ಚಂದ್ರವಳ್ಳಿ ನ್ಯೂಸ್, ಹೊಸಪೇಟೆ(ವಿಜಯ್ ನಗರ):
ಹರಿಹರ ರಸ್ತೆಯಲ್ಲಿನ ಶ್ರೀ ಗುರು ಪಿ.. ಯು. ಕಾಲೇಜ್ ಬಳಿ ನಾಲ್ಕು ರಸ್ತೆಗಳು ಸಂಧಿಸುವ ವೃತ್ತಕ್ಕೆ ಇಂದು “ಸಿದ್ಧಾರ್ಥ ಗೌತಮ ಬುದ್ಧ ವೃತ್ತ ” ಎಂದು ನಾಮಕರಣ ಮಾಡಿ ನಾಮಫಲಕ ಉದ್ಘಾಟಿಸಲಾಯಿತು.
ಬುದ್ಧ ಪೂರ್ಣಿಮೆಯ ಹಿನ್ನೆಲೆಯಲ್ಲಿ ಹಂಪಿ ವಿಜಯನಗರ ಬುದ್ಧ ವಿಹಾರ ನಿರ್ಮಾಣ ಟ್ರಸ್ಟ್ ಇವರ ವತಿಯಿಂದ ನಗರದ ಹೊರವಲಯದಲ್ಲಿ ಬರುವ ಶ್ರೀ ಗುರು ಪಿ ಯು ಕಾಲೇಜು ಹತ್ತಿರ ನಾಲ್ಕು ರಸ್ತೆಗಳು ಸಂಧಿಸುವ ವೃತ್ತಕ್ಕೆ” ಸಿದ್ಧಾರ್ಥ ಗೌತಮ ಬುದ್ಧ ವೃತ್ತ ” ಎಂದು ನಾಮಕರಣ ಮಾಡಿ ನಾಮಫಲಕ ಅಳವಡಿಸಲಾಯಿತು.
ಹೊಸಪೇಟೆ ನಗರ ಶಾಂತಿಗೆ ಹೆಸರಾಗಿದೆ. ನಗರ ಆರಂಭ ದಲ್ಲಿಯೇ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಗೌತಮ ಬುದ್ಧ ನ ಹೆಸರಿನ ವೃತ್ತ ಇದ್ದರೆ, ನಗರಕ್ಕೆ ಶೋಬೆ ಎಂಭ ಭಾವನೆ, ನಂತರ ವಿಶ್ವ ನಾಯಕ, ಸಾಂಸ್ಕೃತಿಕ ನಾಯಕ, ಅಣ್ಣ ಬಸವಣ್ಣನವರ ವೃತ್ತ ನಂತರ ವಿಶ್ವ ಜ್ಞಾನಿ, ಸಂವಿದಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ವೃತ್ತ ಈ ಮೂವರು ಮಹಾನಾಯಕರ ವೃತ್ತಗಳು ಒಂದೇ ರಸ್ಥೆಯಲ್ಲಿ ಬರುವುದು ಮತ್ತೋಂದು ವಿಶೇಷ ಎಂದುಸಾಮಾಜಿಕ ಕಾರ್ಯಕರ್ತ ಸೋಮಶೇಖರ್ ಬಣ್ಣದಮನೆ ತಿಳಿಸಿದರು.ಇದೇ ಸಂದರ್ಭದಲ್ಲಿ ನಗರದ ಹಿರಿಯರು ಬುದ್ಧ, ಬಸವ, ಅಂಬೇಡ್ಕರ್, ರವರ ಆಶಯಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯೋಣ ಎಂದು ಹೇಳಿದರು .
ವೃತ್ತಕ್ಕೆ ಅಧಿಕೃತ ವಾಗಿ ನಾಮಕರಣ ಮಾಡಲು ವಿಜಯನಗರ ಜಿಲ್ಲಾಧಿಕಾರಿಗಳಿಗೆ,ವಿಜಯನಗರ ಕ್ಷೇತ್ರ ಶಾಸಕ ಗವಿಯಪ್ಪ ಅವರಿಗೆ, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಾಹದೇವಪ್ಪ ಅವರಿಗೆ ಅಂಚೆ ಪತ್ರದ ಮೂಲಕ ಅಧಿಕೃತವಾಗಿ ಸಿದ್ದಾರ್ಥ ಗೌತಮ ಬುದ್ಧ ವೃತ್ತವನ್ನು ಘೋಷಣೆ ಮಾಡಬೇಕೆಂದು ಮನವಿ ಪತ್ರಗಳನ್ನು ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎನ್.ಚಿನ್ನಸ್ವಾಮಿ ಸೋಸಲೆ, ಸೋಮಶೇಖರ್ ಬಣ್ಣದಮನೆ, ಮರಡಿ ಜಂಬಯ್ಯ ನಾಯಕ, ಸಣ್ಣ ಮಾರಪ್ಪ ಸ್ಲಂ ವೆಂಕಿ, ಶಿವಕುಮಾರ್, ಕೊಳಗಲ್ ಸೂರ್ಯನಾರಾಯಣ, ರಾಮಚಂದ್ರ ಬಾಬು, ಸಣ್ಣ ಈರಪ್ಪ, ವೀರಭದ್ರ ನಾಯಕ್, ಬಿಸಾಟಿ ಮಹೇಶ್, ವಡ್ಡಿನ ರಮೇಶ್, ಗಿರೀಶ್, ವಿನಾಯಕ್ ಶಟ್ಟರ್, ಯರಿಸ್ವಾಮಿ, ಜಯಪ್ಪ ಪಟ್ಟಿ, ಇಂತಿಯಾಜ್, ಮಾರುತಿ ಕಾಂಳ್ಳೆ, ಪಿಡಿಓ ಉಮೇಶ್, ಹೆಚ್.ಬಿ ಹಳ್ಳಿ ವಿರುಪಾಕ್ಷಿ, ಹಮಾಲಿ ಕಾರ್ಮಿಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.