Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಮೀನಿಗೆ ಅತಿಕ್ರಮ ಪ್ರವೇಶ, ಮಾಲೀಕರಿಗೆ ಬೆದರಿಕೆ ಹಾಕಿದ ಭೂ ಮಾಫಿಯ ವಿರುದ್ಧ ಕ್ರಮಕ್ಕೆ ಒತ್ತಾಯ

Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರಕ್ಕೆ ಕೂಗಳತೆ ದೂರದಲ್ಲಿರುವ ಮಾದಗೂಂಡನಹಳ್ಳಿ ಗ್ರಾಮದ  ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಸದರಿ ಜಮೀನನ್ನು ಕುರಿತಂತೆ ನ್ಯಾಯಾಲಯವು ತಡೆಯಾಜ್ಞೆ  ನೀಡಿದೆ. ಆದರೆ ನ್ಯಾಯಾಲಯದ ಆದೇಶವನ್ನು ಲೆಕ್ಕಿಸದೆ 50 ಕ್ಕೂ ಅಧಿಕ ಮಂದಿ ನಮ್ಮ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಜೆಸಿಬಿ ಗಳಿಂದ ನಮ್ಮ ಶೆಡ್ ಗಳನ್ನು ಧ್ವಂಸ ಮಾಡಿ ಅತಿಕ್ರಮ ಪ್ರವೇಶ ಮಾಡಿದವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಜಮೀನು ಮಾಲಿಕ ಅರವಿಂದ್ ಕುಮಾರ್ ಮನವಿ ಮಾಡಿದ್ದಾರೆ.

ಈ ಬಗ್ಗೆ ಅರವಿಂದ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ ಮಾದಗೊಂಡನಹಳ್ಳಿಯ ಗ್ರಾಮದ  ಸರ್ವೇ ನಂಬರ್ : 61/1 ಜಮೀನು ಈಗಾಗಲೇ ನ್ಯಾಯಾಲಯದ ದಾವೆ ಹೂಡಿದ್ದೇವೆ. ನಮ್ಮ ಜಮೀನು ಕಸಿದುಕೊಳ್ಳಲು ರಾಕೇಶ್ ಎಂಬುವರು ನಮಗೆ ತೊಂದರೆ ಕೊಡುತ್ತಿದ್ದು ,  ಇಂದು ಮುಂಜಾನೆ ಏಕಾಏಕಿ 50 ಮಂದಿಯೊಂದಿಗೆ ನಮ್ಮ ಜಮೀನಿಗೆ ಬಂದು ಯಾವುದೇ ನ್ಯಾಯಾಲಯದ ಆದೇಶವನ್ನು ತೋರಿಸದೆ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತಡೆಯಾಜ್ಞೆ ಇದ್ದರೂ ನಾವು ಹೇಳಿದರು ಯಾರ ಮಾತನ್ನು ಲೆಕ್ಕಿಸದೆ ಏಕಾ ಏಕಿ ಜೆಸಿಪಿ ಗಳನ್ನು ಬಳಸಿ  ತೋಟದ ಕೆಲಸಕ್ಕೆ ಅನುಕೂಲವಾಗಲೆಂದು ನಾವು ನಿರ್ಮಿಸಿ ಕೊಂಡಿದ್ದ ಶೆಡ್ ಗಳನ್ನು ಧ್ವಂಸ ಮಾಡಿದ್ದಾರೆ ಅಲ್ಲದೆ  ಪ್ರಶ್ನೆ ಮಾಡಲು ಹೋದ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಲು ಮುಂದಾಗಿದ್ದು  ತಡೆಯಲು ಬಂದ ನಮ್ಮನ್ನು ಕೆಟ್ಟ ಪದಗಳಿಂದ ನಿಂದಿಸಿ ಗಲಾಟೆ ಮಾಡಿ ಬೆದರಿಕೆಯನ್ನು ಸಹ ಹಾಕಿದ್ದು  ನಮಗೆ ಪೊಲೀಸ್ ಇಲಾಖೆಯಿಂದ ರಕ್ಷಣೆ ಕಲ್ಪಿಸಬೇಕಿದೆ ಎಂದು ತಿಳಿಸಿದರು.

ಸದರಿ ಸರ್ವೆ ನಂಬರ್ 61/1ರ ಜಮೀನು  ನಮ್ಮ ತಂದೆಯವರಾದ ಅಡವಿಯಪ್ಪ ಅವರು ಕ್ರಯ ಮಾಡಿಕೊಂಡಿದ್ದು , ಸದರಿ 5.8 ಎಕ್ಕರೆ ಜಮೀನಿನಲ್ಲಿ ಸ್ವತಹ ನಾವೇ ಅನುಭವದಲಿದ್ದು ವ್ಯವಸಾಯ ಮಾಡುತ್ತ ಜೀವನ ಸಾಗಿಸುತ್ತಿದ್ದೇವೆ. ಆದರೆ ಈಗ ಏಕಾಏಕಿ ಬಂದು ಜಮೀನು ನಮ್ಮದು ಬಿಟ್ಟು ಕೊಡಿ ಎಂದು ಕೇಳುತ್ತಿದ್ದಾರೆ ನಮಗೆ ನ್ಯಾಯ ಬೇಕು ನಮ್ಮ ಭೂಮಿ ನಮಗೆ ಸಿಗಬೇಕು ನ್ಯಾಯಾಲಯದ ಆದೇಶಕ್ಕೂ ಬೆಲೆ ಕೊಡದ  ಇಂತಹವರ ವಿರುದ್ಧ ಪೋಲಿಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಸ್ಥಳೀಯ ಗ್ರಾಮಸ್ಥ ಜಿ ಎಂ ನಾಗರಾಜು, ಮುನೇಗೌಡ ಮಾತನಾಡಿ  ಹಲವಾರು ವರ್ಷಗಳಿಂದ ನಿರಂತರವಾಗಿ ವ್ಯವಸಾಯ ಮಾಡುತ್ತಾ  ಅಡವಿಯಪ್ಪ ಮತ್ತು ಮಕ್ಕಳು  ಈ ಭೂಮಿಯನ್ನು  ನಂಬಿ ಜೀವನ ಸಾಗಿಸುತ್ತಿದ್ದಾರೆ  ಆದರೆ ಇಂದು ಭೂ ಮಾಫಿಯಾ ಹೆಚ್ಚಾಗಿದ್ದು ಜಾಗ ಕಸಿದುಕೊಳ್ಳಲು ಇಲ್ಲಸಲ್ಲದ ಪ್ರಯತ್ನ ನಡೆಯುತ್ತಿವೆ ಇಂದು ಮುಂಜಾನೆ ಇದ್ದಕ್ಕಿದ್ದಂತೆ ಜೆಸಿಪಿಗಳ ಮೂಲಕ ಬಂದ ಕೆಲವರು ಅರವಿಂದ್ ಕುಮಾರ್ ನಿರ್ಮಿಸಿ ಕೊಂಡಿದ್ದ ಶೆಡ್ ಅನ್ನು ದ್ವಂಸ ಮಾಡಿದ್ದಾರೆ ರೈತ ಕುಟುಂಬಕ್ಕೆ ಸುಮಾರು 10 ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಟ ಉಂಟಾಗಿದೆ ಅರವಿಂದ್ ಕುಮಾರ್ ಮತ್ತು ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕು. ನ್ಯಾಯಾಲಯದ ಅನುಮತಿ ಇಲ್ಲದೆ ಅತಿಕ್ರಮ ಪ್ರವೇಶ ಮಾಡಿದವರ ವಿರುದ್ಧ ಪೊಲೀಸ್ ಇಲಾಖೆ ಹಾಗೂ ನ್ಯಾಯಾಲಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
"ನಿನ್ನ ಬರುವಿಕೆಗಾಗಿ ನಾ ಕಾದಿರುವೆ"ವಿವೇಕಾನಂದರ ಮೇಲೆ ಗೌತಮ ಬುದ್ಧನ ಪ್ರಭಾವ ಅಗಾಧವಾದದ್ದು: ಮಾತಾಜೀ ತ್ಯಾಗಮಯೀ.ಸಂಘಟನೆಯ ಬಲವೇ ಪಕ್ಷದ ಯಶಸ್ಸಿನ ಆಧಾರ: ಆರ್. ಅಶೋಕ್ ಕರೆ​ರೇಷ್ಮೆ ಮತ್ತು ಖನಿಜ ಭವನಕ್ಕೆ ಮುಖ್ಯಮಂತ್ರಿ ಶಂಕುಸ್ಥಾಪನೆಒಳಮೀಸಲಾತಿ ಜಾರಿ: ದಶಕಗಳ ಕನಸು ನನಸು; ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಭರವಸೆಸಿದ್ದಗಂಗಾ ಮಠಕ್ಕೆ ಬಿ.ವೈ.ವಿಜಯೇಂದ್ರ ಭೇಟಿ: ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಶ್ರೀಗಳಿಗೆ ಆಹ್ವಾನಹೊಳಲ್ಕೆರೆಯಲ್ಲಿ 'ಬಿ.ಎಸ್.ವೈ ಅಭಿಮಾನೋತ್ಸವ'ದ ಪೂರ್ವಭಾವಿ ಸಭೆಚಿತ್ರದುರ್ಗದ ಮುರುಘಾಮಠಕ್ಕೆ ಬಿ.ವೈ. ವಿಜಯೇಂದ್ರ ಭೇಟಿ: 'ಬಿಎಸ್‌ವೈ ಅಭಿಮಾನೋತ್ಸವ'ಕ್ಕೆ ಶ್ರೀಗಳಿಗೆ ಆಮಂತ್ರಣಕೋಟೆ ನಾಡು ಚಿತ್ರದುರ್ಗದಲ್ಲಿ 'ಬಿ.ಎಸ್.ವೈ ಅಭಿಮಾನೋತ್ಸವ': ಭರ್ಜರಿ ಸಿದ್ಧತೆತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್‌ಗಳ ಅಳವಡಿಕೆ ಪೂರ್ಣ: ರೈತರ ಬಾಳಿಗೆ ಭದ್ರತೆ ನೀಡಿದ ಸರ್ಕಾರ