Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಚನಗಳು ಮಾನವನ ಕಲ್ಯಾಣಕ್ಕಾಗಿ ರಚಿತವಾಗಿವೆ

Advertisement

ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ :
ಬಸವಣ್ಣನ ವಚನಗಳು ಮಾನವನ ಕಲ್ಯಾಣಕ್ಕಾಗಿ ರಚಿತವಾದ ಮಹಾ ವಾಕ್ಯಗಳು. ವಚನಗಳ ಅಧ್ಯಯನವನ್ನು ನಿರಂತರವಾಗಿ ಮಾಡಿದಾಗ ಮಾನವ ಸಹಜವಾಗಿ ಬದುಕಲು ಹಾಗೂ ಸರ್ವರನ್ನು ಪ್ರೀತಿಸಲು ಅರ್ಹನಾಗುತ್ತಾನೆ. ತನ್ನ ಕೆಟ್ಟ ಮಾರ್ಗವನ್ನು ಬದಲಾಯಿಸಿಕೊಳ್ಳಲು ಶಕ್ತಿವಂತನಾಗುತ್ತಾನೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಬಿಕೆ ರವಿಕುಮಾರ್ ರವರು ತಿಳಿಸಿದರು.

 ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರ ಜಯಂತಿ ಹಾಗೂ ವಚನ ಸಾಹಿತ್ಯ, ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡುತ್ತಾ ಬಸವೇಶ್ವರರು 12ನೇ ಶತಮಾನದಲ್ಲಿ ಹೊಸ ಯುಗವನ್ನು ಆರಂಭಿಸಿ, ಸಮಾಜದಲ್ಲಿದ್ದ ಎಲ್ಲ ಲೋಪ ದೋಷಗಳನ್ನು ತಮ್ಮ ವಚನಗಳ ಮೂಲಕ ತಿದ್ದಿದರು.ಮನುಷ್ಯ ಸಹಜ,ಸರಳ,ಬದುಕನ್ನು ನಡೆಸಲು ಸ್ಫೂರ್ತಿಯನ್ನು ತುಂಬಿದವರು.

 ಕಾಯಕವೇ ಕೈಲಾಸ ವೆಂದು ತಿಳಿಸಿ ಪ್ರತಿಯೊಬ್ಬ ಮನುಷ್ಯನು ನಮ್ಮ ಜೀವನವನ್ನು ನಡೆಸುವ ಜೊತೆಗೆ ಸಮಾಜದಲ್ಲಿ ಉತ್ತಮವಾಗಿ ಬದುಕುವ ಗುಣಲಕ್ಷಣಗಳನ್ನು ತಿಳಿಸಿದ ಮಹಾನ್ ವ್ಯಕ್ತಿ ಎಂದು ತಿಳಿಸಿದರು.

 ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಪಾರ ಸಾಹಿತ್ಯ ಕಾರ್ಯಕ್ರಮಗಳನ್ನು ರೂಪಿಸಿ ಕನ್ನಡ ಸಾಹಿತ್ಯದ ಚಿಂತನೆಗೆ ಅವಕಾಶ ಮಾಡಿರುವುದು ಬಹಳ ಸಂತೋಷವಾಗಿದೆ ಎಂದರು.

 ಮೈಸೂರಿನ  ಸುಧೀಂದ್ರ  ಹಾಗೂ ಚಾಮರಾಜನಗರದ ವೀರ ಶೆಟ್ಟಿ ರವರು ಬಸವಣ್ಣನ ವಚನಗಳನ್ನು ಹಾಡಿ ಗಮನ ಸೆಳೆದರು.

 ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಪದ್ಮಾ ಪುರುಷೋತ್ತಮ್ ರವರು ಬಸವಣ್ಣನ ಜೀವನ ಚರಿತ್ರೆಯನ್ನು ವಿವರಿಸಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಅಧ್ಯಕ್ಷತೆ ವಹಿಸಿ ಮಾತನಾಡಿ ಬಸವಣ್ಣನವರು ಕರ್ನಾಟಕದ ಹೆಮ್ಮೆ.  ವಿಶ್ವಕ್ಕೆ ಅಗತ್ಯವಾದ ವಚನಗಳನ್ನು ನೀಡಿ ಮಾನವನಿಗೆ ಅಂತರಂಗ ಮತ್ತು ಬಜರಂಗವಾದ ಸುದ್ದಿಯನ್ನು ಮಾಡಿಕೊಳ್ಳಲು ಚಿಂತನೆಯನ್ನು ವಚನಗಳ ಮೂಲಕ ನೀಡಿದವರು. ಇಂದು ಇಡೀ ಜಗತ್ತು ಬಸವಣ್ಣನವರ ವಚನಗಳ ಅಧ್ಯಯನ ಮತ್ತು ಪ್ರಚಾರಕ್ಕೆ ಸಾಕಷ್ಟು ಪ್ರಯತ್ನ ನಡೆಸಲಾಗುತ್ತಿದೆ. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯವು ಅಪೂರ್ವವಾದ ಮೌಲ್ಯವನ್ನು ಹೆಚ್ಚಿಸಿದೆ. ಬಸವಣ್ಣನ ವಚನಗಳು ಮಾನವನಿಗೆ ಅನಿವಾರ್ಯ. ವಚನಗಳ ತಿಳುವಳಿಕೆಯಿಂದ ಮಾನವ ಪರಿಶುದ್ಧನಾಗಬಹುದು ಎಂದರು.

 ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ,ಬಿಕೆ ಆರಾಧ್ಯ, ರವಿಚಂದ್ರಪ್ರಸಾದ್, ಶ್ರೀನಿವಾಸ ಗೌಡ, ಸರಸ್ವತಿ, ರಾಜಗೋಪಾಲ್, ಲಕ್ಷ್ಮೀ ನರಸಿಂಹ, ಜಗದೀಶ್ ಸುಬ್ಬಪ್ಪ  ಇದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತ ನಾಯಕ ಬಿ.ಎಸ್.ಯಡಿಯೂರಪ್ಪನವರ ಅಭಿಮಾನೋತ್ಸವದ ಪ್ರಯುಕ್ತ ವೈಭವೋಪೇತವಾಗಿ ನಡೆದ ಮೆರವಣಿಗೆ  ಜಿಟಿಟಿಸಿ ಡಿಪ್ಲೋಮಾ ಕೋರ್ಸ್‍ಗಳಿಂದ ಉಜ್ವಲ ಭವಿಷ್ಯ-ಪಿ.ರಘುವಸತಿ ರಹಿತರ ಪಟ್ಟಿಗೆ ಹೆಸರು ಸೇರಿಸಲು ಮೇ 15 ಕೊನೆಯ ದಿನಅರಿವು ಶೈಕ್ಷಣಿಕ ಸಾಲ ಯೋಜನೆ: ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಕ್ರಿಯಾಶೀಲ ವ್ಯಕ್ತಿತ್ವ ರೂಪಿಸಲು ಬೇಸಿಗೆ ಶಿಬಿರಗಳು ಸಹಕಾರಿ- ಕಲ್ಯಾಣಾಧಿಕಾರಿ ಜೆ.ವೈಶಾಲಿಕರವಸೂಲಿಗಾರರ ಹುದ್ದೆಯ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟ; ಆಕ್ಷೇಪಣೆಗೆ ಅವಕಾಶಸೇವಾದಳದ ಸಂಸ್ಥಾಪಕ ಹರ್ಡಿಕರ್ ರವರ ಜನ್ಮ ದಿನಾಚರಣೆವಿಶ್ವ ಅಮ್ಮಂದಿರ ದಿನಾಚರಣೆ-ಅಮ್ಮಾ ಕವಿತೆಕಾಂಗ್ರೆಸ್‌ಗೆ 'ಮೊಟ್ಟೆ' ಏಟಿನ ಭವಿಷ್ಯ ನುಡಿದ ಬಿಜೆಪಿ ನಾಯಕ!ಪತ್ನಿ-ಮಕ್ಕಳನ್ನು ಕರೆದೊಯ್ಯಲು ಹೋದ ಅಳಿಯನಿಗೆ ಬೆಂಕಿ ಹಚ್ಚಿದ ಅತ್ತೆ ಮನೆಯವರು!