Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಾಲೆಗಳಲ್ಲಿ ಪತ್ರಿಕೆಗಳ ಓದು ಕಡ್ಡಾಯಗೊಳಿಸಿದ ಕ್ರಮಕ್ಕೆ ಕೆಯುಡಬ್ಲ್ಯೂಜೆ ಸ್ವಾಗತ

Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶಾಲೆಗಳಲ್ಲಿ ಪತ್ರಿಕೆಗಳ ಪ್ರಮುಖ ಸುದ್ದಿಗಳನ್ನು ಪ್ರತಿನಿತ್ಯ ಓದುವ ಕ್ರಮ ಕಡ್ಡಾಯ ಮಾಡಿರುವ ಸರ್ಕಾರದ ಕ್ರಮವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ) ಸ್ವಾಗತಿಸಿದೆ.

ಶಾಲೆಗಳಲ್ಲಿ ಓದುವ ಮತ್ತು ಬೋರ್ಡ್ ಮೇಲೆ ಬರೆಯುವ, ನೋಟೀಸ್ ಬೋರ್ಡ್ ನಲ್ಲಿ ಹಾಕುವ ಅಭ್ಯಾಸವು ಮಾಸುತ್ತಿದೆ. ಮೊಬೈಲ್ ಯುಗದ ಪ್ರಭಾವದಲ್ಲಿ ಹಿಂದಿನ ಪದ್ದತಿಗಳು ಮರೆತು ಹೋಗುತ್ತಿರುವ ಈ ಹೊತ್ತಿನಲ್ಲಿ ಸರ್ಕಾರದ ಕ್ರಮ ಅಗತ್ಯವಿತ್ತು ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ತಿಳಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ಅಲ್ಲಿನ ಸರ್ಕಾರಿ ಶಾಲೆಗಳಲ್ಲಿ ದಿನಪತ್ರಿಕೆ ಓದುವುದನ್ನು ಡಿಸೆಂಬರ್/2025 ರಲ್ಲಿ ಕಡ್ಡಾಯ ಮಾಡಿದ್ದು, ಇದೇ ರೀತಿಯಲ್ಲಿ ರಾಜ್ಯ ಸರ್ಕಾರ ಕೂಡ ಕ್ರಮಕೈಗೊಳ್ಳುವಂತೆ ಆಗ್ರಹಿಸಿ  ಕೆಯುಡಬ್ಲ್ಯೂಜೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಪ್ರತ್ಯೇಕವಾಗಿ ಮನವಿ ಮಾಡಿತ್ತು.

ಪರಿಣಿತರ ಅಭಿಪ್ರಾಯ ಮತ್ತು ಕೆಯುಡಬ್ಲ್ಯೂಜೆ-
ಮನವಿಗೆ ರಾಜ್ಯ ಸರ್ಕಾರ ಮನ್ನಣೆ ನೀಡಿ
, ಈ ನಿಟ್ಟಿನಲ್ಲಿ ಕೂಡಲೇ ಕ್ರಮ ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರನ್ನು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಭಿನಂದಿಸಿದ್ದಾರೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕುವೆಂಪು ವಿಶ್ವವಿದ್ಯಾನಿಲಯದಿಂದ ಐಜಿಪಿ ಹರ್ಷ ಪಿ.ಎಸ್ ಅವರಿಗೆ ಪಿಎಚ್‌ಡಿ ಪದವಿ ಘೋಷಣೆಪೋತಲೂರು ವೀರ ಭ್ರಮ್ಹೇಂದ್ರ ಆರಾಧನ ಮಹೋತ್ಸವನಟ ಚೇತನ್ ಅಹಿಂಸಾ ವಿರುದ್ಧ ಕನ್ನಡ ಪರ ಹೋರಾಟಗಾರರಿಂದ ಪ್ರತಿಭಟನೆಬಡಪ್ಪನಕಟ್ಟೆ   ಕಥೆ ಭಾಗ-6:ಕುಮಾರ್ ಬಡಪ್ಪಬಡಪ್ಪನಕಟ್ಟೆ  ಕಥೆ ಭಾಗ-7:ಕುಮಾರ್ ಬಡಪ್ಪಮೇಕೆದಾಟು ವಿರೋಧಿಸುವವರ ಪರ ಕಾಂಗ್ರೆಸ್ ಪ್ರಚಾರ: ಕುಮಾರಸ್ವಾಮಿ ಆಕ್ರೋಶಅಧಿಕಾರಿಗಳು ಸೂಟ್-ಬೂಟ್ ಸಂಸ್ಕೃತಿಯಿಂದ ಹೊರಬರಲಿ: ಅಧಿಕಾರಿಗಳಿಗೆ ಡಿ.ಕೆ. ಶಿವಕುಮಾರ್ ಕಿವಿಮಾತುಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದ ಮೈಸೂರಿನ ವಿದ್ಯಾರ್ಥಿನಿಮೂಲ ಸೌಕರ್ಯ ಅಭಿವೃದ್ಧಿ ಕುರಿತು ಡಿಕೆಶಿ ಹಾಗೂ ಎಲ್&ಟಿ ಅಧ್ಯಕ್ಷರ ಮಹತ್ವದ ಚರ್ಚೆಲೋಕಭವನದಲ್ಲಿ ನವೀಕೃತ ಸ್ವಾಗತ ಕೇಂದ್ರ ಹಾಗೂ 'ಕಾಮಧೇನು ಲೋಕ' ಉದ್ಘಾಟನೆ