LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತಮಿಳುನಾಡಿಗೆ ಕದ್ದುಮುಚ್ಚಿ ಕಾವೇರಿ ನೀರು ಬಿಡುಗಡೆ: ಉಗ್ರ ಹೋರಾಟದ ಎಚ್ಚರಿಕೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
 ಹೊರಗಡೆ "ಒಂದು ಹನಿ ನೀರು ಬಿಡುವುದಿಲ್ಲ" ಎಂದು ಹೇಳಿ
, ರಾತ್ರೋರಾತ್ರಿ ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿ ವಿಧಾನಪರಿಷತ್ ವಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

​ರಾಜ್ಯದ ಜನ ಕುಡಿಯುವ ನೀರಿಗೂ, ಮಂಡ್ಯ-ಮೈಸೂರು ಭಾಗದ ರೈತರು ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿರುವಾಗ ಸರ್ಕಾರ ಕನ್ನಡಿಗರ ಕಣ್ಣಿಗೆ ಮಣ್ಣೆರಚುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

​​ಕನ್ನಡಿಗರಿಗೆ ದ್ರೋಹ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಲಸಂಪನ್ಮೂಲ ಸಚಿವ ಎನ್. ಚೆಲುವರಾಯಸ್ವಾಮಿ ಅವರ ಎರಡು ನಾಲಿಗೆಯ ಆಡಳಿತದಿಂದ ಕನ್ನಡಿಗರಿಗೆ ದ್ರೋಹವಾಗುತ್ತಿದೆ. ಬಹಿರಂಗವಾಗಿ ನೀರು ಬಿಡುವುದಿಲ್ಲ ಎಂದು ಭಾಷಣ ಹೊಡೆಯುವ ನಾಯಕರು, ಕೆಆರ್‌ಎಸ್ (KRS) ಜಲಾಶಯದಿಂದ ರಾತ್ರೋರಾತ್ರಿ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ.

​ಹೈಕಮಾಂಡ್ ಮತ್ತು ಮೈತ್ರಿ ಪಕ್ಷಗಳ ಓಲೈಕೆ: ದೆಹಲಿ ಹೈಕಮಾಂಡ್ ಹಾಗೂ ತಮಿಳುನಾಡಿನ ಮೈತ್ರಿ ಪಕ್ಷಗಳನ್ನು ಓಲೈಸಲು ಮಂಡ್ಯ, ಮೈಸೂರು ಮತ್ತು ಚಾಮರಾಜನಗರದ ರೈತರ ಹೊಟ್ಟೆಗೆ ಬರೆ ಎಳೆಯಲಾಗುತ್ತಿದೆ. ಬೆಳೆಗಳು ಒಣಗುತ್ತಿದ್ದರೂ ಸರ್ಕಾರಕ್ಕೆ ಚಿಂತೆಯಿಲ್ಲದಂತಾಗಿದೆ.

​ಬೀದಿಗಿಳಿದು ಹೋರಾಟದ ಎಚ್ಚರಿಕೆ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ತಕ್ಷಣವೇ ತಡೆಯಬೇಕು. ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸುವುದು ನಿಲ್ಲಿಸದಿದ್ದರೆ, ರೈತರ ಹಾಗೂ ಸಾರ್ವಜನಿಕರ ಹಿತರಕ್ಷಣೆಗಾಗಿ ಬಿಜೆಪಿ ರಾಜ್ಯಾದ್ಯಂತ ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದೆ ಎಂದು ಅಶೋಕ್ ಎಚ್ಚರಿಸಿದ್ದಾರೆ.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಶಾಲೆಗಳ ಉಳಿವಿಗೆ ಜಾಗೃತಿ ಅಗತ್ಯ: ಕೆಜಿ ಹನುಮಂತರಾಯ‘ನಾನು ಸಚಿವನಾಗಿರುವುದು ಶ್ರೀರಾಮುಲುಗೆ ಸಹಿಸಲು ಆಗುತ್ತಿಲ್ಲ’: ಬಿ. ನಾಗೇಂದ್ರ‘ವಂದೇ ಮಾತರಂ’ ಗೀತೆ ಆಕ್ಷೇಪ ವಿವಾದ: ಬಿಜೆಪಿ ಆರೋಪಕ್ಕೆ ಸೋನಿಯಾ ಗಾಂಧಿ ಪರವಾಗಿ ಕಾಂಗ್ರೆಸ್ ಸ್ಪಷ್ಟನೆ!ಭದ್ರಾ ನೀರಿಗಾಗಿ ಆ.18ಕ್ಕೆ ಸಿಎಂ ಜೊತೆ ಸಭೆ: ರೈತರಿಂದ ಹೆದ್ದಾರಿ ತಡೆ ಹಿಂಪಡೆತ!ವರ್ಷದೊಳಗೆ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ: ಸಚಿವ ಚಲುವರಾಯಸ್ವಾಮಿ ಘೋಷಣೆ!‘RSS ನೋಂದಣಿಯೂ ಇಲ್ಲ, ಆಗೋದೂ ಇಲ್ಲ’: ಪ್ರಿಯಾಂಕ್ ಖರ್ಗೆಗೆ ಬಿ.ಎಲ್. ಸಂತೋಷ್ ತಿರುಗೇಟು!ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಧ್ವಜಾರೋಹಣ ನಡೆಸಿದ ಸಿಎಂ ಡಿ.ಕೆ. ಶಿವಕುಮಾರ್2047ರ ‘ವಿಕಸಿತ ಭಾರತ’ಕ್ಕಾಗಿ ದೊಡ್ಡ ಕನಸು ಕಾಣಲು ದೇಶದ ಜನತೆಗೆ ಪ್ರಧಾನಿ ಮೋದಿ ಕರೆ!80ನೇ ಸ್ವಾತಂತ್ರ್ಯ ದಿನಾಚರಣೆ: ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ದೇಶಕ್ಕೆ ಪ್ರಧಾನಿ ಮೋದಿ ನೀಡಿದ ಸಂದೇಶಗಳಿವು!ಪೆಟ್ರೋಲ್, ಡೀಸೆಲ್ ಮೇಲಿನ ವಿಂಡ್‌ಫಾಲ್ ತೆರಿಗೆ ಕಡಿತಗೊಳಿಸಿದ ಕೇಂದ್ರ!