LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತುರುವನೂರು ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

Advertisement
Advertisement

 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ತುರುವನೂರಿನ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗಣೇಕಲ್ ಸಹೋದರರ ನೆನಪಿಗಾಗಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಡಾ.ಶೀತಲ್ ಪ್ರಶಾಂತ ಗಿಡ ನೆಟ್ಟು ಮಾತನಾಡಿ ಇಡಿ ಸಕಲ ಜೀವ ರಾಶಿಗಳಿಗೆ ಗಿಡ ಮರಗಳು ನೀಡುತ್ತಿರುವ ಕೊಡುವ ಅನನ್ಯವಾದುದು. ಮಾನವನ ದುರಾಸೆಗೆ ಗಿಡ ಮರಗಳು ನಾಶವಾಗುತ್ತಿದ್ದು, ಬಿಸಿಲಿನ ತಾಪಮಾನ ಜಾಸ್ತಿಯಾಗತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಪೋಷಿಸಿ ದೊಡ್ಡ ಮರವನ್ನಾಗಿ ಬೆಳೆಸಿದರೆ ಪರಿಸರಕ್ಕೆ ನೀಡುವ ಅದುವೆ ಬಹುದೊಡ್ಡ ಕೊಡುಗೆ ಎಂದು ಹೇಳಿದರು.

ರಾಮಲಿಂಗಪ್ಪ ಕಲ್ಯಾಣ ಮಂಟಪದ ಅಧ್ಯಕ್ಷ ಜಿ.ಚಿದಾನಂದಪ್ಪ ಮಾತನಾಡಿ ಮಾನವನ ಉಸಿರಾಟಕ್ಕೆ ಶುದ್ದ ಆಮ್ಲಜನಕವನ್ನು ನೀಡುವ ಗಿಡ-ಮರಗಳನ್ನು ಕಡಿಯದಂತೆ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಉಳಿಸಬೇಕಾಗಿರುವುದರಿಂದ ಎಲ್ಲೆಲ್ಲಿ ಖಾಲಿ ಜಾಗವಿದೆಯೋ ಅಲ್ಲೆಲ್ಲಾ ಗಿಡಗಳನ್ನು ನೆಟ್ಟು ನೀರುಣಿಸಿ ಪೋಷಿಸಬೇಕೆಂದು ಜನತೆಯಲ್ಲಿ ಮನವಿ ಮಾಡಿದರು.

ತುರುವನೂರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೃಷ್ಣಪ್ಪ ಬಿ, ಉಪ ಪ್ರಾಚಾರ್ಯರಾದ ಕಿರಣ್ ಮಜಾಯ್ ಬಂಡಿಗಡ್, ಉಪನ್ಯಾಸಕರುಗಳಾದ

ಕೃಷ್ಣಮೂರ್ತಿ ಸಿ, ಓಬಳೇಶ್ ಎಂ.ಪಿ, ನಾಗೇಂದ್ರ ಚೌದರಿ, ವಿಜ್ಞಾನ ಶಿಕ್ಷಕ ರಾಜೇಶ್ ಎಲ್.ಎಂ, ವಿವೇಕಾನಂದಪ್ಪ, ಎಂ.ತಿಪ್ಪೇಸ್ವಾಮಿ, ಟಿ.ವಿ.ದಿನೇಶ್‌ಕುಮಾರ್, ಎಲ್.ವಿ.ಉಮೇಶ್ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕುಟುಂಬ ಕಲಹ ಪ್ರಕರಣ ಅಧ್ಯಯನ: ಪುರುಷರಿಗೂ ಕಾನೂನು ರಕ್ಷಣೆ ಅಗತ್ಯ:ಆನಂದ್ ಸಿ ತಿರುಮಲಆನಂದ್ ಸಿ. ತಿರುಮಲಗೆ ಪ್ರತಿಷ್ಠಿತ 'ಸಾಧಕ ರತ್ನ ಪ್ರಶಸ್ತಿ' ಪ್ರದಾನಮಹಾಭಾರತದ ಭೀಷ್ಮನ ವ್ಯಕ್ತಿತ್ವ ಅತ್ಯಂತ ಕುತೂಹಲಕಾರಿ-ಡಾ. ತಾರಿಣಿ ಶುಭದಾಯಿನಿಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತು ಪ್ರಸನ್ನಾನಂದ ಸ್ವಾಮೀಜಿಗೆ ಮನವಿ ಸಲ್ಲಿಕೆಕೃತಕ ಬುದ್ಧಿಮತ್ತೆ ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಕೋಟೆ ಮುಂಭಾಗ ಮತ್ತೊಂದು ಟಿಕೆಟ್ ಕೌಂಟರ್ ತೆರೆಯುವ ಬೇಡಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಅನೇಕ ರಾಜಕೀಯ ಸವಾಲುಗಳನ್ನು ಎದುರಿಸುತ್ತಿದೆವಿಜೃಂಭಣೆಯಿಂದ ನಡೆದ ಸಂಭ್ರಮದ ಭೂತ ನೆರಿಗೆಗಾಳಿ ಪಟ ಕಲೆಗೆ ಉತ್ತೇಜನ ಅಗತ್ಯ-ಹೆಚ್. ಎಸ್. ಶಿವಶಂಕರ್ಆನೇಕಲ್ ಬಳಿ ಭೀಕರ ಅಗ್ನಿ ಅವಘಡ: ಧಗಧಗನೆ ಉರಿದು ಭಸ್ಮವಾದ 4 ಖಾಸಗಿ ಬಸ್‌ಗಳು!