Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಜೃಂಭಣೆಯ ಕರಗ ಮಹೋತ್ಸವ

Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡ ತುಮಕೂರು ಗ್ರಾಮದ ಆದಿಶಕ್ತಿ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಹೂವಿನ ಕರಗ ಮಹೋತ್ಸವವು ಶುಕ್ರವಾರ ಅತಿ ವಿಜೃಂಭಣೆ ಯಿಂದ ಗ್ರಾಮದಲ್ಲಿ ನಡೆಯಲಿದೆ ಎಂದು ಗ್ರಾಮದ ಮುಖ್ಯಸ್ಥರು ಹಾಗೂ ಸಮಿತಿ ಪ್ರಮುಖರಾದ ಎಲ್ಐಸಿ ಟಿ. ಜಿ. ಮಂಜುನಾಥ್ ಹೇಳಿದರು.
 

      ಬುದ್ಧ ಪೂರ್ಣಿಮೆ ಶುಕ್ರವಾರ ದಿ. 1.5.26 ರಂದು ಏಳನೇ ವಾರ್ಷಿಕೋತ್ಸವ ಹಾಗೂ ಅಮ್ಮನವರ ಕರಗ ಮಹೋತ್ಸವದ ಪ್ರಯುಕ್ತ ರೇಣುಕಾ ಎಲ್ಲಮ್ಮ ದೇವಾಲಯದಲ್ಲಿ ಬೆಳಿಗ್ಗೆ ಆರು ಗಂಟೆಗೆ ದೇವಿ ಸುಪ್ರಬಾತ, ಯಾಗಶಾಲಾ ಪ್ರವೇಶ, ಮಹಾ ಗಣಪತಿ ಪೂಜೆ, ದ್ವಜಾರೋಹಣ, ಅಂಕುರಾರ್ಪಣ, ದೇವಿಗೆ ಪ್ರದಾನ ಹೋಮ, ಬ್ರಹ್ಮ ಕುಂಬಾಭಿಷೇಕ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳು ನಡೆಯಲಿವೆ. ಇದೆ ದಿನ ರಾತ್ರಿ ಹತ್ತು ಗಂಟೆಯಿಂದ ಹನ್ನೊಂದು ಗಂಟೆ ಯೊಳಗೆ ಸ್ವಾತಿ ನಕ್ಷತ್ರ ಧನುರ್ ಲಗ್ನದಲ್ಲಿ ದೇವಿಯ ದೇವಸ್ಥಾನದಿಂದ ಶಿವಮೊಗ್ಗದ ಶ್ರೀ ಚನ್ನವೀರ ಚೇತನ ಡಾ. ಮರಳ ಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಮಹಾ ಸ್ವಾಮಿಗಳ ನೇತೃತ್ವದಲ್ಲಿ ರೇಣುಕಾ ಎಲ್ಲಮ್ಮ ದೇವಿಯ ಹೂವಿನ ಕರಗ ನಡೆಯಲಿದ್ದು ದೊಡ್ಡ ತುಮಕೂರಿನ ನಿವೃತ್ತ ಪೊಲೀಸ್ ಅಧಿಕಾರಿಗಳಾದ ನಾಗರಾಜ್ ರವರು ಕರಗದ ಪೂಜಾರಿಗಳಾಗಿದ್ದು ಕರಗವನ್ನು ಹೊರಲಿರುವುದು ವಿಶೇಷವಾಗಿದೆ.

ಇದೆ ಸಂದರ್ಭದಲ್ಲಿ ಗ್ರಾಮ ದೇವರುಗಳಾದ ಆವಲ ಕೊಂಡರಾಯ ಸ್ವಾಮಿ, ಮುತ್ತುರಾಯ ಸ್ವಾಮಿ, ಚನ್ನಕೇಶವ ಸ್ವಾಮಿ, ಆಂಜನೇಯ ಸ್ವಾಮಿ ದೇವರುಗಳಿಗೆ ಆರತಿ ಕಾರ್ಯಕ್ರಮ ಗಳು ಗ್ರಾಮಸ್ಥರೆಲ್ಲರ ಸಹಕಾರದೊಂದಿಗೆ ಅತಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಶ್ರೀ ರೇಣುಕಾ ಎಲ್ಲಮ್ಮ ದೇವಿ ಕರಗ ಸಮಿತಿ ಪ್ರಮುಖರಾದ ಆರ್. ನಾಗರಾಜ್, ಶ್ರೀಮತಿ ಸರೋಜ, ವಕೀಲರಾದ ಅಂಜನ್ ಮೂರ್ತಿ ಎಲ್. ಐ. ಸಿ. ಮಂಜುನಾಥ್ ತಿಳಿಸಿದ್ದಾರೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST