Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಕ್ತರ ಕಲ್ಪತರು ಶ್ರೀರಾಮಕೃಷ್ಣರು:ಮಾತಾಜೀ ತ್ಯಾಗಮಯೀ

Advertisement
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಶ್ರೀರಾಮಕೃಷ್ಣರು ಭಕ್ತರ ಆಸೆ-ಆಕಾಂಕ್ಷೆಗಳನ್ನು ಮತ್ತು ಪ್ರಾರ್ಥನೆಯನ್ನು ಈಡೇರಿಸುವ ಮೂಲಕ ಭಕ್ತರ ಕಲ್ಪತರು ಆಗಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷೆ ಮಾತಾಜೀ ತ್ಯಾಗಮಯೀ ಅಭಿಪ್ರಾಯಪಟ್ಟರು.           


ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ "ಕಲ್ಪತರು ದಿನ"ದ ನಿಮಿತ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು "ಕಲ್ಪತರು ದಿನದ ವಿಶೇಷತೆಗಳ" ಬಗ್ಗೆ ಪ್ರವಚನ ನೀಡಿದರು.


ಅಕ್ಷಯಕುಮಾರ ಸೇನ, ಉಪೇಂದ್ರ, ರಾಮಲಾಲ, ವೈಕುಂಠನಾಥ ಸನ್ಯಾಲ ಸೇರಿದಂತೆ ಅನೇಕ ಭಕ್ತರ ಪ್ರಾರ್ಥನೆಯನ್ನು ಮನ್ನಿಸಿ ಕಲ್ಕತ್ತಾದ ಕಾಶೀಪುರ ತೋಟದ ಮನೆಯ ಆವರಣದಲ್ಲಿ ಆತ್ಮಜಾಗೃತಿ ಉಂಟಾಗಲಿ ಎಂದು ಹರಸಿ ಅಹೇತುಕ ಕೃಪಾಸಿಂಧು ಆಗಿ ಶ್ರೀರಾಮಕೃಷ್ಣರು ಆಶೀರ್ವಾದಿಸಿದ ಪುಣ್ಯ ದಿನ ಎಂದು ಬಣ್ಣಿಸಿದರು.


ಸತ್ಸಂಗದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ವಿಶೇಷ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಕುಮಾರಿ ಕೀರ್ತನ ಆರ್ ಅವರಿಂದ ಶ್ರೀಮದ್ ಭಗವದ್ಗೀತೆಯ ಕರ್ಮಯೋಗದ ಶ್ಲೋಕಗಳ ಪಠಣ ನಡೆಯಿತು.
ಈ ಸಂದರ್ಭದಲ್ಲಿ ಎಚ್ ಲಕ್ಷ್ಮೀದೇವಮ್ಮ
,ಉಷಾ ಶ್ರೀನಿವಾಸ್, ಶೋಭಾ, ನೇತಾಜಿ ಪ್ರಸನ್ನ,

ಎಂ ಗೀತಾ ನಾಗರಾಜ್, ಸೌಮ್ಯ, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಚೇತನ್, ವೆಂಕಟೇಶ್, ಚೆನ್ನಕೇಶವ,ಅಪ್ಸರಾ ನೇತಾಜಿ, ನಾಗರತ್ನಮ್ಮ, ದ್ರಾಕ್ಷಾಯಣಿ,ಕಾವೇರಿ ಸುರೇಶ್, ಗೀತಾ ವೆಂಕಟೇಶರೆಡ್ಡಿ,ಜಿ ಯಶೋಧಾ ಪ್ರಕಾಶ್, ಸುರೇಶ್, ಯತೀಶ್ ಎಂ ಸಿದ್ದಾಪುರ,ವಿಜಯಲಕ್ಷ್ಮೀ, ನಾಗಮಣಿ, ಹೂವಿನ ಲಕ್ಷ್ಮೀದೇವಿ,ಪಂಕಜಾ, ಸುಧಾಮಣಿ,ಸುಮನಾ, ಗಾಯನ, ರಶ್ಮಿ ವಸಂತ, ಯಶಸ್ವಿ, ಪ್ರಕಾಶ್ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.

 

 

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ