Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿಕ್ಷಕರು ಸದಾಚಾರ-ಸದ್ವಿಚಾರ-ಸಹಬಾಳ್ವೆ ರೂಪಿಸುವ ಸಾಮಾಜಿಕ ರಾಯಭಾರಿಗಳು: ಕೆ.ವಿ.ಪ್ರಭಾಕರ್

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶಿಕ್ಷಕರು ಅಂದರೆ ಮಕ್ಕಳಲ್ಲಿ ಮತ್ತು ಮಕ್ಕಳ ಮೂಲಕ ಸಮಾಜದಲ್ಲಿ ಸಹೃದಯತೆ-ಸಮನ್ವಯತೆ-ಸಹಿಷ್ಣುತೆ-ಸದಾಚಾರ-ಸದ್ವಿಚಾರ-ಸಹಬಾಳ್ವೆ-ಸದಭಿರುಚಿ ಯನ್ನು ರೂಪಿಸುವ ಸಾಮಾಜಿಕ ರಾಯಭಾರಿಗಳು. ಇವರನ್ನು ವಂಧಿಸುವುದು ಉತ್ತಮ‌ಸಂಸ್ಕಾರ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.


ಮೀಡಿಯಾ ಕನೆಕ್ಟ್ ಮತ್ತು ಪುಣ್ಯ ಫೌಂಡೇಷನ್ ವಿದ್ಯಾಭವನದಲ್ಲಿ ಆಯೋಜಿಸಿದ್ದ ಗುರುವಂಧನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತುಮಕೂರಿನ ಇಡಗೂರು ಸರ್ಕಾರಿ ಶಾಲೆಯ ಶಿಕ್ಷಕರು ಸಮಾಜಮುಖಿಯಾದ ಪ್ರಜೆಗಳನ್ನು ಸೃಷ್ಟಿಸಿ ಸಮಾಜಕ್ಕೆ ಒಪ್ಪಿಸಿದ್ದಾರೆ ಎನ್ನುವುದಕ್ಕೆ ಈ ಗುರುವಂದನಾ ಕಾರ್ಯಕ್ರಮವೇ ಸಾಕ್ಷಿ. 25 ವರ್ಷಗಳ ಹಿಂದೆ ನಿಮ್ಮಿಂದ ತಿದ್ದಿ ಬೆಳೆದ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ವಂದಿಸುವ ಮೂಲಕ ತಮ್ಮ ಸಂಸ್ಕಾರವನ್ನು ತೋರಿಸುತ್ತಿದ್ದಾರೆ ಎಂದು ಪ್ರಭಾಕರ್ ತಿಳಿಸಿದರು.

ರೈತರು-ಶಿಕ್ಷಕರು-ಸೈನಿಕರು ಆರೋಗ್ಯಕರ ಮತ್ತು ನೆಮ್ಮದಿಯ  ಸಮಾಜದ ಸೇನಾನಿಗಳು ಎಂದು ನಮ್ಮ ಮುಖ್ಯಮಂತ್ರಿಗಳು ಯಾವಾಗಲೂ ಹೇಳ್ತಾ ಇರ್ತಾರೆ. ಇದು ಅಕ್ಷರಶಃ ನಿಜ. ಇದಕ್ಕೆ ಸರ್ವಾಧಿಕಾರಿ ಹಿಟ್ಲರ್ ನ ಒಂದು ಪ್ರಸಂಗ ನೆನಪಿಸುತ್ತೇನೆ.

 ಯುದ್ಧದಾಹಿಯಾಗಿದ್ದ ಹಿಟ್ಲರ್ ಯಾವುದೇ ಪ್ರದೇಶ, ದೇಶವನ್ನು ವಶಪಡಿಸಿಕೊಂಡಾಗ ಮೊದಲಿಗೆ ಆ ಪ್ರದೇಶದಲ್ಲಿರುವ ಶಿಕ್ಷಕರನ್ನು ಬಂಧಿಸಲು ತನ್ನ ಸೈನಕ್ಕೆ ಸೂಚಿಸುತ್ತಿದ್ದ. ಏಕೆಂದರೆ, ಶಿಕ್ಷಕರು ಮಕ್ಕಳು ಮತ್ತು ಸಮಾಜವನ್ನು ಬೇಗ ಪ್ರಭಾವಿಸುತ್ತಾರೆ, ತಮ್ಮ ಪ್ರಭಾವದಿಂದ ಹೋರಾಟಗಳನ್ನು ರೂಪಿಸುತ್ತಾರೆ ಎನ್ನುವ ತಿಳಿವಳಿಕೆ ಮತ್ತು ಭಯ ಎರಡೂ ಹಿಟ್ಲರ್ ಗೆ ಇತ್ತು ಎಂದು ಪ್ರಭಾಕರ್ ಹೇಳಿದರು.
ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲೂ ಮಹಾತ್ಮಗಾಂಧಿಯವರ ವಿಚಾರಗಳಿಗೆ ಮೊದಲು ಪ್ರಭಾವಿತರಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ದುಮುಕಿದವರು ಶಾಲಾ ಶಿಕ್ಷಕರೇ. ಇದಕ್ಕೆ ಮತ್ತೊಂದು ಉದಾಹರಣೆ ಹೇಳ್ತೇನೆ.


ಸಮಾಜವಾದಿ ಹೋರಾಟಗಾರರಾದ ಶಾಂತವೇರಿ ಗೋಪಾಲಗೌಡರು ತಮ್ಮ ಚಿಂತನೆಗಳನ್ನು, ಹೋರಾಟದ ವಿಷಯಗಳನ್ನು ಜನರಿಗೆ ಹೇಳುವ ಮೊದಲು ಶಾಲೆಗಳಿಗೆ ಹೋಗಿ ಶಿಕ್ಷಕರು ಮತ್ತು ಮಕ್ಕಳಿಗೆ ಹೇಳುತ್ತಿದ್ದರು. ಶಿಕ್ಷಕರು ಮತ್ತು ಮಕ್ಕಳು ಒಟ್ಟಾಗಿ ಪೋಷಕರಿಗೆ ವಿಷಯ ಮುಟ್ಟಿಸುತ್ತಿದ್ದರು ಎಂದು ಅವರು ತಿಳಿಸಿದರು. ಹೀಗಾಗಿ ಆರೋಗ್ಯಕರ ಸಮಾಜವನ್ನು ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು ಎಂದರು.

 ಈಗ ತಂತ್ರಜ್ಞಾನದ ಕಾರಣಕ್ಕೆ ಸಮಾಜ ಅತ್ಯಂತ ವೇಗವಾಗಿ ಬೆಳೆಯುತ್ತಿದೆ, ಬದಲಾಗುತ್ತಾ ಶಿಕ್ಷಣದ ಅಗತ್ಯ ಮತ್ತು ಮಹತ್ವ ಕೂಡ ಬದಲಾಗುತ್ತಿದೆ.  ಕಾರ್ಪೋರೇಟ್ ಜಗತ್ತಿನ ಮಾರುಕಟ್ಟೆಗೆ ಬೇಕಾದ "ಮಾಲು" ಗಳನ್ನು ಮಾತ್ರ ಸೃಷ್ಟಿಸುವ ಒತ್ತಡವನ್ನು ಹೇರಲಾಗುತ್ತಿದೆ. ಈ ಸವಾಲನ್ನು ನಾವೆಲ್ಲರೂ ಅತ್ಯಂತ ಸಮನ್ವಯದಿಂದ ಎದುರಿಸಬೇಕಿದೆ. ರಾಜಕೀಯ ಮಾರುಕಟ್ಟೆ, ಕಾರ್ಪೋರೇಟ್ ಮಾರುಕಟ್ಟೆಯ ಒತ್ತಡಗಳಿಗೆ ಮಣಿಯಬಾರದು ಎಂದು ಪ್ರಭಾಕರ್ ಕಿವಿ ಮಾತು ಹೇಳಿದರು.

ಸರ್ಕಾರಿ ಶಾಲೆಗಳ, ಸರ್ಕಸರಿ ಶಿಕ್ಷಕರ ವಿಚಾರದಲ್ಲಿ ಎರಡು ಮುಖ್ಯ ಸಂಗತಿಗಳನ್ನು ಮುಂದಿಟ್ಟು ಮಾತು ಮುಗಿಸುತ್ತೇನೆ. ಶಾಲೆಗಳಲ್ಲಿ ಮಕ್ಕಳ ಮೇಲೆ ಲೈಂಗಿಕ‌ದೌರ್ಜನ್ಯ ನಡೆಯುತ್ತಿರುವ ಪ್ರಕರಣಗಳು ಹೆಚ್ಚೆಚ್ಚು ವರದಿ ಆಗುತ್ತಿವೆ. ಆದರೆ, ಒಂದು ಸಮೀಕ್ಷೆಯ ಪ್ರಕಾರ ಸರ್ಕಾರಿಗಳಲ್ಲಿ ಇಂಥಾ ದೌರ್ಜನ್ಯ ಪ್ರಕರಣಗಳು ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಇದೆ. ಹೀಗಾಗಿ ಮಕ್ಕಳಲ್ಲಿ ಲಿಂಗ ಸೂಕ್ಷ್ಮತೆ, ಸಹಬಾಳ್ವೆ, ಸಹಿಷ್ಣತೆಯನ್ನು ಬೆಳೆಸುವಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರು ಬಹಳ ಮುಂದಿದ್ದಾರೆ.

ಅದಕ್ಕೇ ಹೇಳೋದು, ಖಾಸಗಿ ಶಾಲೆಗಳ ಕಟ್ಟಡದ ಗುಣಮಟ್ಟ, ಸರ್ಕಾರಿ ಶಾಲೆಗಳ ಶಿಕ್ಷಕರ ಗುಣಮಟ್ಟ ಉನ್ನತ ಮಟ್ಟದ್ದಾಗಿರುತ್ತದೆ ಎಂದರು.

 ಈಗ ನಮ್ಮ ಸರ್ಕಾರ ಒಂದು ಹೊಸ ಕಾರ್ಯಕ್ರಮ‌ರೂಪಿಸಿದೆ. "ನನ್ನ‌ಶಾಲೆ ನನ್ನ ಜವಾಬ್ದಾರಿ" ಎನ್ನುವ ಕಾರ್ಯಕ್ರಮ. ಸರ್ಕಾರಿ ಶಾಲೆಗಳಲ್ಲಿ‌ಓದಿದ ಲಕ್ಷಾಂತರ ಮಂದಿ ತಾವು ಓದಿದ ಶಾಲೆಗಳಿಗೆ ತಮ್ಮ ಕೈಲಾದ ನೆರವು ನೀಡುತ್ತಿದ್ದಾರೆ. ಹಲವರು ತಾವು ಓದಿದ ಶಾಲೆಗಳನ್ನು ದತ್ತು ಕೂಡ ಪಡೆದಿದ್ದಾರೆ. ಕೆಲವರು ಕೊಠಡಿಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಇಂಥಾ ಕಾಳಜಿಗಳು ಹೆಚ್ಚೆಚ್ವು ವ್ಯಕ್ತ ಆಗುವುದು ಸರ್ಕಾರಿ ಶಾಲೆಗಳಲ್ಲಿ‌ಓದಿದವರಿಂದಲೇ. ನಾನು ಕೂಡ ಕೋಲಾರದಲ್ಲಿ ಓದಿದ್ದು‌ಸರ್ಕಾರಿ ಶಾಲೆಯಲ್ಲೇ. ಈಗ ಆ ಶಾಲೆಗೆ ಅಪಾರ ನೆರವು ಒದಗಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ತಾವು ಓದಿದ ಶಾಲೆಗೆ ನೆರವು ನೀಡಿದ್ದಾರೆ. ಇದೀಗ ತಣ್ಣಗಿನ‌ಚಳಚಳಿಯ ರೂಪ ಪಡೆದುಕೊಂಡಿದೆ ಎಂದು ಪ್ರಭಾಕರ್ ತಿಳಿಸಿದರು.

ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸುವ ಮೂಲಕ ನನ್ನ‌ಶಾಲೆ ಮತ್ತು ಶಿಕ್ಷಕರುಗಳನ್ನು ಸ್ಮರಿಸಲು, ವಂದಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಮೀಡಿಯಾ ಕನೆಕ್ಟ್ ನ ದಿವ್ಯಾ ರಂಗೇನಹಳ್ಳಿ ಮತ್ತು ಪುಣ್ಯ ಫೌಂಡೇಷನ್ ಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಪ್ರಭಾಕರ್ ತಿಳಿಸಿದರು.

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ್ ಮಹಾಸ್ವಾಮಿಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಸತಿ ಸಚಿವರ ಮಾಧ್ಯಮ ಸಂಯೋಜನ ಲಕ್ಷ್ಮೀನಾರಾಯಣ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ