Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಮತಾಂಧ ಶಕ್ತಿಗಳಿಗೆ ಬಲ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಮತಾಂಧ ಶಕ್ತಿಗಳಿಗೆ ಬಲ ಬಂದಂತಾಗುತ್ತದೆ. ಕಾಂಗ್ರೆಸ್‌ಚಿಂತನೆಗಳು, ದೇಶ ವಿರೋಧಿ, ಹಿಂದೂ ವಿರೋಧಿ ಮನಸ್ಥಿತಿ ದೇಶದಲ್ಲಿ ಶಾಂತಿ ನೆಲೆಸಲು ಬಿಡುತ್ತಿಲ್ಲ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ವಕ್ಫ್‌ತಿದ್ದುಪಡಿ, ಪಹಲ್ಗಾಮ್‌ಉಗ್ರ ದಾಳಿ, ಪಾಕಿಸ್ಥಾನ ಪರ ಘೋಷಣೆ, ಪಾಕಿಸ್ಥಾನ ಪರ ಮೃದು ಧೋರಣೆ ಇವುಗಳು ಮತಾಂಧರ ಆತ್ಮವಿಶ್ವಾಸವನ್ನು ಹೆಚ್ಚಿಸಿದ ಪರಿಣಾಮ ಸಾರ್ವಜನಿಕ ಪ್ರದೇಶದಲ್ಲಿ ಹಿಂದೂ ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಮಂಗಳೂರಿನಲ್ಲಿ ನಡೆದ ಬರ್ಬರ ಹತ್ಯೆಯ ಹಿಂದೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕೈವಾಡವೂ ಇದೆ ಎನ್ನುವ ಅನುಮಾನ ದಟ್ಟವಾಗಿ ಜನರನ್ನು ಕಾಡುತ್ತಿದೆ. ಗೃಹ ಇಲಾಖೆ ನೇರವಾಗಿ ಈ ಕೊಲೆಯ ಹಿಂದೆ ಇದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವಾದ ಸಾಕ್ಷ್ಯಗಳೂ ಲಭಿಸುತ್ತಿದೆ.

ಹತ್ಯೆಯಾದ ಸುಹಾಸ್‌ಶೆಟ್ಟಿ ಅವರಿಗೆ ಕೊಲೆ ಬೆದರಿಕೆ ಇದೆ ಎನ್ನುವುದನ್ನು ಸ್ವತಃ ಪೊಲೀಸ್‌ಇಲಾಖೆಯೇ ಎಚ್ಚರಿಸಿತ್ತು. ಆದರೆ ರಕ್ಷಣೆ ನೀಡುವ ಬದಲು ಆತನನ್ನು ನಿರಾಯುಧನನ್ನಾಗಿ ಮಾಡಿ ಹಂತಕರ ಕೈಗೆ ಸಿಗುವಂತೆ ಮಾಡಿದ್ದೇ ಪೊಲೀಸ್‌ಇಲಾಖೆ ಎನ್ನುವ ಅನುಮಾನವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ. ಜೀವ ಬೆದರಿಕೆ ಹಿನ್ನಲೆಯಲ್ಲಿ ಆತ್ಮರಕ್ಷಣೆಗಾಗಿ ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದರೂ, ಆತನ ಬೆನ್ನುಬಿದ್ದ ಪೊಲೀಸರು ಹತ್ಯೆಯ ಬೆದರಿಕೆ ಇದ್ದರೂ ನಿರಾಯುಧನನ್ನಾಗಿ ಮಾಡುವಲ್ಲಿ ಸಫಲರಾಗಿದ್ದಾರೆ. ಆದರೆ ಸೂಕ್ತ ರಕ್ಷಣೆ ಕಲ್ಪಿಸುವುದನ್ನು ಉದ್ದೇಶಪೂರ್ವಕವಾಗಿಯೇ ಮರೆತಿದಿದ್ದರು ಎಂದು ಬಿಜೆಪಿ ಆರೋಪಿಸಿದೆ.

ಸುಹಾಸ್‌ಶೆಟ್ಟಿ ನಿರಾಯುಧನಾಗಿರುವ ಮಾಹಿತಿ ಪೊಲೀಸ್‌ಇಲಾಖೆಯ ಮೂಲಕವೇ ಹಂತಕರಿಗೆ ರವಾನೆಯಾಗಿದೆ, ಜೀವ ಬೆದರಿಕೆಯ ಮಾಹಿತಿ ಹಾಗೂ ನಿರಾಯುಧನಾಗಿರುವ ಮಾಹಿತಿ ಇದ್ದಿದ್ದು ಪೊಲೀಸ್‌ಇಲಾಖೆಗೆ ಮಾತ್ರ. ಹೀಗಾಗಿ ಇದೊಂದು ಸರ್ಕಾರಿ ಪ್ರಾಯೋಜಿತ ಕೊಲೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿವೆ.

ವಕ್ಫ್‌ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಪೊಲೀಸ್‌ಅಧಿಕಾರಿ ಪ್ರತಿಭಟನಾಕಾರರಿಗೆ ತನ್ನ ವಾಹನದಲ್ಲಿ ಡ್ರಾಪ್‌ನೀಡಿದ್ದು, ಒಂದು ಕೋಮಿನ ಪೊಲೀಸರನ್ನು ಇಲಾಖೆಗೆ ತುಂಬಿಸುತ್ತಿರುವುದು ಇದೆಲ್ಲವೂ ಹಂತಕರಿಗೆ ವರದಾನವಾಗಿದೆ.

ಆಡಳಿತ ಯಂತ್ರವನ್ನೇ ಬಳಸಿ ಹಿಂದೂಗಳನ್ನು ದಮನಿಸುತ್ತಿರುವ ಕಾಂಗ್ರೆಸ್‌ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಎಚ್ಚರಿಸಿದೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ