Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಹಿಂದ ರಾಜ್ಯ ಸಂಚಾಲಕರಾಗಿ ವಿಜಯ್ ಭರತ್ ನೇಮಕ

Advertisement
ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಶತಮಾನಗಳಿಂದಲೂ ಶೋಷಿಸಲ್ಪಡುತ್ತಿರುವ ಅಲ್ಪಸಂಖ್ಯಾತ
, ಹಿಂದುಳಿದ ಮತ್ತು ದಲಿತರಿಗೆ ನ್ಯಾಯ ದೊರಕಿಸಿ ಕೊಡಲು `ಅಹಿಂದ' ಚಳುವಳಿಯನ್ನು ಹುಟ್ಟು ಹಾಕಿದ್ದು ಯಾದಗಿರಿ ಜಿಲ್ಲೆಯ ಲಕ್ಷಿö್ಮ ಮಿನರಲ್ ವಾಟರ್ ನ ವಿಜಯ್ ಭರತ್ ಮಾರುತಿರಾವ್ ಇವರನ್ನು ರಾಜ್ಯ ಸಂಚಾಲಕರನ್ನಾಗಿ ನಿಯೋಜಿಸಲಾಗಿದೆ.

`ಅಹಿಂದ' ರಾಜ್ಯ ಮುಖ್ಯ ಸಂಚಾಲಕರಾದ ಮೂರ್ತಿ ಸಿದ್ದಯ್ಯ ಈ ಕುರಿತು ಪ್ರಕಟಣೆ ನೀಡಿದ್ದು, ಇದೊಂದು ಸಾಮಾಜಿಕ ಜವಾಬ್ದಾರಿಯಾಗಿದೆ. "ಅಹಿಂದ" -ಚಳುವಳಿ ಸಂಘಟನೆಯ ರಾಜ್ಯ ಘಟಕದ ಕಲ್ಯಾಣ ಕರ್ನಾಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.


ಅಹಿಂದ ಸಮುದಾಯಗಳ ಬದುಕನ್ನು ಬದಲಾಯಿಸಲು ಮತ್ತು ಸೇವಾ ಭಾವನೆಗಳಿಂದ ಸೇವೆ ಮಾಡಲು, "ಅಹಿಂದ" -ಚಳುವಳಿ ಸಂಘಟಣೆಯ ಬೈಲಾ, ಉದ್ದೇಶಗಳು, ಗುರಿಗಳನ್ನು ಪಾಲಿಸುವುದು, ಅದರಂತೆ ಕಾರ್ಯನಿರ್ವಹಿಸಲು ಸಲಹೆ ನೀಡಿರುವ ಮೂರ್ತಿ ಸಿದ್ದಯ್ಯ ಇವರು, ಹೆಚ್ಚುವರಿಯಾಗಿ, ರಾಜ್ಯದ "ಕಲ್ಯಾಣ ಕರ್ನಾಟಕ" ಜಿಲ್ಲೆಗಳಾದ ಯಾದಗಿರಿ, ಬಿದರ್, ಗುಲ್ಬರ್ಗಾ, ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸಂಘಟಣೆಯ "ಜಿಲ್ಲಾ ಘಟಕ'ಗಳನ್ನು ರಚನೆ ಮಾಡಲು ಸೂಕ್ತ ಅಭ್ಯರ್ಥಿಗಳನ್ನು ಶಿಫಾರಸ್ಸು ಮಾಡುವುದು; ರಾಜ್ಯ ಮುಖ್ಯ ಸಂಚಾಲಕರು ಸೂಚಿಸಿದ ಜಿಲ್ಲೆಗಳ ಉಸ್ತುವಾರಿ ಕಾರ್ಯಗಳನ್ನು ನಿರ್ವಹಿಸಲು ಸೂಚಿಸಿದ್ದಾರೆ.


ರಾಜ್ಯವ್ಯಾಪಿ ಅಹಿಂದ ಸಮುದಾಯಗಳ ಆರ್ಥಿಕಶಕ್ತಿ ವೃದ್ಧಿಗಾಗಿ "ಅಹಿಂದ ಸಬಲೀಕರಣ ಸೌಹಾರ್ದ ಸಹಕಾರಿ ಬ್ಯಾಂಕ್" ಸ್ಥಾಪನೆ ಮಾಡಲು, ಉದ್ದೇಶಗಳ ಗುರಿಗಳನ್ನು ಜಾರಿಗೊಳಿಸಲು, ಸಮುದಾಯ, ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಮೂಲಕ ಕ್ರಮವಹಿಸಲು ವಿಜಯ್ ಭರತ್ ಅವರಿಗೆ ಸೂಚಿಸಿ ಈ ಹುದ್ದೆ ನೀಡಿರುವುದಾಗಿ ತಿಳಿಸಿದ್ದಾರೆ.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ