Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಂದಿಗಳ ಹಾವಳಿ ತಡೆಯಬೇಕು-ವಾಸೀಂ

Advertisement
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರಸಭೆಯ ಸಭಾಂಗಣದಲ್ಲಿ ಹಂದಿ ಹಾವಳಿ ತಡೆಗೆ ಮಹತ್ವದ ಸಭೆ ನಡೆಸಿ ಹಂದಿ ಮಾಲೀಕರಿಗೆ ಸೂಕ್ತ ಎಚ್ಚರಿಕೆ ನೀಡಲಾಯಿತು ಎಂದು ಪೌರಾಯುಕ್ತ ಎ ವಾಸೀಂ ತಿಳಿಸಿದರು.
 ನಗರ ವ್ಯಾಪ್ತಿಯಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು ಈಗಾಗಲೇ ಹಲವು  ಬಾರಿ ನಗರಸಭೆ ಸಭಾಂಗಣದಲ್ಲಿ ಸಭೆ ನಡೆಸಿ ಎಚ್ಚರಿಕೆ ನೀಡಲಾಗಿತ್ತು.


 ಸಹ ಎಚ್ಚೆತ್ತುಕೊಳ್ಳದೆ ಇರುವ ಕಾರಣ ಜನವರಿ 7 ರಂದು ನಗರ ವ್ಯಾಪ್ತಿಯ ವಾರ್ಡ್ ನಂ:02ರ ಅಂಜನೇಯ ದೇವಸ್ಥಾನದ ಹತ್ತಿರ ಹಂದಿಗಳು ಸಂಚಾರಕ್ಕೆ  ಅಡ್ಡವಾಗಿ ಬಂದ ಕಾರಣ  ಬೈಕ್ ಸವಾರನಿಗೆ ಅಪಘಾತವಾಗಿದ್ದು ತುಮಕೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರ ಸ್ಥಿತಿಯು ಚಿಂತಾಜನಕವಾಗಿರುತ್ತದೆ ಇದನ್ನು ಮನಗೊಂಡು ನಗರಸಭೆಯು ತುರ್ತಾಗಿ ಹಂದಿ ಮಾಲೀಕರ ಸಭೆ ನಡೆಸಬೇಕಾದ ಅನಿವಾರ್ಯವಾಗಿದೆ ಎಂದರು.

ಅಪಘಾತಕ್ಕೆ ಹಂದಿ ಮಾಲೀಕರೆ ಹೊಣೆಗಾರರು ಎಂದು ಸಭೆಯಲ್ಲಿ ಹಂದಿ ಮಾಲೀಕರಿಗೆ ಎಚ್ಚರಿಸಲಾಯಿತು.

ಈ ದಿನದಂದಲೇ ಸಂಪೂರ್ಣವಾಗಿ ಹಂದಿಗಳನ್ನು ನಗರ ಪ್ರದೇಶದಿಂದ ಹೊರಗಡೆ ಸಾಗಣಿಕೆ/ಸಾಕಣಿಕೆ ಮಾಡಲು ಸೂಚಿಸಿದೆ ತಪ್ಪಿದಲ್ಲಿ ನಗರಸಭೆ ವತಿಯಿಂದ ಹಂದಿಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಸಾಗಿಸುವ ವ್ಯವಸ್ಥೆ ಮತ್ತು ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಕಲಂ 223 ರಂತೆ ಯಾವುದೇ ನಷ್ಠಕ್ಕೆ ನಗರಸಭೆ ಜವಬ್ದಾರಿಯಾಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಸಹಾಯಕ ಕಾರ್ಯಪಾಲಕ ಅಭಿಯಂತರ, ಪರಿಸರ ರವೀಂದ್ರ ನಾಥ್ ಅಂಗಡಿ, ಹಿರಿಯ ಆರೋಗ್ಯ ನಿರೀಕ್ಷಕ  ಸುನೀಲ್ ಕುಮಾರ್ ಹೆಚ್.ಟಿ, ಸಂಧ್ಯಾ ವೈ.ಎಸ್ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕ ಅಶೋಕ್ ಕುಮಾರ್.ಎಸ್,  ಮಹಾಲಿಂಗರಾಜು, ನಯಾಜ್ ಶರೀಫ್ ನಗರದ ಹಂದಿ ಮಾಲೀಕರು ಇದ್ದರು.


ನಗರಸಭೆ ವತಿಯಿಂದ ಹಂದಿ ಮಾಲೀಕರಿಗೆ ಹಂದಿಗಳನ್ನು ತಕ್ಷಣವೇ ಹಿಡಿದು ನಗರದೊಳಗೆ ಬಿಡದಂತೆ ಎಚ್ಚರಿಸಿದ ತಕ್ಷಣವೇ ಮರುದಿನ ಬೆಳಿಗ್ಗೆ ಹಂದಿ ಮಾಲೀಕರು ಹಂದಿಗಳನ್ನು ಹಿಡಿದು ಹೊರಗಡೆ ಸಾಗಿಸಲಾಯಿತು ಮತ್ತೆ ಹಂದಿಗಳು ನಗರದೊಳಗೆ ಬಂದರೆ ಜನರಿಗೆ ಅಥವಾ ಸಂಚಾರಕ್ಕೆ ಅಡ್ಡಿ ಬಂದಲ್ಲಿ ಹಂದಿ ಮಾಲೀಕರೇ ಜವಾಬ್ದಾರರಾಗಿರಬೇಕಾಗುತ್ತದೆ ಹಂದಿಗಳನ್ನು ನಗರದೊಳಗೆ ಬಿಡದಂತೆ ನೋಡಿಕೊಳ್ಳಬೇಕು ಹಂದಿ ಮಾಲೀಕರಿಗೆ ಪದೇ ಪದೇ ನಗರದೊಳಗೆ ಹಂದಿಗಳನ್ನು ಬಿಟ್ಟರೆ ಹಂದಿ ಮಾಲೀಕರೇ ನೇರ ಹೊಣೆಗಾರರಾಗಿರುತ್ತಾರೆ ಎಚ್ಚೆತ್ತಿಕೊಂಡರೆ ನಿಮಗೆ ಒಳ್ಳೆಯದು ಮುಂದಾಗುವ ಅನಾಹುತಕ್ಕೆ ನೀವೇ ಹೊಣೆಗಾರರಾಗಬೇಕಾಗುತ್ತದೆ”.

ಹಂದಿಗಳನ್ನು ಹಿಡಿಯುವಂತೆ ಸಾರ್ವಜನಿಕರು ಕನ್ನಡ ಪರ ಸಂಘಟನೆಗಳು ದಲಿತಪರ ಸಂಘಟನೆಗಳು ಸಾಕಷ್ಟು ನಗರಸಭೆ ಪೌರಾಯುಕ್ತರುಗೆ ಮನವಿ ಸಲ್ಲಿಸಲಾಗಿದೆ ಹಂದಿಗಳು ಸಂಚಾರಕ್ಕೆ ಅಡ್ಡಿ ಮಾಡಿ ಸಾಕಷ್ಟು ಜನ ಕಾಲು ಕೈ ಮುರಿದುಕೊಂಡಿರುವ ದೃಶ್ಯಗಳು ದೂರ ನೀಡಲಾಗಿದೆ ಹಂದಿಗಳ ಕಾಟ ತಪ್ಪಿಸುವಂತೆ ಸಾರ್ವಜನಿಕರು ದಲಿತ ಪರ ಸಂಘಟನೆಗಳು ಸಂಘ ಸಂಸ್ಥೆಗಳು ರೈತ ಪರ ಸಂಘಟನೆಗಳು ಒತ್ತಾಯವಾಗಿದೆ ಸುಮಾರು ವರ್ಷಗಳಿಂದ ಹಂದಿ ಮಾಲೀಕರ ಮೇಲೆ ಸಭೆ ಹಂದಿಗಳನ್ನು ಹಿಡಿಯುವಂತೆ ತಿಳಿಸುತ್ತೀರಾ ಒಂದು ವಾರ ಆದ ನಂತರ ಮತ್ತೆ ಹಂದಿಗಳು ನಗರಕ್ಕೆ ಬಿಡುತ್ತಾರೆ ಈ ಸಲವಾದರೂ ಸೂಕ್ತವಾದ ಕಾನೂನು ಕ್ರಮ ಜರುಗಿಸಿ ಹಿಂದಿ ಮಾಲೀಕರ ವಿರುದ್ಧ ಹಂದಿಗಳನ್ನು ನಗರದೊಳಗೆ ಬಿಟ್ಟರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘ ಸಂಸ್ಥೆಗಳು ಸಾರ್ವಜನಿಕರು ಒತ್ತಾಯಿಸಿದ್ದಾರೆ”.

ಹಂದಿಗಳು ಸಂಚಾರಕ್ಕೆ ಸಾಕಷ್ಟು ಅಡ್ಡಿ ಮಾಡಿದ್ದಾವೆ ಸಣ್ಣ ಮಕ್ಕಳಿಗೂ ಹಾಗೂ ನಗರದ ಚರಂಡಿಯಲ್ಲಿ ಬಿದ್ದು ನೀರು ಮುಂದೆ ಹರಿಯುವುದಿಲ್ಲ ಗುಂಡಿ ಬಿದ್ದು ನೀರು ಅಲ್ಲೇ ನಿಂತು ಸೊಳ್ಳೆಗಳ ಕಾಟ ಜಾಸ್ತಿಯಾಗುತ್ತವೆ ಎಂದು ಸಾಕಷ್ಟು ಮನವಿಗಳು ಬಂದಿದ್ದಾವೆ ಆದಕಾರಣ ಸಾಕಷ್ಟು ಬಾರಿ ಹಂದಿ ಮಾಲೀಕರಿಗೆ ಸಭೆ ನಡೆಸಿ ಹಂದಿಗಳನ್ನು ನಗರದೊಳಗೆ ಬಿಡದಂತೆ ತಿಳಿಸಿದ್ದೇವೆ ಆದರೂ ಮುಂದಿನ ದಿನಗಳಲ್ಲಿ ನಗರದೊಳಗೆ ಹಂದಿಗಳನ್ನು ಬಿಟ್ಟರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಹಂದಿ ಮಾಲೀಕರಿಗೆ ತಿಳಿಸಿದ್ದೇವೆ”.
ಎ ವಾಸೀಂ, ಪೌರಾಯುಕ್ತರು, ನಗರಸಭೆ, ಹಿರಿಯೂರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ