Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀಶಾರದಾದೇವಿ ಜೀವನಗಂಗಾ ಗ್ರಂಥದ ಅಧ್ಯಯನವ್ರತ ಕೈಗೊಳ್ಳಬೇಕು ಸಿ.ಎಸ್.ಭಾರತಿ ಚಂದ್ರಶೇಖರ್

Advertisement

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಪ್ರತಿಯೊಬ್ಬರೂ ಸ್ವಾಮಿ ಪುರುಷೋತ್ತಮಾನಂದಜೀ ಬರೆದಿರುವ "ಶ್ರೀಶಾರದಾದೇವಿ ಜೀವನಗಂಗಾ" ಗ್ರಂಥದ ಅಧ್ಯಯನವ್ರತ ಕೈಗೊಳ್ಳುವುದರಿಂದ ಅವರ ಜೀವನ ಸಾರ್ಥಕವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರು ಹಾಗೂ ಶಿಕ್ಷಕರಾದ ಸಿ.ಎಸ್.ಭಾರತಿ ಚಂದ್ರಶೇಖರ ತಿಳಿಸಿದರು.
ನಗರದ ತ್ಯಾಗರಾಜನಗರದ ಸದ್ಭಕ್ತರಾದ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ವತಿಯಿಂದ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು "ಶ್ರೀಮಾತೆ ಶಾರದಾದೇವಿಯವರ ಜೀವನ ಮತ್ತು ಸಂದೇಶಗಳ "ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

 

ಶಾರದಾಮಾತೆಯವರ ಬಾಲ್ಯ ಜೀವನದಿಂದ ಆರಂಭಿಸಿ ಅವರ ಸಮಗ್ರ ಜೀವನವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟ ಅವರು ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಬದುಕಿನಲ್ಲಿ ಶಾರದಾದೇವಿಯವರ ಜೀವನ ಮತ್ತು ಸಂದೇಶಗಳನ್ನು ಅಧ್ಯಯನ ಮಾಡಬೇಕು. ಅವರ ಜೀವನದ ಒಂದೊಂದು ಘಟನೆಯೂ ನಮ್ಮ ನಿತ್ಯ ಬದುಕಿಗೆ ದಾರಿದೀಪವಾಗಿದ್ದು ಸಾರ್ಥಕ ಜೀವನದ ನಿರ್ಮಾಣದಲ್ಲಿ ಮಾರ್ಗದರ್ಶನ ನೀಡುತ್ತದೆ ಎಂದು ತಿಳಿಸಿದ ಅವರು ತಮ್ಮ ಜೀವನಾನುಭವಗಳನ್ನು ಸದ್ಭಕ್ತರೊಂದಿಗೆ ಹಂಚಿಕೊಂಡರು.   

 

                  ಸತ್ಸಂಗದ ಪ್ರಯುಕ್ತ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಎಂ ಗೀತಾ ನಾಗರಾಜ್,ರಾಧಾ ಭೀಮಾರೆಡ್ಡಿ, ಪ್ರಮೀಳಾ ಜಗದೀಶ್, ಮಾಕಂಸ್ ಲಕ್ಷ್ಮೀ ಬಾಲಾಜೀ ಅವರಿಂದ ವಿಶೇಷ ಭಜನೆ, ಯತೀಶ್ ಎಂ ಸಿದ್ದಾಪುರ ಅವರಿಂದ ನಾಮಾವಳಿ ಹಾಗೂ "ಶ್ರೀಶಾರದಾದೇವಿ ಜೀವನಗಂಗಾ" ಗ್ರಂಥ ಪಾರಾಯಣ, ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

 

ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ, ನಂಜಮ್ಮ ಕೆಂಚಪ್ಪ, ಭಾಗ್ಯಲಕ್ಷ್ಮೀ, ಸೃಜನ‌ಟಿ.ಸ್ವಾಮಿ ಜಿ.ಟಿ.ಸಮಯ್, ಎಂ ಲಕ್ಷ್ಮೀದೇವಮ್ಮ, ಸರಸ್ವತಿ,ಪ್ರೇಮಾ, ಅನುಸೂಯ ರಾಘವೇಂದ್ರ, ಪಂಕಜಾ ಚೆನ್ನಪ್ಪ ಭಾಗವಹಿಸಿದ್ದರು.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇನ್ಸ್ಪೆಕ್ಟರ್ ನವೀನ್ ಕುಮಾರ್ ಎಂ ಬಿ. ನೇತೃತ್ವದಲ್ಲಿ  ಗ್ರಾಮಸಭೆಶಿಕ್ಷಕರ ಬೆವರಿನ ಹನಿ; ವ್ಯವಸ್ಥೆಯ ನಿರ್ಲಕ್ಷ್ಯದ ಬಲಿಸಕಾಲಕ್ಕೆ ಕಂದಾಯ ಪಾವತಿಸಿ ನಗರದ ಅಭಿವೃದ್ಧಿಗೆ ಸಹಕರಿಸಿ: ಪೌರಾಯುಕ್ತ ಎ. ವಾಸೀಂ ಕರೆಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆಬೆಂಗಳೂರು ವಿವಿ ಕುಲಪತಿ ಆಯ್ಕೆ ಸಮಿತಿಗೆ ಅಕ್ರಮದ ವಾಸನೆಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸಂಚಲನ: ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆನೀಟ್ ಅಕ್ರಮ ಹಾಗೂ ಇಂಧನ ದರ ಏರಿಕೆ: ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತಗಳ ಬಳಕೆಗೆ ಸಿದ್ದರಾಮಯ್ಯ ಸ್ಪಷ್ಟನೆನೀಟ್-ಯುಜಿ ರದ್ದು: ಕೇಂದ್ರದ ನಿರ್ಧಾರ ಯುವಜನತೆಗೆ ಎಸಗಿದ ‘ಕ್ರೂರ ದ್ರೋಹ’-ಸಿದ್ದರಾಮಯ್ಯ ಆಕ್ರೋಶತಾಂತ್ರಿಕ ಸ್ವಾವಲಂಬನೆಯತ್ತ ಭಾರತದ ದಾಪುಗಾಲು: ಹೆಚ್.ಡಿ. ಕುಮಾರಸ್ವಾಮಿ