ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಯ್ಯೋ ಕರ್ನಾಟಕ ಕಾಂಗ್ರೆಸ್ ಕಾಂಗ್ರೆಸ್ಸಿಗರೇ , "ಆರು ಹಡೆದವಳ ಮುಂದೆ, ಮೂರು ಹಡೆದವಳು" ಹೇಳಿದಂತಾಯಿತು.." ಎಂದು ನಿಮ್ಮ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಹಿಳೆಯರನ್ನು ತುಚ್ಯವಾಗಿ ಮಾತನಾಡಿರುವ ಬಗ್ಗೆ ಜಾಣ ಕುರುಡೇಕೆ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
4 ಎಕರೆಯಲ್ಲಿ ಬೆಳೆದಿದ್ದ ತೊಗರಿ ಬೆಳೆ ನಷ್ಟವಾಗಿದೆ ಎಂದು ಕಷ್ಟ ಹೇಳಿಕೊಳ್ಳಲು ಬಂದ, ಬಡ ರೈತನ ಮೇಲೆ ದರ್ಪ ತೋರಿದ ಖರ್ಗೆ ಬಗ್ಗೆ ಕನಿಕರ ತೋರುವ ಕಾಂಗ್ರೆಸ್, ವರ್ಷದ ಬೆಳೆ ಕಳೆದುಕೊಂಡು ಕಣ್ಣೀರಿಟ್ಟ ರೈತ ಮತ್ತು ಆತನ ಕುಟುಂಬದ ಬಗ್ಗೆ ಸಹಾನೂಭೂತಿ ತೋರದಿರುವುದು ನಾಚಿಕೆಗೇಡು.
ರಾಮನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಧಮ್ಕಿ ಹಾಕಿ, ಬೀದಿ ರೌಡಿಯಂತೆ ವರ್ತಿಸಿದ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ ರೌಡಿಸಂ ಕರಾಳ ಇತಿಹಾಸ ಮರೆತು ಬಿಟ್ಟಿರಾ?
ದೇಶದ ಮೊದಲ ಪ್ರಜೆ, ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಳು, ಇವಳು ಎಂದು ಏಕವಚನದಲ್ಲೇ ಸಿಎಂ ಸಿದ್ದರಾಮಯ್ಯ ಅಪಮಾನಿಸಿದ್ದನ್ನು ಆಡು ಭಾಷೆ ಎಂದು ತಿಪ್ಪೆ ಸಾರಿಸುತ್ತೀರಿ! ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಅದಕ್ಕೆ ಸಿದ್ಭಕ್ತರು ಮತ್ತು ಕಾಂಗ್ರೆಸ್ ಗುಲಾಮರು ಸಮರ್ಥಿಸಿಕೊಳ್ಳುವುದು ಮುಠ್ಠಾಳತನ ಅಲ್ಲವೇ ಕರ್ನಾಟಕ ಕಾಂಗ್ರೆಸ್? ಗಾಜಿನ ಮನೆಯಲ್ಲಿ ಕೂತ ಕಲ್ಲು ಹೊಡೆಯುವ ಕಮಂಗಿ ಕಾಂಗ್ರೆಸ್ಸಿಗರೇ ,
ಕೆಐಎಡಿಬಿಯಿಂದ ಸಿದ್ಧಾರ್ಥ ವಿಹಾರ ಟ್ರಸ್ಟ್ ಹೆಸರಲ್ಲಿ 5 ಎಕರೆ ಜಮೀನು ಲೂಟಿ ಹೊಡೆದಿದ್ದವರು ಖರ್ಗೆ ಕುಟುಂಬದವರಲ್ಲವೇ?
ಕುಮಾರಸ್ವಾಮಿ ಅವರು ಖರ್ಗೆ ಅವರನ್ನು ಪ್ರಶ್ನಿಸಿದ್ದರು ನಿಜ. ಅದೂ ಅವರ ಹುದ್ದೆ, ಹಿರಿತನಕ್ಕೆ ಗೌರವ ಕೊಟ್ಟು. ಸ್ವತಃ ಅವರೇ ಇದಕ್ಕೆ ಸಮಜಾಯಿಷಿ ಕೊಡುತ್ತಾರೆ ಎಂದು ಜನ ನಿರೀಕ್ಷೆ ಮಾಡಿದ್ದರು.
ಆದರೆ, ಟ್ರೊಲ್ ಪಾರ್ಟಿ ಕಾಂಗ್ರೆಸ್ ಫೀಲ್ಡಿಗೆ ಇಳಿದಿದೆ. ಇನ್ನೊಂದು ಪಕ್ಷದ ನಾಯಕರು ಎತ್ತಿದ ಆಕ್ಷೇಪಕ್ಕೆ ಉತ್ತರಿಸಿ ಮರ್ಯಾದೆ ಉಳಿಸಿಕೊಳ್ಳುವ ಬದಲು "ಆರು ಹಡೆದವಳ ಮುಂದೆ, ಮೂರು ಹಡೆದವಳು" ಹೇಳಿದಂತಾಯಿತು." ನಿಂದನೆಯನ್ನೇ ಸಮರ್ಥನೆ ಮಾಡಿಕೊಳ್ಳುತ್ತಿರುವ ನಿಮ್ಮ ನಿಕೃಷ್ಟತೆಗೆ ಮದ್ದಿಲ್ಲ ಎಂದು ಜೆಡಿಎಸ್ ಟೀಕಿಸಿದೆ.


