ಬೆಂಗಳೂರು ವಿಶ್ವವಿದ್ಯಾಲಯದಿಂದ ವಿದೇಶಿ ಭಾಷೆಗಳ ಕಲಿಕೆಗೆ ಅವಕಾಶ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರವು ವಾರಾಂತ್ಯದಲ್ಲಿ ವಿದೇಶಿ ಭಾಷೆಗಳ ಕಲಿಕೆಗೆ ಅವಕಾಶ ಕಲ್ಪಿಸುತ್ತಿದೆ.
ಫ್ರೆಂಚ್, ಜರ್ಮನ್ಸ್ಪ್ಯಾನಿಷ್, ಜಪಾನೀಸ್, ಕೊರಿಯನ್, ಚೈನೀನ್, ಇಟಾಲಿಯನ್ಪೋರ್ಚುಗೀಸ್ ಭಾಷೆ ತರಗತಿಗಳು ಆರಂಭವಾಗುತ್ತಿದ್ದು, ದ್ವಿತೀಯ ಪಿಯುಸಿ ಅಥವಾ ಸಮಾನಂತರ ಶಿಕ್ಷಣದಲ್ಲಿ ಪಾಸಾಗಿರುವವರು ಅರ್ಜಿ ಸಲ್ಲಿಸಬಹುದು.

- Advertisement - 

ಉನ್ನತ ಶಿಕ್ಷಣ ಇಲಾಖೆಯ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ಅಡಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದು. ಪ್ರತಿಯೊಂದು ಭಾಷೆ   ಕೋರ್ಸಿಗೆ 1 ವರ್ಷದ ಸರ್ಟಿಫಿಕೇಟ್ ಕೋರ್ಸು, 1 ವರ್ಷದ ಯುಜಿ ಡಿಪ್ಲೊಮಾ ಕೋರ್ಸ್ ಹಾಗೂ 1 ವರ್ಷದ ಪಿಜಿ ಡಿಪ್ಲೊಮಾ ಕೋರ್ಸ್ ವ್ಯಾಸಂಗದ ಆಧಾರದಲ್ಲಿ ಸರ್ಟಿಫಿಕೇಟ್ ನೀಡಲಾಗುತ್ತದೆ.
ಆಸಕ್ತರು ದೂರವಾಣಿ ಸಂಖ್ಯೆ 080-29572019/9353251761ಗೆ ಕರೆ ಮಾಡಬಹುದು. ಅಥವಾ ವಿವಿಯ ಜಾಲತಾಣ www.bcu.ac.in ಗೆ ಭೇಟಿ ನೀಡಿ ಪಡೆಯಬಹುದು ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

- Advertisement - 

 

- Advertisement - 
Share This Article
error: Content is protected !!
";