ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಅನನ್ಯ ಕ್ರಿಯೇಷನ್ಸ್ ದೇಸಿ ಬೆಳ್ಳಿತೆರೆ ಮತ್ತು ಮಾಧ್ಯಮ ತರಬೇತಿ ಸಂಸ್ಥೆಯು 10 ದಶಕವನ್ನು ಪೂರೈಸಿ 11ರ ವಸಂತಕ್ಕೆ ಕಾಲಿಡುತ್ತಿದ್ದು, ಸಂಸ್ಥೆಯಲ್ಲಿ ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಕುದ್ಮುಲ್ ರಂಗರಾವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾದ ಕಾರ್ಯಕ್ರಮ ಆಚರಿಸಲಾಯಿತು.
ಈ ವೇಳೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಜೇಶ್ ರಾಂಪುರ ಮಾತನಾಡಿ, ಸಂಸ್ಥೆಯು ಮಂಡ್ಯದಲ್ಲಿ ಹತ್ತು ವರ್ಷಗಳನ್ನು ಪೂರೈಸಿ 11 ವರ್ಷಕ್ಕೆ ಹೆಜ್ಜೆ ಇಡುತ್ತಿರುವುದು ನಮ್ಮೆಲ್ಲರಿಗೆ ಇನ್ನಷ್ಟು ಹೊಸತನ ತಂದಿದೆ. ನಮ್ಮ ಸಂಸ್ಥೆಯ ಪ್ರತಿಭೆಗಳು ಪ್ರಸ್ತುತ ದಿನಗಳಲ್ಲಿ ಹೊಸ ಮೈಲುಗಲ್ಲು ಸಾಹಸಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು.
ಅನನ್ಯ ಸಂಸ್ಥೆಯ ಅಧ್ಯಕ್ಷೆ ರಂಜಿತಾ ರಾಜೇಶ್ ರಾಂಪುರ ಮಾತನಾಡಿ, ನಮ್ಮ ಸಂಸ್ಥೆಯ ತರಬೇತಿ ಪಡೆದು ರಾಜ್ಯದ ನಾನಾ ಮಾಧ್ಯಮಗಳಲ್ಲಿ ಜಿಲ್ಲಾ ವರದಿಗಾರರಾಗಿ, ತಾಲೂಕಿನ ವರದಿಗಾರ ಹಾಗೂ ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಪ್ರತಿಭೆಗಳಾದ ನಿರಂಜನ್, ಚನ್ನಬಸಪ್ಪ, ಮಹಾಲಿಂಗ ದೊಡ್ಡಮನಿ, ಅಮರೇಶ್ ಸಿಎಂ, ಮರಿಲಿಂಗ, ಅಮರೇಶ್ ಸಿರಿಗೇರಿ, ರಾಘವೇಂದ್ರ, ಲೋಕೇಶ್, ಚೆಲ್ಲಯ್ಯ, ದುರುಗಪ್ಪ ಹೊಸಮನಿ, ಮುತ್ತಣ್ಣ, ಹಾಸನದ ಗಿರೀಶ್, ಮಂಜುನಾಥ, ಅವಿನಾಶ್, ಪೋಲಿಸ್ ಇಲಾಖೆಯ ಕೆಂಪರಾಜ, ಲಿಂಗರಾಜ್, ಸಣ್ಣಪ್ಪ, ಮನೋಜ್ ತಟ್ಟೆಹಳ್ಳಿ, ಶ್ರೀನಿವಾಸ್, ನಿಂಗರಾಜ್ ಹಾಗೂ ಶಿವರಾಮ್ ಮುಂತಾದವರು ಮಾಧ್ಯಮ ಕ್ಷೇತ್ರಗಳಲ್ಲಿ ನಮ್ಮ ಪ್ರತಿಭೆಗಳನ್ನು ಅನನ್ಯ ಸಂಸ್ಥೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದು ಸಾರ್ಥಕವಾಗಿದೆ ಎಂದು ತಿಳಿಸಿದರು.
ಸಂಶೋಧನಾ ಮತ್ತು ಮಾಧ್ಯಮಗಳಲ್ಲಿ ಅನನ್ಯದ ಬೆಳಕು:
ನಮ್ಮ ಅನನ್ಯ ಸಂಸ್ಥೆಯ ಹೆಮ್ಮೆಯ ಕಲಿಕಾರ್ಥಿ ಈಶ್ವರ್ ಸಿರಿಗೇರಿರವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಅಧ್ಯಯನ ಮಾಡಿದ ನಂತರ ನಾಡಿನ ಹೆಸರಾಂತ ಚಿತ್ರ ಸಾಹಿತಿ, ಸಂಗೀತ ನಿರ್ದೇಶಕರಾದ ಡಾ. ಹಂಸಲೇಖ ರವರ ಕುರಿತು ಸಂಶೋಧನೆ ಮಾಡಿರುವುದು ನಮ್ಮಗೆಲ್ಲ ಸಂತೋಷ ವಿಷಯವೆಂದು ಅಭಿಪ್ರಾಯಪಟ್ಟರು.
ಸರ್ಕಾರದ ಮಟ್ಟದಲ್ಲಿ ಸೇವೆಗೆ ಅನನ್ಯದ ಬೆಳಕು:
ಹಾಲಿ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಬಳಿ ಮುಖ್ಯ ಛಾಯಾಗ್ರಾಹಕರಾಗಿ ಸುಮಂತ್, ಇನ್ನು ರಾಜ್ಯದ ಹಾಲಿ-ಮಾಜಿ ಶಾಸಕರು, ಮಾಜಿ ಸಚಿವರು ಬಳಿ ಮಾಧ್ಯಮ ಸಂಯೋಜಕರಾಗಿ ಮತ್ತು ಪಿಆರ್ ಓ ಕರ್ತವ್ಯವನ್ನು ನಿರ್ವಹಿಸುತ್ತಾ ತಮ್ಮ ವೃತ್ತಿಪರರಾಗಿ ಮುನ್ನಡೆಸುತ್ತಿದ್ದಾರೆ.
ಕೊನೆಯಲ್ಲಿ ನಿಮ್ಮೆಲ್ಲರ ಹಾರೈಕೆ ಆಶೀರ್ವಾದ ಸಲಹೆ ಮತ್ತು ಮಾರ್ಗದರ್ಶನ ಸದಾಕಾಲವೂ ನಮ್ಮ ಅನನ್ಯ ಸಂಸ್ಥೆಗೆ ಹೀಗೆ ಮುಂದುವರಿಯಲಿ ಎಂದರು.
ಇದೇ ವೇಳೆಯಲ್ಲಿ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ರಂಜಿತ ರಾಜೇಶ್ ರಾಂಪುರ, ಗೋಪಾಲಕೃಷ್ಣ, ಜಯಸುಧಾ, ಪಂಕಜ ಪ್ರಶೀಲ ಮಂಡ್ಯ, ಲೀಲಾವತಿ ಕೆ. ಆರ್.ಪೇಟೆ, ಶ್ವೇತಾ ಕೊತತ್ತಿ, ಅಮೂಲ್ಯ ಯಶಸ್ವಿನಿ ಮನ್ವಿತ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.
“ಅನನ್ಯ ಕ್ರಿಯೇಷನ್ಸ್ ದೇಶಿ ಕಲೆ ಬೆಳ್ಳಿತೆರೆ ಮತ್ತು ಮಾಧ್ಯಮ ತರಬೇತಿ ಸಂಸ್ಥೆಯಲ್ಲಿ ಭಗವಾನ್ ಗೌತಮ ಬುದ್ಧ, ಬಸವೇಶ್ವರ, ಬಾಬಾಸಾಹೇಬ್ ಡಾ. ಬಿ.ಅರ್. ಅಂಬೇಡ್ಕರ್ ಹಾಗೂ ಕುದ್ಮುಲ್ ರಂಗರಾವ್ ಇವರುಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು”.
ನಾಡಿನ ಗಣ್ಯರಿಂದ ಶುಭ ಹಾರೈಕೆ:
ಅನನ್ಯ ದಶಕದ ಸಂಭ್ರಮಕ್ಕೆ ನಾಡಿನ ಹೆಸರಾಂತ ದಿಗ್ವಿಜರಾದ ಐದನೀ ಐಕಾನ್ ಡಾ. ಹಂಸಲೇಖ ಅವರು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಹಾಗೂ ಸಂಸ್ಕೃತಿ ಚಿಂತಕ ಕಾಳೇಗೌಡ ನಾಗವಾರ, ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ನಾಡಿನ ಪ್ರಗತಿಪರರು, ಮಾಧ್ಯಮ ವೃತ್ತಿಪರರು, ಮತ್ತಿತರರು ಅನನ್ಯ11ರ ವಸಂತಕ್ಕೆ ಶುಭ ಹಾರೈಸಿದ್ದಾರೆ.
“ಅತಿ ಶೀಘ್ರದಲ್ಲೇ ದಶಕದ ಸಂಭ್ರಮ ಮತ್ತು ಅನನ್ಯ ಕನ್ನಡ ಕಾರ್ಯಕ್ರಮದಲ್ಲಿ ಸಾಧನೆಗೈದ ಕಲಿಕಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುತ್ತದೆ”.
“ಮಂಡ್ಯ ನಗದಲ್ಲಿ ಕಳೆದ ಹತ್ತು ವರ್ಷಗಳನ್ನು ಪೂರೈಸಿ ಪ್ರಸ್ತುತ 11 ವರ್ಷಕ್ಕೆ ಹೆಜ್ಜೆ ಇಡುತ್ತಾ ಸಾಗುತ್ತಿರುವುದು ನಮ್ಮೆಲ್ಲರನ್ನು ಇನ್ನಷ್ಟು ಹೊಸತನವನ್ನು ನಮ್ಮ ಸಂಸ್ಥೆಯಲ್ಲಿ ತಯಾರಾದ ಹಲವಾರು ಪ್ರತಿಭಾವಂತ ಪ್ರತಿಭೆಗಳು ಪ್ರಸ್ತುತ ದಿನಗಳಲ್ಲಿ ಹೊಸ ಮೈಲುಗಲ್ಲು ಸಾಹಸಕ್ಕೆ ಸಾಕ್ಷಿಯಾಗಿದ್ದಾರೆ”.
ರಾಜೇಶ್ ರಾಂಪುರ, ಪ್ರದಾನ ಕಾರ್ಯದರ್ಶಿ, ಅನನ್ಯ ಕ್ರಿಯೇಷನ್ಸ್ ದೇಶಿ ಬೆಳ್ಳಿತೆರೆ ಮತ್ತು ಮಾಧ್ಯಮ ತರಬೇತಿ ಸಂಸ್ಥೆ ಮಂಡ್ಯ.


