Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸೇವೆಗಳ ಮೂಲಕ ಜನಮಾನಸದ ನಾಯಕರಾಗಿ ಹೊರಹೊಮ್ಮಿದ್ದ ಸುಧಾಕರ್ : ಸ್ವಾಮೀಜಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಮ್ಮದೇಯಾದ ಅಮೂಲ್ಯಸೇವೆಯ ಮೂಲಕ ಲಕ್ಷಾಂತರ ಜನರ ಪ್ರೀತಿ,ವಿಶ್ವಾಸಕ್ಕೆ ಪಾತ್ರರಾದವರು ಈ ಜಿಲ್ಲೆಯ ಉಸ್ತುವಾರಿ ಸಚಿವ ಡಿ.ಸುಧಾಕರವರು. ಇಂದುಅವರು ಬೌದ್ದಿಕವಾಗಿ ನಮ್ಮಲ್ಲಿಲ್ಲವಾದರೂ ಅವರ ಸೇವಾಕಾರ್ಯಗಳು ಬಡವರಬಗ್ಗೆ ಅವರಿಗಿದ್ದ ಅಪಾರವಾದ ವಿಶ್ವಾಸ, ಕಾಳಜಿ, ನಿರಂತರ ಜನಸೇವೆ ಅವರನ್ನು ಸದಾಸ್ಮರಿಸುವಂತೆ ಮಾಡಿದೆ ಎಂದು ನರಸಿಂಹರಾಜಪುರದ ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮಿಸೇನೆಭಟ್ಟಾರಕ ಮಹಾಸ್ವಾಮಿ ತಿಳಿಸಿದರು.

ಅವರು, ಭಾನುವಾರ ನಗರದ ಅನಂತನಾಥಜೈನಭವನದಲ್ಲಿ ಇತ್ತೀಚೆಗೆ ನಮ್ಮನಗಲಿದ ಜಿಲ್ಲಾ ಉಸ್ತುವಾರಿ ಡಿ.ಸುಧಾಕರವರ ಪರೋಕ್ಷ ಕಟ್ಟಳೆ ಶಾಂತಿ ಪೂಜೆಯಲ್ಲಿ ಭಾಗವಹಿಸಿ, ಸುಧಾಕರವರ ಅನೇಕಕಾರ್ಯಕ್ರಮಗಳ ಬಗ್ಗೆ ಮಾಹಿತಿನೀಡಿದರು. ರಾಜಕೀಯಕ್ಷೇತ್ರದಲ್ಲೂ ಯಾರವಿರೋಧವನ್ನು ಕಟ್ಟಿಕೊಳ್ಳದೆ ಎಲ್ಲರಲ್ಲೂ ಸ್ನೇಹಮಯಿಯಾಗಿ ವರ್ತಿಸುತ್ತಿದ್ದರು. ಸಚಿವರಾಗಿ ಅವರು ಸಲ್ಲಿಸಿದ ಸೇವೆ ನಾಡಿನ ಜನರಮನದಲ್ಲಿಶಾಶ್ವತವಾಗಿ ಉಳಿಯುತ್ತದೆ. ಅವರ ಅಂತ್ಯಕ್ರಿಯೆಗೆ ನಾಡಿನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಇಡೀ ಮಂತ್ರಿಮಂಡಲ ಆಗಮಿಸಿತ್ತು. ಇದುಅವರ ನಿಸ್ವಾರ್ಥಸೇವೆಗೆ ಸಾಕ್ಷಿವೆಂದರು.

ಶಾಸಕ, ಸಣ್ಣಕೈಗಾರಿಕೆಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಮಾತನಾಡಿ,ಸುಧಾಕರ್ ಇಂದು ನಮ್ಮಲ್ಲಿಲ್ಲವೆಂದರೆ ನಂಬಲುಸಾಧ್ಯವಿಲ್ಲ. ಅವರೊಂದಿಗೆ ಸಾಕಷ್ಟುಹೆಚ್ಚುಒಡನಾಟಹೊಂದಿದ್ದೆ. ಭದ್ರಾ ಮೇಲ್ದಂಡೆ ಯೋಜನೆ ಅವರಕನಸಾಗಿದ್ದು, ಅದನ್ನುಸರ್ಕಾರ ನನಸುಮಾಡಬೇಕೆಂದರು.

ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಮಾತನಾಡಿ, ಯಾವುದೇ ಸಂದರ್ಭದಲ್ಲಿ ನಾನುಅವರನ್ನು ಭೇಟಿಮಾಡಿದರೂ ಭಾವನಾತ್ಮಕವಾಗಿ ಸ್ಪಂಧಿಸುತ್ತಿದ್ದರಲ್ಲದೆ, ಪಕ್ಕದಲ್ಲೆ ಕುಳಿತು ಆತ್ಮೀಯವಾಗಿ ಮಾತನಾಡುತ್ತಿದ್ದರು. ಸಮಸ್ಯೆಗಳಬಗ್ಗೆ ಕ್ಷಣಮಾತ್ರದಲ್ಲಿ ಪರಿಹಾರನೀಡುತ್ತಿದ್ದರು. ಸುಧಾಕರವರ ಸೇವಾಕಾರ್ಯ ಅವರನ್ನು ಮಹಾನ್‌ವ್ಯಕ್ತಿಯಾಗಿ ರೂಪಿಸಿದೆಎಂದರು.

ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕಸರಬರಾಜು ನಿಗಮ ಅಧ್ಯಕ್ಷ, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಬೋವಿನಿಗಮದ ಅಧ್ಯಕ್ಷ ನೇರಲಗುಂಟೆಎಂ.ರಾಮಪ್ಪ, ಪತ್ನಿ ಹರ್ಷಿಣಿಸುಧಾಕರ್, ಪುತ್ರ ಸುಹಾಸ್‌ಸುಧಾಕರ್, ಸಹೋದರರಾದ ಡಿ.ವಿಜಯಕುಮಾರ್, ಡಿ.ಎಸ್.ಕುಮಾರ್, ಡಿ.ಸುರೇಶ್‌ಕುಮಾರ್, ಭರತ್‌ರಾಜ್, ಸಹೋದರಿ ಕಲ್ಪನಾ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಹಿರಿಯಮುಖಂಡ ಟಿ.ಪ್ರಭುದೇವ್, ಎಂ.ಶಿವಲಿಂಗಪ್ಪ, ಕೆ.ವೀರಭದ್ರಯ್ಯ, ಬಿ.ಟಿ.ರಮೇಶ್‌ಗೌಡ, ಶಂಕರಣ್ಣ, ಸಿ.ಶಿವಲಿಂಗಪ್ಪ, ಸಿ.ವೀರಭದ್ರಬಾಬು, ನಾಗಿರೆಡ್ಡಿ, ಎನ್.ಓಬಳೇಶ್, ಬಿ.ಸಿ.ಸಂಜೀವಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೇವೆಗಳ ಮೂಲಕ ಜನಮಾನಸದ ನಾಯಕರಾಗಿ ಹೊರಹೊಮ್ಮಿದ್ದ ಸುಧಾಕರ್ : ಸ್ವಾಮೀಜಿರಿಯಲ್ ಎಸ್ಟೇಟ್ ಏಜೆಂಟ್‌ನಂತೆ ಕೆಲಸ ಮಾಡುತ್ತಿರುವ ಡಿಕೆಶಿ: ಜೆಡಿಎಸ್ ಗಂಭೀರ ಆರೋಪಬಿಜೆಪಿ ಪ್ರಮುಖರ ಮಹತ್ವದ ಸಭೆ: ರಾಜ್ಯದಲ್ಲಿ ಪಕ್ಷದ ಸಂಘಟನಾತ್ಮಕ ಬಲವರ್ಧನೆಗೆ ದೃಢನಿಶ್ಚಯಬಿಜೆಪಿ ಕೋರ್ ಕಮಿಟಿ ಸಭೆ: ಸಂಘಟನೆ ಬಲವರ್ಧನೆ ಹಾಗೂ ಮುಂದಿನ ಹೋರಾಟ ಕುರಿತು ವಿಸ್ತೃತ ಚರ್ಚೆಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ರಾಜ್ಯ ನಾಯಕರ ಆತ್ಮೀಯ ಸ್ವಾಗತಎಪಿಎಂಸಿಯಲ್ಲಿ ದಲ್ಲಾಳಿಗಳ ದರ್ಬಾರ್; ರೈತರಿಗೆ ಅನ್ಯಾಯವಾದರೆ ಉಗ್ರ ಹೋರಾಟ: ಸಿ.ಟಿ. ರವಿ ಎಚ್ಚರಿಕೆಕಡಲ ತೀರದಲ್ಲಿ ಒಂದೇ ಕುಟುಂಬದ ಎಂಟು ಮಂದಿ ಮುಳುಗಿ ಸಾವು; ಸಿಎಂ ಸಿದ್ದರಾಮಯ್ಯ ಸಂತಾಪ, ತಲಾ 5 ಲಕ್ಷ ರೂ. ಪರಿಹಾರ ಘೋಷಣೆ​ ​ಗೃಹ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಡಾ. ಪ್ರಭಾರಿಯಲ್ ಎಸ್ಟೇಟ್ ಏಜೆಂಟ್‌ನಂತೆ ಕೆಲಸ ಮಾಡುತ್ತಿರುವ ಡಿಕೆಶಿ: ಜೆಡಿಎಸ್ ಗಂಭೀರ ಆರೋಪಚಿರತೆ ಸೆರೆಗೆ ಎಲ್ಲಾ ತಂತ್ರಗಳನ್ನು ರೂಪಿಸಿದ ಅರಣ್ಯಾಧಿಕಾರಿಗಳು