ಡಾ.ಸಿ.ಎನ್.ಮಂಜುನಾಥ್ ಅವರಿಂದ ನಮ್ಮ ಕ್ಲಿನಿಕ್ ಪರಿಶೀಲನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು ಗ್ರಾಮಾಂತರ:

- Advertisement - 

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಾ.ಸಿ.ಎನ್.ಮಂಜುನಾಥ್ ಅವರು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೋಣನಕುಂಟೆ ವಾರ್ಡ್ ನ ಆರ್ ಬಿ ಐ ಬಡಾವಣೆಯಲ್ಲಿರುವ ಶಾಸಕರ ಕಚೇರಿಗೆ ಭೇಟಿ ನೀಡಿದರು.

- Advertisement - 

ಶಾಸಕರ ಕಚೇರಿ ಸಮೀಪದ ಸ್ಥಳದಲ್ಲೇ ಇರುವ ನಮ್ಮ ಕ್ಲಿನಿಕ್ ಗೆ ತೆರಳಿ ಪರಿಶೀಲನೆ ನಡೆಸಿದರು.

 

- Advertisement - 

ನಮ್ಮ ಕ್ಲಿನಿಕ್ ನಲ್ಲಿ ಲಭ್ಯವಿರುವ ವ್ಯವಸ್ಥೆ, ರೋಗಿಗಳ ಅನುಕೂಲತೆ, ದೈನಂದಿನ ಚಟುವಟಿಕೆಗಳ ಬಗ್ಗೆ ವಿಚಾರಿಸಿ ಆಸ್ಪತ್ರೆ ಬರುವಂತ ರೋಗಿಗಳ ಜೊತೆಗೆ ಆತ್ಮೀಯವಾಗಿ ವರ್ತಿಸಲು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಎಂ ಕೃಷ್ಣಪ್ಪ, ಕಾರ್ಪೊರೇಟರ್ ಗಳಾದ  ಸೋಮಣ್ಣ, ಜಯರಾಮಣ್ಣ, ಸಿ ನಾರಾಯಣ, ಇತರ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Share This Article
error: Content is protected !!
";