ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಸಹನೆಯುತ ಆಧ್ಯಾತ್ಮಿಕ ಸಾಧನೆಯಿಂದ ನಾವು ಭಗವಂತನ ದರ್ಶನವನ್ನು ಪಡೆದು ಜೀವನ ಸಾರ್ಥಕ ಮಾಡಿಕೊಳ್ಳಬಹುದು ಎಂದು ಚಳ್ಳಕೆರೆಯ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥೆ ಜಿ ಯಶೋಧಾ ಪ್ರಕಾಶ್ ತಿಳಿಸಿದರು.
ನಗರದ ಶಿವನಗರದ ತಮ್ಮ ಜಿ.ವಿ.ಎಸ್.ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು "ಶ್ರೀಶಾರದಾದೇವಿ ಜೀವನಗಂಗಾ" ಗ್ರಂಥ ಪಾರಾಯಣ ಮಾಡುತ್ತ "ಮುನ್ನಡೆಸುವ ಮಹಾಶಕ್ತಿ" ಎಂಬ ಅಧ್ಯಾಯ ಓದಿದರು.
ಬ್ರಹ್ಮಚಾರಿಗಳು ಮತ್ತು ಸಂನ್ಯಾಸಿಗಳಿಗೆ ತ್ಯಾಗಜೀವನವೇ ಆದರ್ಶವಾಗಿದ್ದು ಅವರು ವಿವಾಹದಲ್ಲಿ ಪಾಲ್ಗೊಳ್ಳಬಾರದು ಮತ್ತು ಅದರ ಆಹಾರ ಸೇವನೆ ಮಾಡಬಾರದು ಎಂದು ಶ್ರೀಮಾತೆ ಶಾರದಾದೇವಿಯವರು ಸಲಹೆ ನೀಡುತ್ತಿದ್ದರು ಎಂದು ಹೇಳಿದರು.
ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಶ್ರೀರಾಮಕೃಷ್ಣರ ನಾಮಸ್ಮರಣೆ, ಯತೀಶ್ ಎಂ ಸಿದ್ದಾಪುರ ಅವರಿಂದ ದಿವ್ಯತ್ರಯರ ಭಜನೆ, ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕಲಿಕಾ ತರಗತಿ ನಡೆಯಿತು.
ಕಾರ್ಯಕ್ರಮದಲ್ಲಿ ಶಾಂತಮ್ಮ, ವಿನೋದಮ್ಮ ವಿಜಯಲಕ್ಷ್ಮೀ, ರಶ್ಮಿ ರಮೇಶ್, ಕೃಷ್ಣವೇಣಿ, ಶಾರದಮ್ಮ, ಯತೀಶ್ ಎಂ ಸಿದ್ದಾಪುರ, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ನಾಗರತ್ನಮ್ಮ, ಸೌಮ್ಯ ಪ್ರಸಾದ್,ಮಂಗಳಾ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.


