ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದಲ್ಲಿ ಗುಲಾಮಗಿರಿ ತೊಲಗಿ ಹಲವು ದಶಕಗಳೇ ಕಳೆದಿವೆ. ಆದರೆ ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಅನಿಷ್ಟ ಗುಲಾಮಿ ಪದ್ಧತಿ ಇನ್ನೂ ಜೀವಂತವಾಗಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ಜನರಿಂದ ಆಯ್ಕೆಯಾದ ಶಾಸಕರು ತಮ್ಮ ಕ್ಷೇತ್ರದ ಯೋಜನೆ ಹಾಗೂ ಕೆಲಸಗಳಿಗೆ ಅನುದಾನ ಪಡೆಯಬೇಕಾದರೇ, ಸಿದ್ದರಾಮಯ್ಯರ ಕಾಲು ಹಿಡಿಯಬೇಕಂತೆ.
ಇದನ್ನು ಸ್ವತಃ ಕೋಲಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೊತ್ತನೂರು ಮಂಜುನಾಥ್ ಹೇಳಿದ್ದಾರೆ. ಮಾತೆತ್ತಿದರೆ, ಸಂವಿಧಾನ ಉಳಿಸುತ್ತೇವೆ, ಪ್ರಜಾಪ್ರಭುತ್ವ ಎತ್ತಿ ಹಿಡಿಯುತ್ತೇವೆ ಎಂದು ಬೊಗಳೆ ಬಿಡುವ ಕಾಂಗ್ರೆಸ್ಸಿಗರೇ ಇದಕ್ಕೆ ಏನು ಹೇಳುತ್ತೀರಿ ? ಥೂ ನಾಚಿಕೆಗೇಡು! ಸಿದ್ದರಾಮಯ್ಯ ಎಂದು ಜೆಡಿಎಸ್ ಹರಿಹಾಯ್ದಿದೆ.


