Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೂಲಭೂತ ಸೌಕರ್ಯ ಒದಗಿಸಲು ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ರಸ್ತೆ, ವಿದ್ಯುತ್ ದೀಪ, ಕುಡಿಯುವ ನೀರು ಸೇರಿದಂತೆ ಇನ್ನಿತರೆ ಮೂಲಸೌಕರ್ಯ ಒದಗಿಸುವಂತೆ  ಹಾಗು  ನಿವೇಶನಗಳಿಗೆ ಇ -ಖಾತೆ ಮಾಡುವಂತೆ ಆಗ್ರಹಿಸಿ ದೊಡ್ಡಬಳ್ಳಾಪುರ ತಾಲೂಕು ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಮುಂಭಾಗ ಗ್ರಾಮಸ್ಥರು ಪ್ರತಿಭಟಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಒದಗಿಸುವಂತೆ  ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಪಂ ಆಡಳಿತ ಕಾರ್ಯನಿರ್ವಹಿಸಬೇಕು. ಆದರೆ, ಇದ್ಯಾವುದನ್ನೂ ಮಾಡದೆ ಪಿಡಿಒ ಸುಮ್ಮನೆ ಕೂತಿದ್ದಾರೆ.

ಹಾಡೋನಹಳ್ಳಿ ಗ್ರಾಮ ಪಂಚಾಯಿತಿಗೆ 12 ಹಳ್ಳಿಗಳು ಸೇರುತ್ತವೆ. ಯಾವ ಗ್ರಾಮಗಳಲ್ಲೂ ಇ-ಖಾತೆ ಆಗಿಲ್ಲ. 50-60 ವರ್ಷಗಳ ಹಿಂದೆಯೆ  ಜಮೀನುಗಳನ್ನು ಸರ್ಕಾರ.ಜನತಾ ಸೈಟಿಗಾಗಿ ಸ್ವಾದೀನ ಪಡಿಸಿಕೊಂಡು ನೀವೇಶನ ಹಂಚಿಕೆ ಮಾಡಿ ಮನೆ ಕಟ್ಟಲು ಸಾಲವು ಸಹ ನೀಡಿದ್ದು  ಮನೆ ಕಟ್ಟಿದ  ಅನೇಕ ಜನರು ಸುಮಾರು 50-60 ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಅದರೆ ಇ ಖಾತೆಯ ಭಾಗ್ಯ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಗ್ರಾಪಂ ಮಾಜಿ ಸದಸ್ಯ ಆನಂದ್‌ ಕುಮಾರ್ ಮಾತನಾಡಿ, ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಿದಾಗ ಹಕ್ಕು ಪತ್ರ ಇಲ್ಲದೆ ಇ-ಖಾತೆ ಮಾಡಿಸಿ ಕೊಡಿ ಎಂದು ಹೇಳಿದ್ದರು. ಆದರೆ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವರು ಇ-ಖಾತೆ ಮಾಡಿಸಿ ಕೊಡುತ್ತಿಲ್ಲ. ಇದರಿಂದ ಪರಿಶಿಷ್ಟ ಪಂಗಡದವರು ಹೈರಾಣಾಗಿದ್ದಾರೆ. ಹಾಡೋನಹಳ್ಳಿ ಅಂಗನವಾಡಿ ಮಕ್ಕಳಿಗೆ ಆಟದ ಮೈದಾನ ಮತ್ತು ಕೈ ತೋಟಕ್ಕೆ ಜಾಗವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಖಾತೆ ಬದಲಾವಣೆ ಮಾಡಿಕೊಡಲು ಸೂಚನೆ ನೀಡಿದ್ದರೂ ಪಿಡಿಒ ಇದುವರೆಗೂ ಖಾತೆ ಬದಲಾವಣೆ ಮಾಡಿಲ್ಲ ಎಂದು ಆರೋಪಿಸಿದರು.

 ಹಾಡೋನಹಳ್ಳಿ ಗ್ರಾಮಸ್ಥರಾದ ಮಧು, ಹಾಗು ಮಂಜುನಾಥ್ ಮಾತನಾಡಿ ಗ್ರಾ ಪಂ ಯ ವ್ಯಾಪ್ತಿಯಲ್ಲಿ ಯಾವ  ಕೆಲಸಗಳು ಆಗುತ್ತಿಲ್ಲ. ಕುಡಿಯುವ ನೀರು ಚರಂಡಿಯ ವ್ಯವಸ್ಥೆ, ಇನ್ನೂ ಇತರೆ ಕೆಲಸಗಳು  ಹಾಗೆಯೇ ಉಳಿದಿವೆ  ಆರೋಪ ಮಾಡಿದರು.

ನೇರವಾಗಿ ಬಂದು ಮಾತಾಡಲಿ. ಯಾವ ಕೆಲಸ ಕೆಲಸ ಆಗಿಲ್ಲ ಎಂದು ಹೇಳಲಿ. ಆಗ ಹೇಳುತ್ತೇನೆ, ಇ- ಖಾತೆ ಆನ್ ಲೈನ್‌ನಲ್ಲಿ ನಡೆಯುತ್ತಿದೆ. ಇ-ಖಾತೆ ಬೇಕಾಗಿರುವ ಎಲ್ಲ ದಾಖಲೆ ನೀಡಿದರೆ ಮಾಡಿಕೊಡಲಾಗುವುದು.       ಗಂಗಬೈರಪ್ಪ,  ಹಾಡೋನಹಳ್ಳಿ ಪಿಡಿಒ.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ