Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಪೆಟ್ರೋಲ್‌, ಡೀಸೆಲ್‌ದರ ಏರಿಕೆ ಮಾಡಿದರೆ ಉಗ್ರ ಹೋರಾಟ-ಅಶೋಕ್

ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಸಂಕಷ್ಟದ ಕಾಲದಲ್ಲಿ ಪೆಟ್ರೋಲ್‌
, ಡೀಸೆಲ್‌ದರ ಇಳಿಸಲು ಕೇಂದ್ರ ಸರ್ಕಾರ ಕ್ರಮ ವಹಿಸಿದೆ. ಆದರೆ, ಕಾಂಗ್ರೆಸ್‌ಸರ್ಕಾರ ದರ ಏರಿಕೆ ಮಾಡಿ ಲಾಭ ಮಾಡಿಕೊಳ್ಳಲು ಮುಂದಾದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್ ಎಚ್ಚರಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಪೆಟ್ರೋಲ್‌, ಡೀಸೆಲ್‌ದರ ಇಳಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಹಿಂದೆ ತುಪ್ಪದ ಮೇಲಿನ ಜಿಎಸ್‌ಟಿ ಇಳಿಸಿದಾಗ ಕಾಂಗ್ರೆಸ್‌ಸರ್ಕಾರ ದರ ಏರಿಕೆ ಮಾಡಿತ್ತು. ಈಗ ತೈಲ ದರ ಏರಿಸಲು ಮುಂದಾದರೆ ತೀವ್ರ ಹೋರಾಟ ಮಾಡುತ್ತೇವೆ. ದರ ಇಳಿಕೆಯನ್ನು ಚುನಾವಣೆಗೆ ಲಿಂಕ್‌ಮಾಡಬಾರದು. ದೇಶದಲ್ಲಿ ವರ್ಷವಿಡೀ ಚುನಾವಣೆ ನಡೆಯುತ್ತಿರುತ್ತದೆ. ಯಾವುದೇ ಉತ್ತಮ ಕ್ರಮ ಕೈಗೊಂಡರೂ ಕಾಂಗ್ರೆಸ್‌ನವರು ಟೀಕೆ ಮಾಡುತ್ತಾರೆ. ಈಗಲೂ ಹಾಗೆಯೇ ಟೀಕೆ ಮಾಡುತ್ತಿದ್ದಾರೆ ಎಂದು ಅಶೋಕ್ ದೂರಿದ್ದಾರೆ.

ಸಿದ್ದರಾಮಯ್ಯ ಅವರು 1.32 ಲಕ್ಷ ಕೋಟಿ ಸಾಲ ಮಾಡಿದ್ದು, ಒಂದೊಂದೇ ತೆರಿಗೆಗಳು ಆರಂಭವಾಗಲಿದೆ. ಕಳೆದ ಮೂರು ವರ್ಷದಲ್ಲಿ ಅವರೊಬ್ಬರೇ ಮೂರೂವರೆ ಲಕ್ಷ ಕೋಟಿ ಸಾಲ ಮಾಡಿದ್ದು ಈ ಬಗ್ಗೆ ಅಧಿವೇಶನದಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಜಕ್ಕೂರಿನ ವಾಯುಯಾನ ತರಬೇತಿ ಶಾಲೆಯನ್ನು ಮುಚ್ಚಿ ಕಾಂಪ್ಲೆಕ್ಸ್‌ನಿರ್ಮಿಸುವ ಹುನ್ನಾರ ನಡೆದಿದ್ದು, ಅದರ ವಿರುದ್ಧ ಸದನದಲ್ಲಿ ಮಾತಾಡಿ ಉಳಿಸುವ ಕೆಲಸ ಮಾಡಿದ್ದೇವೆ. ಟಿ. ನರಸೀಪುರ ರೇಷ್ಮೆ ನೂಲು ತೆಗೆಯುವ ಕಾರ್ಖಾನೆಯ 6 ಎಕರೆ ಜಾಗವನ್ನು ಕಬಳಿಸುವುದರ ವಿರುದ್ಧ ಹೋರಾಟ ಮಾಡಿದ್ದು, ಅದನ್ನು ಮುಚ್ಚಲ್ಲ ಎಂದು ಸಚಿವರು ಹೇಳಿದ್ದಾರೆ ಎಂದು ವಿಪಕ್ಷ ನಾಯಕ ಅಶೋಕ್ ತಿಳಿಸಿದ್ದಾರೆ.

5 ಸಾವಿರ ಕೋಟಿ ಬಗ್ಗೆ ಉತ್ತರ ನೀಡದ ಸಿಎಂ:
ಬೆಂಗಳೂರಿನಲ್ಲಿ ಗಾಳಿಗೋಪುರದ ಯೋಜನೆಗಳನ್ನು ಸರ್ಕಾರ ನೀಡಿದೆ. ಮೊದಲಿಗೆ ಬ್ರ್ಯಾಂಡ್‌ಎಂದು ಹೇಳಿ
, ಇರುವ ಬೆಂಗಳೂರನ್ನೇ ಹಾಳು ಮಾಡಿದ್ದಾರೆ. ಹಣವಿಲ್ಲದಿದ್ದರೂ ಬಾಯಲ್ಲಿ ಬುರುಡೆ ಬಿಟ್ಟಿದ್ದಾರೆ. ಈ ಕುರಿತು ಕೂಡ ಸದನದಲ್ಲಿ ಚರ್ಚೆ ಮಾಡಿದ್ದೇವೆ. ಗೃಹಲಕ್ಷ್ಮಿಯ 5,000 ಕೋಟಿ, ಅನ್ನಭಾಗ್ಯದ 700 ಕೋಟಿ ಹೀಗೆ ಅನೇಕ ಯೋಜನೆಗಳಲ್ಲಿ ನುಂಗಿ ಹಾಕಿದ ಹಣದ ಬಗ್ಗೆ ಪ್ರಶ್ನೆ ಮಾಡಿದ್ದೇವೆ. ಆದರೆ, ಈ ಬಗ್ಗೆ ಸಿಎಂ ಹಾಗೂ ಸಚಿವರು ಸರಿಯಾದ ಉತ್ತರ ನೀಡಿಲ್ಲ ಎಂದು ಅಶೋಕ್ ಕಿಡಿಕಾರಿದ್ದಾರೆ.

ಕಾಂಗ್ರೆಸ್‌ಸರ್ಕಾರ ಜನರಿಗೆ ಬಾಂಡ್‌ನೀಡಿ ಹಣ ಸಂಗ್ರಹಿಸುತ್ತಿದೆ. ಖಜಾನೆ ಖಾಲಿಯಾಗಿರುವುದರಿಂದ 48,000 ಕೋಟಿ ರೂ. ಸಂಗ್ರಹಿಸಲಾಗುತ್ತಿದೆ. ಜನರು ಈ ಸಾಲವನ್ನು ತೀರಿಸಲು ಸಾಧ್ಯವಿಲ್ಲ. ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಐದು ಭಾಗ ಮಾಡಿ ಹಾಳು ಮಾಡಿದ್ದಾರೆ ಎಂದು ವಿಪಕ್ಷ ನಾಯಕರು ದೂರಿದ್ದಾರೆ.

ಮೆಟ್ರೊ ಯೋಜನೆ ಸಂಬಂಧ ಸಂಸದ ಪಿ. ಸಿ. ಮೋಹನ್‌ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಯಲ್ಲಿ ಉತ್ತರ ಬಂದಿದೆ. ಕೇಂದ್ರ ಕೇವಲ ಶೇ. 12ರಷ್ಟು ಪಾಲು ನೀಡಿದೆ ಎಂದು ರಾಜ್ಯ ಸರ್ಕಾರ ಉತ್ತರ ನೀಡಿದೆ. ಆದರೆ ವಾಸ್ತವದಲ್ಲಿ 50-50 ಪಾಲಿನಲ್ಲಿ ಅನುದಾನ ಹಂಚಿಕೆಯಾಗುತ್ತಿದೆ. ಸಂಪೂರ್ಣವಾಗಿ ಮೆಟ್ರೊ ಹೊಣೆಯನ್ನು ರಾಜ್ಯ ಸರ್ಕಾರಕ್ಕೆ ನೀಡಿಲ್ಲ. ಹಾಗೆ ಹೊಣೆ ನೀಡಿದರೆ ಜನರು ಟಿಪ್ಪರ್‌ನಲ್ಲಿ ಪ್ರಯಾಣ ಮಾಡಬೇಕಾಗುತ್ತದೆ. ಜಲಜೀವನ್‌ಮಿಷನ್‌ನಲ್ಲಿ ಬಳಕೆಯಾದ ಅನುದಾನದ ಬಗ್ಗೆ ಪ್ರಮಾಣಪತ್ರ ನೀಡಿದೆ. ಬಾಕಿ ಹಣ ಬಿಡುಗಡೆಯಾಗಿಲ್ಲ. ಸೋಮಾರಿ ಅಧಿಕಾರಿಗಳು ಬಳಕೆಯ ಪ್ರಮಾಣಪತ್ರ ನೀಡಿಲ್ಲ. ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣದ ದುರ್ಬಳಕೆ ಬಗ್ಗೆಯೂ ಮಾತನಾಡಿದ್ದೇವೆ. ಎಲ್ಲ ಸಮಸ್ಯೆಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದೇವೆ ಎಂದಿದ್ದಾರೆ.

ಐಪಿಎಲ್‌ಪಂದ್ಯದ ವೇಳೆ ಸರ್ಕಾರ ಬೆಂಗಳೂರಿನಲ್ಲಿ ಭದ್ರತೆ ಕಲ್ಪಿಸಬೇಕಿದೆ. ಈ ಹಿಂದೆ ಪೊಲೀಸ್‌ಭದ್ರತೆ ನೀಡದೆಯೇ, ಸಚಿವರ ಕುಟುಂಬದವರು ಫೋಟೋ ಶೂಟ್‌ಮಾಡಿಕೊಂಡು 11 ಅಮಾಯಕರ ಸಾವಾಗಿತ್ತು. ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಬೇಕು. ಅನಾಹುತವಾದರೆ ಸರ್ಕಾರವೇ ಹೊಣೆಯಾಗುತ್ತದೆ. ಶಾಸಕರಿಗೆ ಟಿಕೆಟ್‌ನೀಡಿದರೆ ಅದನ್ನು ಕಾರ್ಯಕರ್ತರಿಗೆ ನೀಡುತ್ತೇವೆ. ನಾನೇನೂ ಐಪಿಎಲ್‌ಪಂದ್ಯ ನೋಡಲು ಹೋಗಲ್ಲ. ಬೇರೆಯವರಿಗೆ ಅವಕಾಶ ನೀಡಲು ವಿಐಪಿ ಟಿಕೆಟ್‌ಕೊಡಬಹುದು. ಇದಕ್ಕಾಗಿ ನೀತಿ ನಿಯಮ ರೂಪಿಸಬೇಕೆಂದು ಚರ್ಚೆಯಾಗಿದೆ. ಆನ್‌ಲೈನ್‌ನಲ್ಲೇ ಕೊಡಿ ಎಂದು ನಾವು ಕೇಳಿದ್ದೇವೆ ಎಂದು ಅಶೋಕ್ ಹೇಳಿದ್ದಾರೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ