ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ವೀರಬ್ರಹ್ಮೆಂದ್ರಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಮಧ್ವಿರಾಟ ಪೋತುಲೂರು ವೀರ ಬ್ರಹ್ಮೆಂದ್ರಸ್ವಾಮಿ ಯವರ 15ನೇ ವರ್ಷದ ಆರಾಧನಾ ಮಹೋತ್ಸವ ನಗರದ ಕನ್ನಡ ಜಾಗೃತ ಭವನದಲ್ಲಿ ನಡೆಯಿತು.
ವಿಶೇಷವಾಗಿ ಅಲಂಕರಿಸಿದ್ದ ಭಾವಚಿತ್ರಕ್ಕೆ ವಿಶ್ವಕರ್ಮ ಸಮುದಾಯದವರಿಂದ ಪೂಜೆ ಸಲ್ಲಿಸಲಾಯಿತು.ವಿವಿಧ ಕಲಾವಿದರಿಂದ ವೀರಭ್ರಮ್ಹೇಂದ್ರ ಸ್ವಾಮಿಗಳ ಗೀತೆಗಳ ಗಾಯನ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು ಮಾತನಾಡಿ, ವೀರಭ್ರಮ್ಹೇಂದ್ರ ಅವರ ತತ್ವ ಅರ್ಥ ಅದರ್ಶಗಳು ಇಂದಿಗೂ ಪ್ರಸ್ತುತ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಕಂದಿಮಲ್ಲಯ್ಯಪಲ್ಲಿಯಲ್ಲಿ 17 ನೇ ಶತಮಾನದಲ್ಲಿ ಜೀವಿಸಿದ್ದ ಪ್ರಸಿದ್ಧ ಹಿಂದೂ ಸಂತ, ಜ್ಯೋತಿಷಿ ಮತ್ತು ದಾರ್ಶನಿಕರಾಗಿದ್ದರು. ಅವರು ವಿಶೇಷವಾಗಿ ಭವಿಷ್ಯದ ಘಟನೆಗಳನ್ನು ಮುನ್ಸೂಚಿಸುವ ಕಾಲಜ್ಞಾನ, ಭವಿಷ್ಯ ಕೃತಿಯ ಲೇಖಕರಾಗಿ ಜನಪ್ರಿಯರಾಗಿದ್ದಾರೆ.
ವೀರಬ್ರಹ್ಮೇಂದ್ರ ಸ್ವಾಮಿಯವರು ಕೇವಲ ಸಂತನಾಗಿರದೆ, ಅಂದಿನ ಕಾಲದಲ್ಲಿನ ಮೂಢನಂಬಿಕೆಗಳನ್ನು ವಿರೋಧಿಸಿ, ಜ್ಞಾನ ಮತ್ತು ಕರ್ಮಯೋಗದ ಮಹತ್ವವನ್ನು ಸಾರಿದ ಮಹಾಪುರುಷರಾಗಿದ್ದಾರೆ.
ಅವರ ಆರಾಧನೆ ಅರ್ಥಪೂರ್ಣವಾಗಿಸಬೇಕಿದೆ. ಅವರ ಕಾಲಜ್ಞಾನ ವೈಜ್ಞಾನಿಕ ಸತ್ಯಗಳನ್ನು ಹೇಳುತ್ತಾ ಬಂದಿದ್ದು, ಬಹುಪಾಲು ನಿಜವಾಗಿವೆ. ಮಹನೀಯರ ತತ್ವಾದರ್ಶ ಸಮಾಜಕ್ಕೆ ದಾರಿದೀಪ ಎಂದರು.
ವೀರಬ್ರಹ್ಮಂದ್ರಸ್ವಾಮಿ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಮಾತನಾಡಿ, ಸಮಿತಿ ವತಿಯಿಂದ ಪ್ರತಿವರ್ಷಆರಾಧನೆ ನಡೆಸಿಕೊಂಡು ಬರಲಾಗುತ್ತಿದೆ. ಜ್ಞಾನದ ಕೊರತೆಯಿಂದ ವೈಜ್ಞಾನಿಕ ಸತ್ಯಗಳಿಂದ ದೂರ ಉಳಿದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮುದಾಯದ ಗಣ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ನಿಗಮದ ಅಧ್ಯಕ್ಷ ಪಿ.ಸುಜ್ಞಾನಮೂರ್ತಿ, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಈಶ್ವರಾಚಾರ್, ಬಿ.ಉಮೇಶ್, ಬಾಬು ಪತ್ತಾರ್, ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಶೋಭಾ, ರಾಜ್ಯ ಉಪಾಧ್ಯಕ್ಷ ರವಿಶಂಕರ್, ಶರತ್ ಚಂದ್ರ, ಲಕ್ಷ್ಮಣ್,ಚಂದ್ರಶೇಖರ್, ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ರಾಜ್ಯ ಅಧ್ಯಕ್ಷ ಎಚ್.ಎಸ್.ನಾಗೇಶ್ ಹಾಗೂ ಟ್ರಸ್ಟಿನ ಗೌರವ ಅಧ್ಯಕ್ಷ ಬೋಜಾಚಾರ್, ಅಧ್ಯಕ್ಷ ವೆಂಕಟಾಚಲಪತಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಯಶೋದ ಜಗದೀಶ ಮಂಜುನಾಥ್,ಕುಮಾರ್,ರಮೇಶಾಚಾರ್, ವೇಣುಗೋಪಾಲಾಚಾರ್, ಪರಮ ಶಿವಮೂರ್ತಿ, ಮೋಹನಾಚಾರ್, ಮನೋಹರ್, ವೆಂಕಟೇಶ್ ಮೂರ್ತಿ, ನಾರಾಯಣ ಚಾರ್, ಇತರರು ಹಾಜರಿದ್ದರು.


