ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲೂಕು ಇವರ ವತಿಯಿಂದ ಘಾಟಿ ಸುಬ್ರಹ್ಮಣ್ಯ ದೇಗುಲದ 2 ಕಲ್ಯಾಣಿ ಸ್ವಚ್ಚತೆ ಮತ್ತು ಪಾಲ್ ಪಾಲ್ ದಿನ್ನೆ ಕೆರೆ ಅಭಿವೃದ್ಧಿಗೊಂಡಿದ್ದು ಇಂದು ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮ ನಡೆಯಿತು
ಘಾಟಿ ಪ್ರಾದಿಕಾರದ ಕಾರ್ಯದರ್ಶಿ ಮಹೇಶ್, ಪ್ರಾದಿಕಾರದ ಸದಸ್ಯರಾದ ಡಾ.ರಂಗಪ್ಪ ರವರ ಅಧ್ಯಕ್ಷತೆಯಲ್ಲಿ ಕೆರೆ ಅಂಗಳದಲ್ಲಿ ನಾಮಫಲಕ ಅನಾವರಣ ಮಾಡಲಾಯಿತು .
ಘಾಟಿ ಸುಬ್ರಮಣ್ಯ ದೇಗುಲದಲ್ಲಿ ವಿಶೇಷ ಪೂಜೆ ಮಾಡಿ ಕಲ್ಯಾಣಿಯಲ್ಲಿ ಪೂಜಾ ವಿಧಿ ವಿಧಾನಗಳ ಮೂಲಕ ಪೂಜಾ ಕೈಂಕರ್ಯಗಳು ನಡೆಯಿತು.
ಮಾತಾನಾಡಿದ ಘಾಟಿ ಪ್ರಾದಿಕಾರದ ಕಾರ್ಯದರ್ಶಿ ಮಹೇಶ್ ರವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕೆರೆಗಳ ಹೂಳೆತ್ತುವುದು ಕಾರ್ಯಕ್ರಮ ಶ್ಲಾಘನೀಯ ಬರಗಾಲದಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ ಕೆರೆ ಅಭಿವೃದ್ಧಿ ಮಾಡಿ ಊರಿಗೆ ಉತ್ತಮ ನೀರಾವರಿ ಸೌಲಭ್ಯ ಒದಗಿಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ ಎಂದರು.
ಜಿಲ್ಲಾ ನಿರ್ದೇಶಕರಾದ ಉಮಾರಬ್ಬ ಮಾತಾನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ 961 ಕೆರೆ ಹೂಳೆತ್ತುವ ಕಾರ್ಯ ಮುಕ್ತಾಯಗೊಂಡಿದ್ದು ಇಂದು ಹಸ್ತಾಂತರ ಮಾಡಲಾಗುತ್ತಿದೆ,ಪ್ರತಿ ವರ್ಷ ತಾಲೂಕು ಪರವಾಗಿ 2ರಿಂದ 3 ಕೆರೆ ಹೂಳು ತೆಗೆಯುವ ಮೂಲಕ ಕೆರೆಗಳ ಪುನಶ್ಚೇತನ ಮಾಡಲಾಗುತ್ತಿದೆ ಎಂದರು,ಘಾಟಿ ಪ್ರಾದಿಕಾರದ ಸದಸ್ಯರಾದ ಆರ್.ವಿ ಮಹೇಶ್ ಮಾತಾನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆರೆ ಹೂಳು ತೆಗೆಯುವ ಕಾರ್ಯ ಉತ್ತಮವಾಗಿದ್ದು ರೈತರಿಗೆ ಹೆಚ್ಚಿನ ಉಪಯೋಗ ವಾಗುತ್ತದೆ ಬೋರ್ವೆಲ್ ರಿಚಾರ್ಜ್ ಆಗುವುದರಿಂದ ನೀರಾವರಿ ಸಮಸ್ಯೆ ತಲೆದೂರುವುದಿಲ್ಲ,ಇಂತಹ ಅನೇಕ ಕಾರ್ಯಕ್ರಮಗಳನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಾ ಬಂದಿದ್ದು ಉತ್ತಮ ಬೆಳವಣಿಗೆ ಎಂದರು.
ಕಾರ್ಯಕ್ರಮದಲ್ಲಿ ಘಾಟಿ ಪ್ರಾದಿಕಾರದ ಸದಸ್ಯರಾದ ಡಾ.ರಂಗಪ್ಪ , ಕೆ.ಎಸ್ ರವಿ, ಲಕ್ಷ್ಮಿ ನಾಯ್ಕ್, ಆರ್.ವಿ ಮಹೇಶ್ , ಹೇಮಲತಾ ರಮೆಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ನಿರ್ದೇಶಕರಾದ ಉಮಾರಬ್ಬ, ಲೋಟಸ್ ಆರೇನಾ ರೆಸಾರ್ಟ್ ಮಾಲಿಕರಾದ ಶ್ರೀನಿವಾಸ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಮಹಾಲಿಂಗಯ್ಯ, ಒಕ್ಕೂಟದ ಅಧ್ಯಕ್ಷರಾದ ಸವಿತಾ ಆನಂದ್, ಧನಂಜಯ್, ತಾಲೂಕು ಯೋಜನಾಧಿಕಾರಿ ದಿನೇಶ್, ಜಿಲ್ಲಾ ಜನಜಾಗೃತಿ ಸದಸ್ಯರಾದ ಧರ್ಮೆಂದ್ರ,ಮಮತಾ, ರಮೇಶ್ ತಾಲೂಕು ಕೃಷಿ ಮೇಲ್ವಿಚಾರಕರಾದ ಲೋಹಿತ್, ಒಕ್ಕೂಟದ ಪದಾಧಿಕಾರಿಗಳು ಶೌರ್ಯ ತಂಡದ ಪದಾಧಿಕಾರಿಗಳು,ರೈತ ಸಂಘದ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು VLE ಗಳು,ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.




