Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ತಮ್ಮ ಪುತ್ರನಿಗೆ ಪುನೀತ್ ರಾಜಕುಮಾರ್ ಹೆಸರು ನಾಮಕರಣ ಮಾಡಿದ ದಂಪತಿ

ಚಂದ್ರವಳ್ಳಿ ನ್ಯೂಸ್, ಸಿದ್ದಾಪುರ:
ತಮ್ಮ ಮಗನಿಗೆ ಪುನೀತ್ ರಾಜಕುಮಾರ್ ಹೆಸರು ನಾಮಕರಣ.
ನಾಗರಾಜ ನಾಯ್ಕ ಮಮತಾ ನಾಯ್ಕ ದಂಪತಿಗಳ ಅಭಿಮಾನಕ್ಕೆ ಅಭಿನಂದನೆಗಳ ಮಹಾಪುರ.

          ಯಾರ ಮೇಲೆ ಯಾರಿಗೆ ಅಭಿಮಾನ ಬೆಳೆಯುತ್ತದೆ ಹೇಳಲು ಸಾಧ್ಯವಿಲ್ಲ. ಹಲವರು ಹಲವರ ಮೇಲೆ ಹಲವು ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರಿಸುತ್ತಾರೆ. ಕೆಲವರು ತಮ್ಮ ದೇಹದ ಮೇಲೆ ಟ್ಯಾಟೂ ಹಾಕಿಸಿಕೊಂಡರೆ, ಕೆಲವರು ದೇವಾಲಯ ಕಟ್ಟುತ್ತಾರೆ, ಕೆಲವರು ಹರಕೆ ಹೋರುತ್ತಾರೆ. ಇಲ್ಲೊಬ್ಬರು ಪುನೀತ್ ರಾಜಕುಮಾರ್ ಅಭಿಮಾನಿ ದಂಪತಿಗಳು ತಮ್ಮ ಮಗನಿಗೆ ಪುನೀತ್ ರಾಜಕುಮಾರ ಎಂದು ಹೆಸರು ನಾಮಕರಣ ಮಾಡುವ ಮೂಲಕ ತಮ್ಮ ಅಪ್ಪಟ  ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

          ಹೌದು ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿರುವ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದ ಹೆಸರಿನಲ್ಲಿ ಅನಾಥರ, ದಿಕ್ಕಿಲ್ಲದವರ, ಅಸಹಾಯಕರ, ವೃದ್ದರ ಸೇವೆ ಮಾಡುತ್ತಿರುವ ನಾಗರಾಜ ನಾಯ್ಕ ಹಾಗೂ  ಮಮತಾ ನಾಯ್ಕ ದಂಪತಿಗಳು ತಮ್ಮ ಎರಡನೆ ಮಗನಿಗೆ ಪುನೀತ್ ರಾಜಕುಮಾರ ಎಂದು ಹೆಸರು ನಾಮಕರಣ ಮಾಡಿದ್ದಾರೆ.

        ಇಂದು ಮುಗದೂರಿನ ತಮ್ಮ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದಲ್ಲಿ ನಡೆದ ಪುನೀತ್ ರಾಜಕುಮಾರರವರ 3 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನಾಗರಾಜ ನಾಯ್ಕ ಹಾಗೂ  ಮಮತಾ ನಾಯ್ಕ ದಂಪತಿಗಳು ತಮ್ಮ ಎರಡನೆ ಮಗನಿಗೆ ಪುನೀತ್ ರಾಜಕುಮಾರ ಎಂದು ಹೆಸರು ನಾಮಕರಣ ಮಾಡಿದ್ದಾರೆ.

            ಅವರು ಪುನೀತ್ ರಾಜಕುಮಾರರವರ ಅಪ್ಪಟ ಅಭಿಮಾನಿಗಳಾಗಿದ್ದು  ಈ ಹಿಂದೆ ಪುನೀತ್ ರಾಜಕುಮಾರ ರವರು ನಿಧನರಾದ ಸಂದರ್ಭದಲ್ಲಿ ತಾವು ನಡೆಸುತ್ತಿದ್ದ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮಕ್ಕೆ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮ ಎಂದು ಹೆಸರು ಬದಲಿಸಿ ಪುನೀತ್ ರಾಜಕುಮಾರ ರವರ ಮೇಲಿನ ಅಭಿಮಾನ ತೋರಿಸಿದ್ದರು.

ನಂತರ ತಮ್ಮ ಮೊದಲನೆ ಮಗನಿಗೆ ಕೂಡ ಯುವರಾಜ ಎಂದು ಹೆಸರಿಡುವ ಮೂಲಕ ತಾವು ಪುನೀತ್ ರಾಜಕುಮಾರ ಅಭಿಮಾನಿಗಳು ಎಂದು ಇನ್ನೊಮ್ಮೆ ಸಾಭೀತು ಮಾಡಿದ್ದರು. ಇದೀಗ ತಮ್ಮ ಎರಡನೆ ಮಗುನಿಗು ಕೂಡ ಪುನೀತ್ ರಾಜಕುಮಾರ ಎಂದು ಹೆಸರು ನಾಮಕರಣ ಮಾಡುವುದರ ಮೂಲಕ  ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕ ದಂಪತಿಗಳು ಪುನೀತ್ ರಾಜಕುಮಾರ ರವರ ಅಪ್ಪಟ ಅಭಿಮಾನವನ್ನು ತೋರಿಸಿದ್ದಾರೆ.

          ಈಗಾಗಲೆ ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದಲ್ಲಿ ನೂರಾರು ಅನಾಥರ ಸೇವೆ ನಡೆಸುತ್ತಿರುವ ನಾಗರಾಜ ನಾಯ್ಕ ದಂಪತಿಗಳು. ಅನಾಥರ ಬಾಳಿಗೆ ಬೆಳಕಾಗುವುದರ ಜೊತೆಗೆ ಆಶ್ರಯದಾತರಾಗಿದ್ದಾರೆ. ನೂರಾರು ಅನಾಥ ಶವಗಳಿಗೆ ಅಂತ್ಯಕ್ರೀಯೆ ನಡೆಸಿರುವ ಇವರು ನೂರಾರು ಜನರನ್ನು ಅವರ ಕುಟುಂಬಗಳಿಗೆ ತಲುಪಿಸುವ ಕೆಲಸ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಅಲ್ಲದೆ ಶಿವಮೊಗ್ಗ, ಹಾವೇರಿ ಜಿಲ್ಲೆಗಳಿಂದಲೂ ರಸ್ತೆಯ ಮೇಲೆ, ಬಸ್ ನಿಲ್ದಾಣಗಳಲ್ಲಿ ಅನಾಥ ಸ್ಥಿತಿಯಲ್ಲಿ ಇರುವವರನ್ನೂ, ಪೋಲಿಸರು, ಸಾರ್ವಜನಿಕರೂ, ಸಂಘ ಸಂಸ್ಥೆಗಳವರು ಕರೆತಂದು ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮಕ್ಕೆ ಸೇರಿಸುತ್ತಿದ್ದಾರೆ. ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕ ದಂಪತಿಗಳು  ಅನಾಥರ ಸೇವೆಗೆ ಹೆಸರುವಾಸಿ ಆಗಿದ್ದಾರೆ.

         ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕ ದಂಪತಿಗಳ ಈ ಕಾರ್ಯಕ್ಕೆ ವಿಶ್ವದ ಎಲ್ಲೆಡೆ ಇರುವ ಪುನೀತ್ ರಾಜಕುಮಾರ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದು ದಂಪತಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ