್, ಪೌರಾಯುಕ್ತ ಎಚ್.ಜಿ.ಜಗರೆಡ್ಡಿ, ರೇಷ್ಮೆ ವಿಸ್ತರಣಾಧಿಕಾರಿ ಉಮಾಪತಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. 

ಪ್ರತಿವರ್ಷದಂತೆ ಈ ವರ್ಷವೂ ಸಹ ಪ್ರದಕ್ಷಣೆಯ ಲಿಂಗದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಪ್ರತಿದಿನ ಸಂಜೆ೬ರಿಂದ೧೦ತನಕ ಭಕ್ತಾಧಿಗಳು ಲಿಂಗದರ್ಶನಕ್ಕೆ ಅವಕಾಶವಿದೆ. ಜ್ಯೋರ್ಲಿಂಗದರ್ಶನ, ಸ್ವಪರಿವರ್ತನೆಯ ಮಂಟಪ, ಪರಮಾತ್ಮನು ಸರ್ವವ್ಯಾಪಿಯೇ, ಆಧ್ಯಾತ್ಮಿಕ ಜಾದುಪ್ರದರ್ಶನ, ಶಿವನೊಂದಿಗೆ ಸ್ಪೇಲ್ಪಿ ಪಾಯಿಂಟ್ ವ್ಯವಸ್ಥೆ ಕಲ್ಪಿಸಿದೆ.

ಫೆ.೨೬ರ ಬುಧವಾರ ಸಂಜೆ ೬ಕ್ಕೆ ಆಧ್ಯಾತ್ಮಿಕ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿವಿಧ ಶಾಲಾಮಕ್ಕಳಿಂದ ದೇವರನಾಮಸ್ಮರಣೆ, ಗೀತೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.೨೭ಗುರುವಾರ ಈಶ್ವರಿ ಅಭಿನಂದನಾಉತ್ಸವ ಹಾಗೂ ಮುಕ್ತಿ, ಜೀವನ್ಮುಕ್ತಿ ಪ್ರಪ್ತಿ ವಿಷಯ ಕುರಿತು ವಿಶೇಷ ಕಾರ್ಯಗಾರ ಹಾಗೂ ವಿವಿಧ ದೇವಸ್ಥಾನಗಳ ಪುರೋಹಿತರು, ಪೂಜಾರಿಗಳು,

ಜೋಯಿಷರಿಗೆ ಈಶ್ವರಿಯ ಸನ್ಮಾನ, ಭಾರತೀಯ ಪರಂಪರೆಯನ್ನು ರಕ್ಷಿಸುತ್ತಿರುವ ಭಕ್ತಪರಂಪರೆಗೆ ಗೌರವ ಅರ್ಪಿಣೆ ಕಾರ್ಯಕ್ರಮ ಇರಲಿದೆ. ಇಒ ಎಚ್.ಶಶಿಧರ, ತಳಕು ವೃತ್ತ ನಿರೀಕ್ಷ ಹನುಮಂತಪ್ಪ ಎಂ.ಶಿರೇಹಳ್ಳಿ, ಎಸ್‌ಬಿಐ ಮುಖ್ಯವ್ಯವಸ್ಥಾಪಕ ಎಂ.ನರೇಶ್‌ರೆಡ್ಡಿ, ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಪತ್ರಿಕಾಗೋಷ್ಠಿಯಲ್ಲಿ ಪ್ರಜಾಪಿತಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಎಂ.ಎಸ್.ರಾಧ, ಓಂಕಾರಮ್ಮ, ಲಲಿತಮ್ಮ, ಚೂಡಾಮಣಿ ಮುಂತಾದವರು ಇದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ