ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕೋಟೆ ಮುಂಭಾಗ ಟಿಕೆಟ್ ಕೌಂಟರ್ ಇದ್ದರೂ ಮತ್ತೊಂದು ಟಿಕೆಟ್ ಕೌಂಟರ್ ತೆರೆಯಲು ಹೊರಟಿರುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತದೆಂದು ನಗರಸಭೆ ಸ್ಥಾಯಿ ಸಮಿತಿ ಮಾಜಿ ಸದಸ್ಯ ಹೆಚ್.ಶ್ರೀನಿವಾಸ್ ಪುರಾತತ್ವ ಇಲಾಖೆ ಅಧಿಕಾರಿ ಸುಧೀರ್‍ಗೆ ಸೋಮವಾರ ಮನವಿ ಸಲ್ಲಿಸಿದರು.
ಹಾಲಿ ಇರುವ ಟಿಕೆಟ್ ಕೌಂಟರ್‍ನಿಂದ ಯಾರಿಗೂ ತೊಂದರೆಯಾಗುತ್ತಿಲ್ಲ. ಕಾಮನಬಾವಿ ಬಡಾವಣೆಯಲ್ಲಿ ವಾಸಿಸುತ್ತಿರುವ ಸಾವಿರಾರು ಜನ ಹಾಗೂ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಿಗಳಿಗೆ ಹೊಸ ಕೌಂಟರ್ ತೆರೆಯುವುದರಿಂದ ಸಂಚಾರಕ್ಕೆ ಅಡಚಣೆಯಾಗಲಿದೆ. ಅದಕ್ಕಾಗಿ ಹೊಸದಾಗಿ ಟಿಕೆಟ್ ಕೌಂಟರ್ ತೆರೆಯುವುದು ಬೇಡವೆಂದು ಶ್ರೀನಿವಾಸ್ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ನಗರಸಭೆ ಮಾಜಿ ಸದಸ್ಯ ರವಿಕುಮಾರ್, ಸಿದ್ದಪ್ಪ, ಪಿ.ರಮೇಶಾಚಾರ್, ಪಿ.ರಮೇಶ್, ಪ್ರಾಣೇಶ್, ತಿಪ್ಪೇಶ್, ಸತೀಶ್ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.



