Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ಕ್ಷೇತ್ರ ಶಂಕರಪುರ ಅನ್ನದಾಹ ಕಿಟ್ ಯೋಜನೆಗೆ ಚಾಲನೆ

Advertisement

ಚಂದ್ರವಳ್ಳಿ ನ್ಯೂಸ್, ಕಟಪಾಡಿ:
ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ದ್ವಾರಕಾಮಯಿ ಮಠ ಇದರ 7ನೇ ಮಹತ್ವದ ಸೇವಾ ಯೋಜನೆ ಸಾಯಿ ಅನ್ನದಾಹಕಿಟ್ ವಿತರಣೆಗೆ ಮಂದಿರದಲ್ಲಿ ಮೇ.14 ಗುರುವಾರ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ , ಮಠ ಮಂದಿರಗಳು ಆಧ್ಯಾತ್ಮ ಮತ್ತು ಸಮಾಜಮುಖಿ ಕೇಂದ್ರಗಳಾಗಬೇಕು, ಈ ನಿಟ್ಟಿನಲ್ಲಿ ಸಾಯಿ ಮುಖ್ಯಪ್ರಾಣ ದೇವಸ್ಥಾನ ವತಿಯಿಂದ ನಡೆಯುತ್ತಿರುವ ಈ ಅಪೂರ್ವವಾದ ಸೇವಾ ಕಾರ್ಯ ನಿರಂತರವಾಗಿ ನಡೆಯಲಿ ಎಂದರು.

ಶ್ರೀ ಕ್ಷೇತ್ರ ಶಂಕರಪುರ ಏಕ ಜಾತಿ ಧರ್ಮ ಪೀಠದ ಪೀಠಾಧ್ಯಕ್ಷರಾದ ಶ್ರೀ ಸಾಯಿ ಈಶ್ವರ್ ಗುರೂಜಿ ಮಾತನಾಡಿ ನಮ್ಮ ಸಮಾಜದಲ್ಲಿ ಅನೇಕ ಮಂದಿ ಎರಡು ಹೊತ್ತಿನ ಊಟಕ್ಕೂ ಕಷ್ಟಪಡುವ ಜನರಿದ್ದಾರೆ ಇವರನ್ನು ಗುರುತಿಸಿ ಕ್ಷೇತ್ರದ ವತಿಯಿಂದ ಅವರಿಗೆ ತಿಂಗಳಿಗೆ ಬೇಕಾದ ಅಕ್ಕಿ ಸೇರಿದಂತೆ ದಿನಸಿ ಸಾಮಗ್ರಿಗಳನ್ನು ನೀಡಲಾಗುತ್ತದೆ ಈ ಈ ಸೇವಾ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಶಂಕರ್ ಪುರ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ, ಟ್ರಸ್ಟಿಗಳಾದ ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಸಮಾಜಸೇವಕ ಪ್ರಶಾಂತ್ ಪೂಜಾರಿ ಕಾಪು, ಕ್ಷೇತ್ರದ ಹಿತೈಷಿಗಳಾದ ರಾಮಣ್ಣ ಪೂಜಾರಿ, ವಿಜಯ್ ಕುಂದರ್, ರಾಘವೇಂದ್ರ ಪ್ರಭು ಕವಾ೯ಲು ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಡ ಕುಟುಂಬದ ವಿದ್ಯಾರ್ಥಿನಿಗೆ ಶಿಕ್ಷಣ  ದತ್ತು ಸ್ವೀಕಾರ ಸೇರಿದಂತೆ , ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಯಿತು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರದ ಭಕ್ತರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇನ್ಸ್ಪೆಕ್ಟರ್ ನವೀನ್ ಕುಮಾರ್ ಎಂ ಬಿ. ನೇತೃತ್ವದಲ್ಲಿ  ಗ್ರಾಮಸಭೆಶಿಕ್ಷಕರ ಬೆವರಿನ ಹನಿ; ವ್ಯವಸ್ಥೆಯ ನಿರ್ಲಕ್ಷ್ಯದ ಬಲಿಸಕಾಲಕ್ಕೆ ಕಂದಾಯ ಪಾವತಿಸಿ ನಗರದ ಅಭಿವೃದ್ಧಿಗೆ ಸಹಕರಿಸಿ: ಪೌರಾಯುಕ್ತ ಎ. ವಾಸೀಂ ಕರೆಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆಬೆಂಗಳೂರು ವಿವಿ ಕುಲಪತಿ ಆಯ್ಕೆ ಸಮಿತಿಗೆ ಅಕ್ರಮದ ವಾಸನೆಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸಂಚಲನ: ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆನೀಟ್ ಅಕ್ರಮ ಹಾಗೂ ಇಂಧನ ದರ ಏರಿಕೆ: ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತಗಳ ಬಳಕೆಗೆ ಸಿದ್ದರಾಮಯ್ಯ ಸ್ಪಷ್ಟನೆನೀಟ್-ಯುಜಿ ರದ್ದು: ಕೇಂದ್ರದ ನಿರ್ಧಾರ ಯುವಜನತೆಗೆ ಎಸಗಿದ ‘ಕ್ರೂರ ದ್ರೋಹ’-ಸಿದ್ದರಾಮಯ್ಯ ಆಕ್ರೋಶತಾಂತ್ರಿಕ ಸ್ವಾವಲಂಬನೆಯತ್ತ ಭಾರತದ ದಾಪುಗಾಲು: ಹೆಚ್.ಡಿ. ಕುಮಾರಸ್ವಾಮಿ