Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಯುಜಿಸಿಯ ಹೊಸ ನಿಯಮಗಳಿಗೆ ತಡೆ ನೀಡಿದ ಸುಪ್ರೀಂ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು/ನವದೆಹಲಿ:
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ರೂಪಿಸಿದ ಹೊಸ ನಿಯಮಗಳಿಗೆ ಸುಪ್ರೀಂ ಕೋರ್ಟ್​ ಗುರುವಾರ ತಡೆ ನೀಡಿದೆ.


ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಗಟ್ಟಲು ಯುಜಿಸಿ ನಿಯಮಗಳು ಅಸ್ಪಷ್ಟ ಮತ್ತು ದುರುಪಯೋಗಕ್ಕೆ ಕಾರಣವಾಗಲಿವೆ.


ಈ ವಿಷಯದಲ್ಲಿ ಮಧ್ಯಪ್ರವೇಶಿಸದಿದ್ದರೆ, ಅಪಾಯಕಾರಿ ಪರಿಣಾಮ ಎದುರಿಸಬೇಕಾಗುತ್ತದೆ. ಈ ನಿಯಮಗಳು ಸಮಾಜವನ್ನು ವಿಭಜಿಸುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠ ಅಭಿಪ್ರಾಯಪಟ್ಟಿದೆ.

ಯುಜಿಸಿಯ ಹೊಸ ನಿಯಮಗಳು ಸ್ಪಷ್ಟವಾದ ಸುರಕ್ಷತಾ ವಿಧಾನಗಳನ್ನು ಹೊಂದಿಲ್ಲ. ಅವುಗಳನ್ನು ಸುಲಭವಾಗಿ ಇನ್ನೊಬ್ಬರ ವಿರುದ್ಧ ದುರುಪಯೋಗ ಮಾಡಿಕೊಳ್ಳಬಹುದು.
ವಿಶೇಷವಾಗಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ವಿರುದ್ಧ ಇವುಗಳನ್ನು ಬಳಕೆ ಮಾಡಬಹುದು ಎಂದು ಆಕ್ಷೇಪಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಇಂದು ನಡೆಸಿತು.


ತಜ್ಞರ ಸಮಿತಿ ರಚಿಸಿ:
ಸುಪ್ರೀಂ ಕೋರ್ಟ್ ಹೊಸ ನಿಯಮಗಳಿಗೆ ತಡೆ ನೀಡಿದ್ದಲ್ಲದೇ
, ಕೇಂದ್ರ ಸರ್ಕಾರ ಮತ್ತು ಯುಜಿಸಿಗೆ ನೋಟಿಸ್​ ಜಾರಿ ಮಾಡಿತು. ಈ ಕುರಿತು ಮಾರ್ಚ್​ 19ರೊಳಗೆ ಪ್ರತಿಕ್ರಿಯಿಸಬೇಕು. ಅಲ್ಲದೇ, ಈ ನಿಯಮಗಳನ್ನು ಖ್ಯಾತ ಕಾನೂನು ತಜ್ಞರ ಪರಿಶೀಲನೆಗೆ ನೀಡಬೇಕು ಎಂದು ನ್ಯಾಯಪೀಠ ಸೂಚಿಸಿದೆ.

ಜಾರಿಗೆ ತಂದಿರುವ ಹೊಸ ನಿಯಮಗಳು ಪರಾಮರ್ಶೆಗೆ ಒಳಪಡಬೇಕಿದೆ. ಅಲ್ಲಿಯವರೆಗೂ, 2012ರಲ್ಲಿ ಜಾರಿ ಮಾಡಲಾದ ನಿಯಮಗಳು ವಿವಿಗಳಲ್ಲಿ ಜಾರಿಯಲ್ಲಿರಲಿವೆ. ನಿಯಂತ್ರಿತ ಭಾಷೆ ನಿಯಮವು ವಿವಾದಿತವಾಗಿದೆ. ಈ ಬಗ್ಗೆ ಯಾವುದೇ ವಿವರಣೆ ಇಲ್ಲ ಎಂದು ಕೋರ್ಟ್​ ಹೇಳಿತು.

ಆಕ್ಷೇಪದ ಅಂಶಗಳು:
ಯುಜಿಸಿಯು ಹೊಸ ನಿಯಮಗಳನ್ನು ರೂಪಿಸಿ ಅವುಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿ ಮಾಡಬೇಕು ಎಂದು ಜನವರಿ
13 ರಂದು ಆದೇಶ ಹೊರಡಿಸಿತ್ತು. ಎಲ್ಲ ವಿವಿಗಳಲ್ಲಿ ಸಮಾನತೆ ಸಮಿತಿಗಳನ್ನು ರಚಿಸಬೇಕು.
ಈ ಸಮಿತಿಗಳು ಇತರ ಹಿಂದುಳಿದ ವರ್ಗಗಳ (ಒಬಿಸಿ)
, ಪರಿಶಿಷ್ಟ ಜಾತಿಗಳು (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ), ಅಂಗವೈಕಲ್ಯ ವ್ಯಕ್ತಿಗಳು ಮತ್ತು ಮಹಿಳೆಯರನ್ನು ಒಳಗೊಂಡಿರಬೇಕು ಎಂಬ ನಿಯಮವಿದೆ.

ಸಮಾನತೆ ಅಂಶದ ಮೇಲೆ ರೂಪಿಸಲಾದ ನಿಯಮಗಳಲ್ಲಿ ಸವರ್ಣೀಯರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯಲು ಅವಕಾಶ ನೀಡುವ ಅಂಶಗಳಿವೆ. ಇದು ಅಪಾಯಕಾರಿ ಎಂದು ಆರೋಪಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆಗಳ ವಿರುದ್ಧವೂ ಹೋರಾಟ ನಡೆಸಲಾಗುತ್ತಿದೆ.

ಯುಜಿಸಿಯ ಹೊಸ ನಿಯಮಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ, ಮೃತ್ಯುಂಜಯ್ ತಿವಾರಿ, ವಕೀಲ ವಿನೀತ್ ಜಿಂದಾಲ್ ಮತ್ತು ರಾಹುಲ್ ದಿವಾನ್ ಎಂಬವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು