LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜೃಂಭಣೆಯಿಂದ ನಡೆದ ಸಂಭ್ರಮದ ಭೂತ ನೆರಿಗೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಶನಿವಾರ
600 ವರ್ಷಗಳ ಇತಿಹಾಸ ಹೊಂದಿರುವ ಸಾಂಪ್ರದಾಯಿಕ ಭೂತನೆರಿಗೆ ಹಬ್ಬ ವಿಜೃಂಭಣೆಯಿಂದ ನಡೆಯಿತು. ಹಬ್ಬದ ಅಂಗವಾಗಿ ಕೆಂಚಣ್ಣ ಹಾಗೂ ಕರಿಯಣ್ಣ ವೇಷಧಾರಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ್ದು, ಅವರ ಆವೇಶ ಭರಿತ ನೃತ್ಯ ಮತ್ತು ಸಂಚಾರವನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಹಾಗೂ ಸಾರ್ವಜನಿಕರು ಆಗಮಿಸಿದ್ದರು.

ಪಾಳ್ಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಆರಂಭವಾದ ಆಚರಣೆ ಬಳಿಕ ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಸಮಾಪ್ತಿಯಾಯಿತು. ಕೆಂಚಣ್ಣ ಮತ್ತು ಕರಿಯಣ್ಣ ವೇಷಧಾರಿಗಳು ಕೈಯಲ್ಲಿ ಖಡ್ಗ ಹಾಗೂ ಗುರಾಣಿ ಹಿಡಿದು ಸಂಚರಿಸಿದ್ದು ಹಬ್ಬದ ಪ್ರಮುಖ ಆಕರ್ಷಣೆಯಾಗಿತ್ತು. ದೇವಸ್ಥಾನದಲ್ಲಿ ಮಂತ್ರೋಚ್ಚಾರಣೆ ಬಳಿಕ ವೇಷಧಾರಿಗಳ ಮೇಲೆ ದೇವತಾ ಆವಾಹನೆ ನಡೆಯುತ್ತದೆ ಎಂಬುದು ಸ್ಥಳೀಯರ ನಂಬಿಕೆ. ಆವಾಹನೆಯ ನಂತರ ಅವರು ಆವೇಶದಿಂದ ಗ್ರಾಮದ ಬೀದಿಗಳಲ್ಲಿ ಸಂಚರಿಸುತ್ತಾರೆ. ಹಸಿವು ತಣಿಸುವ ಸಂಕೇತವಾಗಿ ಹಲಸು, ಬಾಳೆಹಣ್ಣಿನ ರಸಾಯನ ಹಾಗೂ ಕೋಳಿಯನ್ನು ಸಮರ್ಪಿಸುವ ಸಂಪ್ರದಾಯವೂ ನಡೆಯಿತು. ಯುವಕರು ವೇಷಧಾರಿಗಳನ್ನು ಹುರಿದುಂಬಿಸಿ ಸಂಭ್ರಮಿಸಿದರೆ, ಮಹಿಳೆಯರು ಹಾಗೂ ಹಿರಿಯರು ದೂರದಿಂದಲೇ ಈ ವಿಶಿಷ್ಟ ಆಚರಣೆಯನ್ನು ವೀಕ್ಷಿಸಿದರು.

ಭೂತನೆರಿಗೆ ಹಬ್ಬಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆ. ಪ್ರತಿ ವರ್ಷ ಆಷಾಢ ಮಾಸದ ಏಕಾದಶಿಯ ಮರುದಿನವಾದ ದ್ವಾದಶಿಯಂದು ಈ ಆಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ವಿಷ್ಣುವಿನ ದ್ವಾರಪಾಲಕರಾದ ಜಯವಿಜಯರು ಶಾಪದ ಪರಿಣಾಮವಾಗಿ ಕಲಿಯುಗದಲ್ಲಿ ಕರಿಯಣ್ಣ ಮತ್ತು ಕೆಂಚಣ್ಣರ ರೂಪದಲ್ಲಿ ಭೂಲೋಕಕ್ಕೆ ಬಂದರು ಎಂಬ ಪೌರಾಣಿಕ ನಂಬಿಕೆ ಈ ಹಬ್ಬದ ಹಿನ್ನೆಲೆಯಾಗಿದೆ. ಕರಿಯಣ್ಣ ಹಾಗೂ ಕೆಂಚಣ್ಣ ವೇಷಧಾರಿಗಳು ಮನೆಗೆ ಬಂದರೆ ದುಷ್ಟಶಕ್ತಿಗಳು ದೂರವಾಗುತ್ತವೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಇಂದಿಗೂ ಜೀವಂತವಾಗಿದೆ. ಈ ವಿಶಿಷ್ಟ ಸಂಪ್ರದಾಯವನ್ನು ಕಣ್ತುಂಬಿಕೊಳ್ಳಲು ಪ್ರತಿವರ್ಷ ಸಾವಿರಾರು ಜನರು ತೂಬಗೆರೆ ಗ್ರಾಮಕ್ಕೆ ಆಗಮಿಸುತ್ತಿರುವುದು ವಿಶೇಷ ಸಂಗತಿ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕುಟುಂಬ ಕಲಹ ಪ್ರಕರಣ ಅಧ್ಯಯನ: ಪುರುಷರಿಗೂ ಕಾನೂನು ರಕ್ಷಣೆ ಅಗತ್ಯ:ಆನಂದ್ ಸಿ ತಿರುಮಲಆನಂದ್ ಸಿ. ತಿರುಮಲಗೆ ಪ್ರತಿಷ್ಠಿತ 'ಸಾಧಕ ರತ್ನ ಪ್ರಶಸ್ತಿ' ಪ್ರದಾನಮಹಾಭಾರತದ ಭೀಷ್ಮನ ವ್ಯಕ್ತಿತ್ವ ಅತ್ಯಂತ ಕುತೂಹಲಕಾರಿ-ಡಾ. ತಾರಿಣಿ ಶುಭದಾಯಿನಿಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತು ಪ್ರಸನ್ನಾನಂದ ಸ್ವಾಮೀಜಿಗೆ ಮನವಿ ಸಲ್ಲಿಕೆಕೃತಕ ಬುದ್ಧಿಮತ್ತೆ ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಕೋಟೆ ಮುಂಭಾಗ ಮತ್ತೊಂದು ಟಿಕೆಟ್ ಕೌಂಟರ್ ತೆರೆಯುವ ಬೇಡಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಅನೇಕ ರಾಜಕೀಯ ಸವಾಲುಗಳನ್ನು ಎದುರಿಸುತ್ತಿದೆವಿಜೃಂಭಣೆಯಿಂದ ನಡೆದ ಸಂಭ್ರಮದ ಭೂತ ನೆರಿಗೆಗಾಳಿ ಪಟ ಕಲೆಗೆ ಉತ್ತೇಜನ ಅಗತ್ಯ-ಹೆಚ್. ಎಸ್. ಶಿವಶಂಕರ್ಆನೇಕಲ್ ಬಳಿ ಭೀಕರ ಅಗ್ನಿ ಅವಘಡ: ಧಗಧಗನೆ ಉರಿದು ಭಸ್ಮವಾದ 4 ಖಾಸಗಿ ಬಸ್‌ಗಳು!