Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪತ್ನಿ ನರ್ಸ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆ್ಯಸಿಡ್ ಎರಚಿದ ಪಾಪಿ ಪತಿ!

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿಯ ಜೆ.ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಕೃತ ಮನಸ್ಥಿತಿಯ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ
, ಬಳಿಕ ಆ್ಯಸಿಡ್ ಎರಚಿ ಅಮಾನವೀಯ ಕೃತ್ಯ ಎಸಗಿರುವ ಭಯಾನಕ ಘಟನೆ ಬೆಳಕಿಗೆ ಬಂದಿದೆ.

ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಕೋಲ್ಕತ್ತಾ ಮೂಲದ ಮಧುಮಿತ (26) ಎಂದು ಗುರುತಿಸಲಾಗಿದೆ.

Advertisement

ನೆಲೆ ಮತ್ತು ಉದ್ಯೋಗ: ಮಧುಮಿತ ಅವರು ಬೆಂಗಳೂರಿನ ನಾರಾಯಣ ಕ್ಲಿನಿಕ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.
ದಾಳಿಯ ಸಮಯ: ಗುರುವಾರ ಬೆಳಗ್ಗೆ ಸುಮಾರು
9:15ರ ಸುಮಾರಿಗೆ ಮಧುಮಿತ ಅವರು ತಿಂಡಿ ತಿನ್ನಲು ಆಸ್ಪತ್ರೆಯಿಂದ ಹೊರಬಂದಾಗ ಈ ಕೃತ್ಯ ನಡೆದಿದೆ.

ಪತಿಯ ಕೃತ್ಯ: ಪೂರ್ವಯೋಜಿತವಾಗಿ ಬೈಕ್‌ನಲ್ಲಿ ಬಂದ ಆರೋಪಿ ಪತಿ ವೆಂಕಟೇಶ್, ಚಾಕು, ಮಚ್ಚು ಹಾಗೂ ಆ್ಯಸಿಡ್ ಅನ್ನು ಸಿದ್ಧಪಡಿಸಿಕೊಂಡು ಬಂದಿದ್ದನು. ಪತ್ನಿಯನ್ನು ಅಟ್ಟಾಡಿಸಿಕೊಂಡು ಹೋಗಿ ಆಸ್ಪತ್ರೆಯ ಪಾರ್ಕಿಂಗ್ ಜಾಗದಲ್ಲಿ ಮಚ್ಚಿನಿಂದ ಮನಬಂದಂತೆ ಹಲ್ಲೆ ನಡೆಸಿ, ನಂತರ ಮುಖ ಹಾಗೂ ದೇಹದ ಮೇಲೆ ಆ್ಯಸಿಡ್ ಎರಚಿದ್ದಾನೆ.

ಸ್ಥಳೀಯರ ಧೈರ್ಯ ಹಾಗೂ ಪೊಲೀಸರ ಸಮಯಪ್ರಜ್ಞೆ: ಮಹಿಳೆಯು ಕಿರುಚಿಕೊಳ್ಳುತ್ತಿದ್ದಂತೆ ರಕ್ಷಣೆಗೆ ಧಾವಿಸಿದ ಸ್ಥಳೀಯರ ಮೇಲೆಯೂ ಆರೋಪಿ ಹಲ್ಲೆಗೆ ಮುಂದಾಗಿದ್ದಾನೆ. ಸ್ಥಳದಲ್ಲಿದ್ದ ಕೆಲವರು ಧೈರ್ಯ ಮಾಡಿ ಕಲ್ಲಿನಿಂದ ಹೊಡೆದು ಆತನನ್ನು ತಡೆಯಲು ಯತ್ನಿಸಿದರು.

ಇದೇ ವೇಳೆ, ಸಮೀಪದ ಸಿಗ್ನಲ್‌ನಲ್ಲಿ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ಧಾವಿಸಿ, ಸಮಯಪ್ರಜ್ಞೆ ಮೆರೆದು ಆರೋಪಿ ವೆಂಕಟೇಶ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ತೀವ್ರವಾಗಿ ಗಾಯಗೊಂಡು ನರಳುತ್ತಿದ್ದ ಮಧುಮಿತ ಅವರನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಜೆ.ಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಕೌಟುಂಬಿಕ ಕಲಹ ಅಥವಾ ವೈಯಕ್ತಿಕ ದ್ವೇಷವೇ ಈ ಕೃತ್ಯಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರನ್ನು ಖ್ಯಾತ ಜೈನ ಜ್ಯೋತಿಷಿ ಬಿಕೆ ಸುಭಾಷ್ ಚಂದ್ರ ಜೈನ್ ಭೇಟಿಸೆ. 21ರಂದು ನೇರ ನೇಮಕಾತಿ ಸಂದರ್ಶನರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಭಗವಾನ್ ವಿಶ್ವಕರ್ಮ ಜಯಂತಿ ಆಚರಣೆಲಾಡ್ಜ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು; ಕೊಲೆಯೋ ಅಥವಾ ಆತ್ಮಹತ್ಯೆಯೋ...? ಭದ್ರೆ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮನ್ನಣೆ ನೀಡಿ-ರೈತಸಂಘ ಜಿಲ್ಲಾಧ್ಯಕ್ಷ ಡಿಎಸ್ ಹಳ್ಳಿ ಮಲ್ಲಿಕಾರ್ಜುನ್ಹೈಕೋರ್ಟ್ ವೃತ್ತದಲ್ಲಿ ರಾತ್ರೋರಾತ್ರಿ ಸಿದ್ದರಾಮಯ್ಯ ಮೂರ್ತಿ ಪ್ರತಿಷ್ಠಾಪನೆ: ಪಾಲಿಕೆಯಿಂದ ಕ್ಷಿಪ್ರ ತೆರವು!ಕೆಕೆ ಅಭಿವೃದ್ಧಿಗೆ ಹೊಸ ಮನ್ವಂತರ: 50 ಸಾವಿರ ನಿವೇಶನ, ಐಟಿ ಪಾರ್ಕ್ ಸೇರಿ 10 ಮಹತ್ವದ ಯೋಜನೆ ಘೋಷಣೆ!ಕೋರ್ಟ್ ಕಚೇರಿಯಲ್ಲಿ ಕುಡಿದು ರಂಪಾಟ: ವಕೀಲನಿಗೆ ಹೈಕೋರ್ಟ್‌ನಿಂದ ಜೈಲು ಶಿಕ್ಷೆ!ತಹಶೀಲ್ದಾರ್ 50 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ! ಮಾಲ್‌ಗಳ ಡಿ.ಜಿ ಸೆಟ್‌ಗಳಿಗೆ ವಾರ್ಷಿಕ ಟ್ರೇಡ್‌ ಲೈಸೆನ್ಸ್‌ ಅಗತ್ಯವಿಲ್ಲ!-ಹೈಕೋರ್ಟ್