Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಸ್ತೆ ಹಾಗೂ ಚರಂಡಿ ಸರಿಪಡಿಸುವಂತೆ ನಗರಸಭೆಗೆ ವಿಕರವೇ ಮನವಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ : 
ನಗರದಲ್ಲಿ ರಸ್ತೆಗಳು ಗುಂಡಿಗಳಾಗಿದ್ದು
, ಡಾಂಬರು ಹಾಕಿ ಸರಿಪಡಿಸುವುದರ ಜೊತೆಗೆ ಮಣ್ಣು ಮತ್ತು ಕಸದಿಂದ ತುಂಬಿ ಹೋಗಿರುವ ಚರಂಡಿಗಳನ್ನು ಸ್ವಚ್ಚಗೊಳಿಸಬೇಕೆಂದು ದೊಡ್ಡಬಳ್ಳಾಪುರ ನಗರಸಭೆಯ ಪೌರಯುಕ್ತರಿಗೆ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

 ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎ ನಂಜಪ್ಪ ಮಾತನಾಡಿ ದೊಡ್ಡಬಳ್ಳಾಪುರ ನಗರದಲ್ಲಿ ರಸ್ತೆಗಳೆಲ್ಲಾ ಗುಂಡಿಗಳಾಗಿದ್ದು, ಈಗ ಮಳೆಗಾಲವು ಪ್ರಾರಂಭವಾಗುದರಿಂದ ಗುಂಡಿಗಳಲ್ಲಿ ಮಳೆ ನೀರು ನಿಂತು ವಾಹನಗಳ ಅಪಘಾತಗಳು ಹೆಚ್ಚಾಗುತ್ತಿವೆ. ಆದ್ದರಿಂದ ಗುಂಡಿ ಬಿದ್ದಿರುವ ರಸ್ತೆಗಳನ್ನು ಡಾಂಬರ್ ಹಾಕಿ ಸರಿಪಡಿಸಬೇಕು.

ಇದರ ಜೊತೆಗೆ  ದೊಡ್ಡಬಳ್ಳಾಪುರದಲ್ಲಿ ಒಳಚಂರಡಿಗಳು ತುಂಬಿ ಒಳಚರಂಡಿಯ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತದೆ ಕೆಲವೊಂದು ಸ್ಥಳಗಳಲ್ಲಿ ಸಂಪೂರ್ಣವಾಗಿ ಹಾಳಾಗಿದ್ದು,(ವನ್ನಿಗರಪೇಟೆ, ಜೆಸಿ ವೃತ್ತದಿಂದ ರಂಗಪ್ಪ ವೃತ್ತ, ದೇವರಾಜನಗರ, ಡಿ.ಕ್ರಾಸ್ ರಸ್ತೆ ಹೊಸ ಕರಗದ ಗುಡಿ ರಸ್ತೆ ದರ್ಜಿಪೇಟೆ ಮುಖ್ಯರಸ್ತೆ, ತಾಲ್ಲೂಕು ರಸ್ತೆ, ಮುಕ್ತಾಂಬಿಕ ರಸ್ತೆ, ಸಂಜಯನಗರ ಮುಂತಾದ ಕಡೆಗಳಲ್ಲಿ) ಇರುವ ಚರಂಡಿಗಳು ಮಣ್ಣು ಮತ್ತು ಕಸದಿಂದ ತುಂಬಿ ಹೋಗಿದ್ದು, ಇವುಗಳನ್ನು ಸ್ವಚ್ಚಗೊಳಿಸಿ ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದೇವೆ ಎಂದರು.

ನಗರದ ಜೆಸಿ ವೃತ್ತದಿಂದ ರಂಗಪ್ಪ ವೃತ್ತವರಗಿನ ಕಾಮಗಾರಿಯಿಂದಾಗಿ ರಸ್ತೆ ಹಾಳಾಗಿರುವ ಬಗ್ಗೆ ಈಗಾಗಲೇ ನಗರಸಭೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಆದರೂ ಯಾವುದೇ ಪ್ರಯೋಜನವಾಗಿಲ್ಲ ಈ ರಸ್ತೆಯನ್ನು ಸಂರ್ಪೂವಾಗಿ ಡಾಂಬರೀಕರಣಮಾಡಿ ಸಾರ್ವಜನಿಕ ಅನುಕೂಲಕ್ಕೆ ಅನುವು ಮಾಡಿಕೊಡಬೇಕೆಂದರು  ಒಂದು ವೇಳೆ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ನಗರಸಭೆಯ ಮುಂಭಾಗದಲ್ಲಿ ತಮಟೆ ಚಳವಳಿಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ  ಮಂಜುನಾಥ್ , ಪ್ರಮುಖರಾದ ಬಿ ಎನ್ ಚಂದ್ರಶೇಖರ್,  ಎನ್ ಚಂದ್ರಶೇಖರಯ್ಯ, ವೇಣುಗೋಪಾಲ್, ಬಿ ಎನ್ ಸೋಮಶೇಖರ್, ಆರ್ ಶಿವಕುಮಾರ್, ಸೌಮ್ಯಬಾಯಿ, ನಾಗಮಣಿ, ರೇಷ್ಮಾ ಖಾನಂ, ಪದ್ಮ ಸೇರಿದಂತೆ ಹಲವರು ಹಾಜರಿದ್ದರು.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕಾರ!ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಲೋಕಭವನಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್: ಸೋನಿಯಾ ಗಾಂಧಿ ಶುಭ ಹಾರೈಕೆ!ಡಿ.ಕೆ. ಶಿವಕುಮಾರ್ ಸಂಪುಟಕ್ಕೆ ಮುಹೂರ್ತ: ಡಿಸಿಎಂ ಆಗಿ ಜಿ. ಪರಮೇಶ್ವರ್ ಪದಗ್ರಹಣ, ರಾಜ್ಯಾದ್ಯಂತ ನೇರ ಪ್ರಸಾರ!ರಾಜ್ಯದ ಇತಿಹಾಸದಲ್ಲೇ ಪ್ರಥಮ: ಸ್ವಾಮೀಜಿ, ಫಾದರ್, ಮೌಲ್ವಿಗಳ ಸಮ್ಮುಖದಲ್ಲಿ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪದಗ್ರಹಣ!ಡಿ.ಕೆ.ಶಿವಕುಮಾರ್ ಸಿಎಂ ಬೆನ್ನಲ್ಲೇ ಕೆಪಿಸಿಸಿಗೆ ನೂತನ ಸಾರಥಿ: ಬಿ.ಕೆ. ಹರಿಪ್ರಸಾದ್ ಹೆಗಲಿಗೆ ಕೈ ಪಟ್ಟ?ದೆಹಲಿಯ ರೆಸ್ಟೋರೆಂಟ್‌ನಲ್ಲಿ ಭೀಕರ ಅಗ್ನಿ ದುರಂತ: 21 ಮಂದಿ ಸಜೀವ ದಹನ!ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪದಗ್ರಹಣ: ಇತಿಹಾಸ ಬರೆದ ಅದ್ಧೂರಿ ಸಮಾರಂಭ!ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ವಿ. ಸೋಮಣ್ಣಜಲ್ ಜೀವನ್ ಮಿಷನ್ 2.0: ನಾಗಾಲ್ಯಾಂಡ್ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿಜೆಡಿಎಸ್ ಬೂತ್ ಮಟ್ಟದ ಏಜೆಂಟ್‌ಗಳ ಕಾರ್ಯಾಗಾರ ಯಶಸ್ವಿ: ಪ್ರಮುಖ ನಾಯಕರಿಗೆ ಅಭಿನಂದನೆ