ಚಂದ್ರವಳ್ಳಿ ನ್ಯೂಸ್, ದೆಹಲಿ:
ಜನಪ್ರತಿನಿಧಿಗಳ ನ್ಯಾಯಾಲಯವು ಅತ್ಯಾಚಾರ ಪ್ರಕರಣವೊಂದರಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಅಂತ ತೀರ್ಪಿತ್ತರೂ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಯಾಕಿನ್ನೂ ಸುಮ್ಮನಿದ್ದಾರೆ? ಅಂತ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರಶ್ನಿಸಿದರು.
ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರದಲ್ಲಿ ಸಚಿವರಾಗಿದ್ದಾರಲ್ಲ? ಪ್ರಜ್ವಲ್ ರೇವಣ್ಣನ ಸಂಬಂಧಿಯೊಬ್ಬರು ಯಾಕೆ ಪ್ರತಿಕ್ರಿಯೆ ನೀಡುತ್ತಿಲ್ಲ? ಇವರೆಲ್ಲರಿಗೆ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಗುರಾಣಿಗಳಾಗಿ ಬಳಸಲು ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಬೇಕು ಎಂದು ಟೀಕಾಪ್ರಹಾರ ಮಾಡಿದರು.
ಪ್ರಜ್ವಲ್ ಅಥವಾ ಸೂರಜ್ ರೇವಣ್ಣ ಮಾಡಿದ್ದು ತಪ್ಪು ಅಂತ ಒಬ್ಬ ಬಿಜೆಪಿ, ಜೆಡಿಎಸ್ ನಾಯಕನಾದರೂ ಹೇಳಿದ್ದಾನಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.


