Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬಾಲಕನ ನಿರ್ಲಕ್ಷ್ಯವೆಂದು ಪರಿಹಾರ ನಿರಾಕರಿಸುವಂತಿಲ್ಲ; ಹೈಕೋರ್ಟ್ ಮಹತ್ವದ ತೀರ್ಪು!

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಪ್ರಾಪ್ತ ವಯಸ್ಕ ಬಾಲಕನ ವರ್ತನೆಯನ್ನು ಜವಾಬ್ದಾರಿಯುತ ವಿವೇಚನಾಯುಕ್ತ ವಯಸ್ಕರೊಂದಿಗೆ ಹೋಲಿಕೆ ಮಾಡಲು ಬರಾಬರಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕರ್ನಾಟಕ ಹೈಕೋರ್ಟ್
, ಹೈಟೆನ್ಶನ್ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ 11 ವರ್ಷದ ಬಾಲಕನ ಪೋಷಕರಿಗೆ 10.52 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ (ಹೆಸ್ಕಾಂ) ಕಟ್ಟುನಿಟ್ಟಿನ ಆದೇಶಿಸಿದೆ.

ಬೆಳಗಾವಿ ಲೋಕ ಅದಾಲತ್‌ನ 2015ರ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.

Advertisement

 ಪ್ರಕರಣದ ಹಿನ್ನೆಲೆ: ಘಟನೆ: 2012ರ ಸೆಪ್ಟೆಂಬರ್ 11ರಂದು ಬೆಳಗಾವಿ ಜಿಲ್ಲೆಯ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾನುವಾರು ಮೇಯಿಸಲು ತೆರಳಿದ್ದ 11 ವರ್ಷದ ಬಾಲಕ ರವಿ ತಳವಾರ, ಹೈಟೆನ್ಶನ್ ವಿದ್ಯುತ್ ತಂತಿಗೆ ಸಿಲುಕಿದ್ದ ಗಾಳಿಪಟವನ್ನು ತೆಗೆಯಲು ಯತ್ನಿಸಿದಾಗ ವಿದ್ಯುತ್ ಸ್ಪರ್ಶಿಸಿ ದಾರುಣವಾಗಿ ಮೃತಪಟ್ಟಿದ್ದ.

ಲೋಕ ಅದಾಲತ್ ಆದೇಶ: ಬಾಲಕನ ಪೋಷಕರು 10 ಲಕ್ಷ ರೂ. ಪರಿಹಾರ ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದ ಬೆಳಗಾವಿ ಲೋಕ ಅದಾಲತ್, "ಬಾಲಕ ತಾನಾಗಿಯೇ ವಿದ್ಯುತ್ ಕಂಬ ಹತ್ತಿದ್ದರಿಂದ ಆತನದೇ ನಿರ್ಲಕ್ಷ್ಯ ಕಾರಣ" ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮೃತ ಬಾಲಕನ ತಂದೆ ಗುಡದಪ್ಪ ರುದ್ರಪ್ಪ ತಳವಾರ ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೈಕೋರ್ಟ್‌ನ ಪ್ರಮುಖ ವೀಕ್ಷಣೆಗಳು ಹಾಗೂ ಅಭಿಪ್ರಾಯಗಳು:
ಮಕ್ಕಳ ಸ್ವಾಭಾವಿಕ ವರ್ತನೆ:
11 ವರ್ಷದ ಬಾಲಕನ ವರ್ತನೆಯನ್ನು ಪ್ರೌಢ ವಯಸ್ಕರ ವಿವೇಚನೆಗೆ ಹೋಲಿಸಿ 'ಸಹಭಾಗಿ ನಿರ್ಲಕ್ಷ್ಯ' ಆರೋಪಿಸುವುದು ಸರಿಯಲ್ಲ. ಮಕ್ಕಳು ಸ್ವಾಭಾವಿಕವಾಗಿ ಕುತೂಹಲ ಹೊಂದಿರುತ್ತಾರೆ; ಗಾಳಿಪಟ, ಮರಗಳು ಹಾಗೂ ವಿದ್ಯುತ್ ಕಂಬಗಳೆಡೆಗೆ ಆಕರ್ಷಿತರಾಗುವುದು ಸಹಜ ಬಾಲ್ಯದ ಸ್ವಭಾವ.

ಪ್ರಾಧಿಕಾರದ ಕರ್ತವ್ಯ: ವಸತಿ ಪ್ರದೇಶಗಳು ಮತ್ತು ಖಾಸಗಿ ಜಮೀನುಗಳ ಮೂಲಕ ಹೈಟೆನ್ಶನ್ ಮಾರ್ಗಗಳು ಹಾದುಹೋಗುವುದರಿಂದ, ಮಕ್ಕಳು ಗಾಳಿಪಟ ತೆಗೆಯಲು ಯತ್ನಿಸುವುದು ನಿರೀಕ್ಷಿಸಬಹುದಾದ ಸಂಗತಿಯೇ ಆಗಿದೆ. ಹೀಗಾಗಿ ಕಂಬ ಹತ್ತುವುದನ್ನು ತಡೆಯುವ ಸಾಧನಗಳು, ಸುರಕ್ಷತಾ ಕವಚ ಹಾಗೂ ಎಚ್ಚರಿಕೆ ವ್ಯವಸ್ಥೆಗಳನ್ನು ಅಳವಡಿಸುವುದು ವಿದ್ಯುತ್ ಪ್ರಾಧಿಕಾರಗಳ ಜವಾಬ್ದಾರಿಯಾಗಿದೆ.

ಕಟ್ಟುನಿಟ್ಟಿನ ಹೊಣೆಗಾರಿಕೆ: ವಿದ್ಯುತ್ ಕಣ್ಣಿಗೆ ಕಾಣದ, ಸದ್ದಿಲ್ಲದ ಮಾರಣಾಂತಿಕ ಶಕ್ತಿಯಾಗಿದ್ದು, ಸಾರ್ವಜನಿಕರ ಸುರಕ್ಷತೆಗೆ ಅತ್ಯುನ್ನತ ಮುನ್ನೆಚ್ಚರಿಕೆ ವಹಿಸಬೇಕು. ಬಾಲಕ ಕಂಬ ಹತ್ತಿದ್ದನೇ ಎಂಬುದು ಮುಖ್ಯವಲ್ಲ, ಹೆಸ್ಕಾಂ ನಿರ್ವಹಣೆಯಲ್ಲಿದ್ದ ಹೈವೋಲ್ಟೇಜ್ ವ್ಯವಸ್ಥೆಯಿಂದಲೇ ಸಾವು ಸಂಭವಿಸಿರುವುದು ಸ್ಥಳ ಪರಿಶೀಲನಾ ವರದಿಯಿಂದ ದೃಢಪಟ್ಟಿದೆ ಎಂದು ನ್ಯಾಯಪೀಠ ತಿಳಿಸಿದೆ.

ಅಂತಿಮವಾಗಿ, ಕಟ್ಟುನಿಟ್ಟಿನ ಹೊಣೆಗಾರಿಕೆ ತತ್ವದಡಿ ಬಾಲಕನ ಸಾವಿಗೆ ಹೆಸ್ಕಾಂ ಸಂಪೂರ್ಣ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪೋಷಕರಿಗೆ ಬಡ್ಡಿ ಸಮೇತ ಒಟ್ಟು 10.52 ಲಕ್ಷ ರೂ. ಪರಿಹಾರ ಪಾವತಿಸುವಂತೆ ಆದೇಶಿಸಿದೆ.

ಪ್ರಮುಖ ಸಂದೇಶ: ಮಕ್ಕಳ ಸ್ವಾಭಾವಿಕ ಕುತೂಹಲವನ್ನು ಅವರ ನಿರ್ಲಕ್ಷ್ಯ ಎಂದು ಬಿಂಬಿಸಿ ವಿದ್ಯುತ್ ಇಲಾಖೆಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂಬುದನ್ನು ಈ ತೀರ್ಪು ಸ್ಪಷ್ಟಪಡಿಸಿದೆ.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರನ್ನು ಖ್ಯಾತ ಜೈನ ಜ್ಯೋತಿಷಿ ಬಿಕೆ ಸುಭಾಷ್ ಚಂದ್ರ ಜೈನ್ ಭೇಟಿಸೆ. 21ರಂದು ನೇರ ನೇಮಕಾತಿ ಸಂದರ್ಶನರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಭಗವಾನ್ ವಿಶ್ವಕರ್ಮ ಜಯಂತಿ ಆಚರಣೆಲಾಡ್ಜ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು; ಕೊಲೆಯೋ ಅಥವಾ ಆತ್ಮಹತ್ಯೆಯೋ...? ಭದ್ರೆ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮನ್ನಣೆ ನೀಡಿ-ರೈತಸಂಘ ಜಿಲ್ಲಾಧ್ಯಕ್ಷ ಡಿಎಸ್ ಹಳ್ಳಿ ಮಲ್ಲಿಕಾರ್ಜುನ್ಹೈಕೋರ್ಟ್ ವೃತ್ತದಲ್ಲಿ ರಾತ್ರೋರಾತ್ರಿ ಸಿದ್ದರಾಮಯ್ಯ ಮೂರ್ತಿ ಪ್ರತಿಷ್ಠಾಪನೆ: ಪಾಲಿಕೆಯಿಂದ ಕ್ಷಿಪ್ರ ತೆರವು!ಕೆಕೆ ಅಭಿವೃದ್ಧಿಗೆ ಹೊಸ ಮನ್ವಂತರ: 50 ಸಾವಿರ ನಿವೇಶನ, ಐಟಿ ಪಾರ್ಕ್ ಸೇರಿ 10 ಮಹತ್ವದ ಯೋಜನೆ ಘೋಷಣೆ!ಕೋರ್ಟ್ ಕಚೇರಿಯಲ್ಲಿ ಕುಡಿದು ರಂಪಾಟ: ವಕೀಲನಿಗೆ ಹೈಕೋರ್ಟ್‌ನಿಂದ ಜೈಲು ಶಿಕ್ಷೆ!ತಹಶೀಲ್ದಾರ್ 50 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ! ಮಾಲ್‌ಗಳ ಡಿ.ಜಿ ಸೆಟ್‌ಗಳಿಗೆ ವಾರ್ಷಿಕ ಟ್ರೇಡ್‌ ಲೈಸೆನ್ಸ್‌ ಅಗತ್ಯವಿಲ್ಲ!-ಹೈಕೋರ್ಟ್