Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತಮ್ಮ ರಕ್ಷಣೆಗೆ ಅಹಿಂದ ಮತ್ತು ಜಾತಿ ಗಣತಿ ಇಟ್ಟುಕೊಂಡಿರುವ ಸಿದ್ದರಾಮಯ್ಯ

Advertisement
ಚಂದ್ರವಳ್ಳಿ ನ್ಯೂಸ್, ಮೈಸೂರು:
ತಮ್ಮ ರಕ್ಷಣೆಗೆ ಅಹಿಂದ ಮತ್ತು ಜಾತಿ ಗಣತಿಯನ್ನು ಸಿದ್ದರಾಮಯ್ಯ ಇಟ್ಟುಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.


ನಗರದ ಜಲದರ್ಶಿನಿಯಲ್ಲಿ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬರೀ ಬುರುಡೆ ಬಿಟ್ಟುಕೊಂಡು ಓಡಾಡುವ ಸಿದ್ದರಾಮಯ್ಯ ಜಾತಿಗಣತಿ ವರದಿ ಓದಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ತಮ್ಮ ರಕ್ಷಣೆಗಾಗಿ ಅಹಿಂದ ಕಾರ್ಡ್, ಜಾತಿಗಣತಿ ಕಾರ್ಡ್ ಇಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯ ಅವರದ್ದು ಬರೀ ಉತ್ತರನ ಪೌರುಷ ಅಷ್ಟೇ ಎಂದು ವಿಶ್ವನಾಥ್ ವಾಗ್ದಾಳಿ ಮಾಡಿದರು.

ಜಾತಿ ಗಣತಿ ಕ್ಯಾಬಿನೆಟ್​ ಅಲ್ಲಿ ತೀರ್ಮಾನ ಅಂದ್ರು ಏನಾಯ್ತು? ಸಿದ್ದರಾಮಯ್ಯ ಅವರೇ ಮೊದಲು ಜಾತಿಗಣತಿ ವರದಿ ಬಿಡುಗಡೆ ಮಾಡಿ. ಕರ್ನಾಟಕಕ್ಕೆ ನೀವೇ ಹೈಕಮಾಂಡ್, ನಿಮಗೆ ಹೈಕಮಾಂಡ್ ಹೆದರುತ್ತೆ. ಅಹಿಂದ, ಅಹಿಂದ ಅಂತೀರಾ ಜಾತಿಗಣತಿ ವರದಿ ಬಿಡುಗಡೆ ಮಾಡಿ. ನೀವು ಜಾತಿ ಗಣತಿ ವರದಿಯನ್ನು ನಿಮ್ಮ‌ರಕ್ಷಣೆಗೆ ಇಟ್ಟುಕೊಂಡಿದ್ದೀರಾ. 10 ವರ್ಷದಿಂದ ಏಕೆ ಇಟ್ಟುಕೊಂಡಿದ್ದೀರಾ? ಅದನ್ನು ಸಾರ್ವಜನಿಕ ಚರ್ಚೆಗೆ ಬಿಡಿ‌‌. ಅದನ್ನು ಬಿಟ್ಟು ಸುಮ್ಮನೇ ಏಕೆ ಮಾತನಾಡುತ್ತೀರಾ? ವರದಿಯನ್ನು ಬಹಿರಂಗ ಮಾಡಿ ಅಧಿಕಾರದ ಕೊನೆಯಲ್ಲಿ ಇದ್ದೀರಿ, ಬಿಡುಗಡೆ ‌ಮಾಡಿ ಎಂದು ಆಗ್ರಹ ಮಾಡಿದರು.

ರಾಜ್ಯ ಸರ್ಕಾರದಲ್ಲಿ ಹಸುವಿನ ಕೆಚ್ಚಲು ಕೊಯ್ಯುವ ಸ್ಥಿತಿಗೆ ಬಂದಿದೆ. ಗೋಮಾತೆಯನ್ನು ಈ ಮಟ್ಟಿಗೆ ತಂದ್ರಲ್ಲ ಸಿದ್ದರಾಮಯ್ಯನವರೇ? ಮೈಸೂರಲ್ಲೇ ಲೂಟಿ ಮಾಡಿದ ಅಧಿಕಾರಿಗಳನ್ನು ಏನು ಮಾಡಿದ್ರಿ. 5 ಸಾವಿರ ಕೋಟಿ ನುಂಗಿದವರನ್ನು, ಸೈಟುಗಳನ್ನು ಕದ್ದವರನ್ನು, ನಿಮ್ಮ ಕೈಯಲ್ಲಿ ಏನು ಮಾಡೋದಕ್ಕೆ ಆಗ್ಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ವಾಗ್ದಾಳಿ ಮಾಡಿದರು.

ಮುಡಾದಲ್ಲಿ ಕೆಟ್ಟ ಅಧಿಕಾರಿಗಳು ಹಣ ನುಂಗಿದ್ದಾರೆ. 1 ಸಾವಿರಕ್ಕೆ ಸೈಟ್ ಪಡೆದಿದ್ದಾರೆ. ಸಿಎಂಗೆ ಇದರ ಬಗ್ಗೆ ಮಾತನಾಡುವ ದಮ್ಮಿಲ್ಲ. ಏಕೆಂದರೆ ನೀವು ಕೂಡ ಅಕ್ರಮದಲ್ಲಿ‌ಭಾಗಿಯಾಗಿದ್ದೀರಿ ಅಲ್ಲವೇ? ನಿಮ್ಮ ಸರ್ಕಾರ ವಿಜಯನಗರದ ಕಾಲದ ವೈಭವದ ಕಾಲ ಅನ್ಕೋಬೇಕು ಅಷ್ಟೇ ಎಂದು ಸಿಎಂ ವಿರುದ್ದ ಅವರು ವಾಗ್ದಾಳಿ ನಡೆಸಿದರು.

ದುರಹಂಕಾರ ಒಳ್ಳೆಯದಲ್ಲ: ಹಗರಿ ಬೊಮ್ಮನಹಳ್ಳಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವಾಕರ್ ಅವರನ್ನು ಎದ್ದು ಹೋಗಿ ಹಿಂದೆ ಎಂದಿದ್ದ ಸಿಎಂಗೆ ವಿಧಾನ ಪರಿಷತ್‌ಸದಸ್ಯ ವಿಶ್ವನಾಥ್‌ದುರಹಂಕಾರ ಒಳ್ಳೆಯದಲ್ಲ ಎಂದು ಎಚ್ಚರಿಸಿದರು.
ಸ್ವಾಮೀಜಿಗಳು
, ಎಲ್ಲಾ ಧರ್ಮದ ಮುಖಂಡರು, ಜಿಲ್ಲಾಧಿಕಾರಿಗಳು‌ಕೂಡ ಆ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದರು.

ಸಿದ್ದರಾಮಯ್ಯ ಮದುವೆ ಮನೆಯಲ್ಲಿ ಭಾಷಣ ಮಾಡುವ ಸಮಯದಲ್ಲಿ ಹೇಯ್ ಯಾರು ನೀನು, ಯಾಕೆ ಬಂದಿದ್ದೀಯಾ ಎಂದು ಏಕವಚನದಲ್ಲಿ ಹಿಂದೆ ಹೋಗು ಅಂದ್ರು. ಇದು ಡಿಸಿಗೆ ಮಾಡಿದ ಅವಮಾನ‌‌. ಇದನ್ನು ನೋಡಿ ಅವರ ಹಿಂಬಾಲಕರು ಸಿದ್ದರಾಮಯ್ಯಗೆ ಜೈ. ಪಾಪ ಆ ಡಿಸಿಗೆ ಎಷ್ಟು ನೋವಾಗಿರಬೇಡ ಎಂದು ವಿಶ್ವನಾಥ್ ಪ್ರಶ್ನಿಸಿದರು.
ಕರ್ನಾಟಕ ಕಂಡ ಬಹುದೊಡ್ಡ ಹಿಂದುಳಿದ ನಾಯಕ ದೇವರಾಜ್ ಅರಸು.


ಅವರಿಗಿಂತ ದೊಡ್ಡ ಲೀಡರ್ ಅಲ್ಲಪ್ಪ ಸಿದ್ದರಾಮಯ್ಯ ನೀನು‌. ಜನ ಅವಕಾಶ ಕೊಟ್ಟಿದ್ದಾರೆ ಸರಿಯಾಗಿ ಬಳಸಿಕೊಳ್ಳಿ. ಅದನ್ನು ಬಿಟ್ಟು ದುರಹಂಕಾರ ಒಳ್ಳೆಯದಲ್ಲ. ಅದು ಖಾಸಗಿ ಕಾರ್ಯಕ್ರಮ ಆಗಿತ್ತು. ಅಲ್ಲಿ‌ಯಾವುದೇ ಸರ್ಕಾರಿ ಪ್ರೋಟೋಕಾಲ್ ಇರಲಿಲ್ಲ. ಅಲ್ಲಿ ಇದ್ದ‌ರಾಜಕಾರಣಿಗಳು ಕೂಡ ಸಿಎಂ ಸಿದ್ದರಾಮಯ್ಯಗೆ ಏನು ಪ್ರತಿಕ್ರಿಯೆ ನೀಡಲಿಲ್ಲ‌‌. ಜಿಲ್ಲಾಧಿಕಾರಿಗಳ‌ರಕ್ಷಣೆಗೆ ಯಾರು‌ಹೋಗಲಿಲ್ಲ.

ಇಡೀ ಸರ್ಕಾರದ ಅಧಿಕಾರಿಗಳನ್ನು ಅಧೀರರನ್ನಾಗಿ ಮಾಡುವಂತಹ ಪ್ರಯತ್ನ ಸಿಎಂ ಸಿದ್ದರಾಮಯ್ಯ ಅವರಿಂದಲೇ ಆಗುತ್ತಿದೆ. ಇದು ಖಂಡನೀಯ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಹರಿಹಾಯ್ದರು. ಅಹಿಂದ ವರ್ಗ ನಿಮಗೆ ಎಲ್ಲ ಕೊಟ್ಟಿದೆ. ಆದರೆ ಅಹಿಂದ ವರ್ಗಕ್ಕೆ ಸಿದ್ದರಾಮಯ್ಯ ಕೊಡುಗೆ ಏನೂ ಇಲ್ಲ.

ಕುರುಬ ಸಮಾಜಕ್ಕೆ ಏನು ಕೊಡುಗೆ ಕೊಟ್ಟಿಲ್ಲ. ಕುರುಬರ ರೆಪ್ರೆಸೆಂಟೇಟಿವ್ ಆಗಿ ಬೈರತಿ ಸುರೇಶ್ ಅವರನ್ನು ಇಟ್ಟುಕೊಂಡಿದ್ದಾರೆ‌. ಆದರೆ ಏನು ಕೊಡುಗೆ ಇಲ್ಲ. ಸಮಾಜಕ್ಕೆ ಒಂದು ಇಂಜಿನಿಯರಿಂಗ್ ಕಾಲೇಜು ಕೊಡಲಿಲ್ಲ‌ಎಂದು ಸಚಿವ ಬೈರತಿ ಸುರೇಶ್‌ವಿರುದ್ಧವೂ ವಿಶ್ವನಾಥ್ ವಾಗ್ದಾಳಿ ಮಾಡಿದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ