Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿದ್ದರಾಮಯ್ಯ 'ಮೌನ'? ಅಹಿಂದ ಸಚಿವರಲ್ಲಿ ಶುರುವಾಯ್ತು ನಡುಕ: ದೆಹಲಿಗೆ ದೌಡಾಯಿಸಿದ ನಾಯಕರು!

Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಕಿಚ್ಚು ಈಗ ಮತ್ತಷ್ಟು ಜೋರಾಗಿದೆ. ಈವರೆಗೆ ಗಟ್ಟಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ
'ಬಂಡೆ'ಯಂತಹ ಧೋರಣೆ ಈಗ ಹಠಾತ್ 'ಮೌನ'ಕ್ಕೆ ಜಾರಿದ್ದು, ಇದು ಅಹಿಂದ ವರ್ಗದ ಸಚಿವರ ನಿದ್ದೆಗೆಡಿಸಿದೆ.

ಸಿಎಂ ಮೌನ ಬಣದ ಸಚಿವರಿಗೆ ಆತಂಕ ತಂದಿದ್ದು, ಅಸ್ತಿತ್ವ ಉಳಿಸಿಕೊಳ್ಳಲು ಸಚಿವರು ಈಗ ಹೈಕಮಾಂಡ್ ಮೊರೆ ಹೋಗಿದ್ದಾರೆ.

ಸಿಎಂ ಮೌನ: ಸೀಕ್ರೆಟ್ ಮೀಟಿಂಗ್‌ನಲ್ಲೂ ಸಿಗದ ಉತ್ತರ!
ಇತ್ತೀಚೆಗೆ ಸಚಿವರಾದ ಹೆಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ, ಡಾ. ಜಿ. ಪರಮೇಶ್ವರ್ ಮತ್ತು ಜಮೀರ್ ಅಹ್ಮದ್ ಖಾನ್ ಸೇರಿದಂತೆ ಪ್ರಮುಖ ಅಹಿಂದ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದ ವಸ್ತುಸ್ಥಿತಿಯ ಬಗ್ಗೆ ಚರ್ಚಿಸಿದ್ದರು.

ಆದರೆ, ಈ ರಹಸ್ಯ ಸಭೆಯಲ್ಲಿ ಸಿದ್ದರಾಮಯ್ಯ ಅವರು ಯಾವುದೇ ಸ್ಪಷ್ಟ ಭರವಸೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.

ಈ ಮೌನವು "ಒಳಗಿಂದೊಳಗೆ ಏನೋ ದೊಡ್ಡ ಬದಲಾವಣೆ ನಡೆಯುತ್ತಿದೆ" ಎಂಬ ಅನುಮಾನವನ್ನು ಅಹಿಂದ ಬಣದಲ್ಲಿ ದಟ್ಟವಾಗಿಸಿದೆ.

ದೆಹಲಿ ಮಟ್ಟದಲ್ಲಿ ಅಹಿಂದ ನಾಯಕರ ದಾಳ:
ಸಿಎಂ ನಿಲುವಿನಿಂದ ಕಂಗಾಲಾದ ಸತೀಶ್ ಜಾರಕಿಹೊಳಿ ಮತ್ತು ಮಹದೇವಪ್ಪ ಅವರು ತುರ್ತಾಗಿ ದೆಹಲಿಗೆ ಹಾರಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರನ್ನು ಭೇಟಿಯಾಗಿರುವ ಈ ನಾಯಕರು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ವಿಶೇಷ ಅಂಶ: ಸತೀಶ್ ಜಾರಕಿಹೊಳಿ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಒಂದು ವೇಳೆ ನಾಯಕತ್ವ ಬದಲಾವಣೆಯಾದರೆ ತಮಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡಬೇಕು ಎಂಬ ಬೇಡಿಕೆಯನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಡಿಕೆಶಿಗೆ ಬರ್ತ್‌ಡೇ ಗಿಫ್ಟ್? ಪರಮೇಶ್ವರ್ ಹೇಳಿಕೆ ನೀಡಿದ ಸುಳಿವು:
ಮೇ 15ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬವಿದ್ದು
, ಈ ಸಂದರ್ಭದಲ್ಲಿ ಹೈಕಮಾಂಡ್‌ನಿಂದ ಅವರಿಗೆ 'ಬಿಗ್ ಗಿಫ್ಟ್' ಸಿಗಲಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಇಷ್ಟು ದಿನ "ಸಿಎಂ ಬದಲಾವಣೆ ಇಲ್ಲ" ಎನ್ನುತ್ತಿದ್ದ ಗೃಹ ಸಚಿವ ಜಿ. ಪರಮೇಶ್ವರ್, ಈಗ "ಹೈಕಮಾಂಡ್ ನಿರ್ಧಾರವೇ ಅಂತಿಮ" ಎನ್ನುತ್ತಿರುವುದು ಈ ಅನುಮಾನಕ್ಕೆ ಪುಷ್ಠಿ ನೀಡಿದೆ.

ಮುಂದೇನು?-
ಸಿದ್ದರಾಮಯ್ಯ ಅವರ ಆಪ್ತ ಬಣವೇ ಈಗ ಆತಂಕಕ್ಕೊಳಗಾಗಿರುವುದು ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ. ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರಿಗೆ ಪಟ್ಟಾಭಿಷೇಕ ಮಾಡುತ್ತಾ
? ಅಥವಾ ಅಹಿಂದ ವರ್ಗದ ಹಿತಾಸಕ್ತಿ ಕಾಪಾಡಲು ಹೊಸ ಸೂತ್ರ ಹೆಣೆಯುತ್ತಾ? ಎಂಬುದನ್ನು ಕಾದುನೋಡಬೇಕಿದೆ.

ಒಟ್ಟಿನಲ್ಲಿ, ಮೇ ಎರಡನೇ ವಾರದ ವೇಳೆಗೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ದೊಡ್ಡ ಮಟ್ಟದ ರಾಜಕೀಯ ಧ್ರುವೀಕರಣ ಸಂಭವಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕುವೆಂಪು ವಿಶ್ವವಿದ್ಯಾನಿಲಯದಿಂದ ಐಜಿಪಿ ಹರ್ಷ ಪಿ.ಎಸ್ ಅವರಿಗೆ ಪಿಎಚ್‌ಡಿ ಪದವಿ ಘೋಷಣೆಪೋತಲೂರು ವೀರ ಭ್ರಮ್ಹೇಂದ್ರ ಆರಾಧನ ಮಹೋತ್ಸವನಟ ಚೇತನ್ ಅಹಿಂಸಾ ವಿರುದ್ಧ ಕನ್ನಡ ಪರ ಹೋರಾಟಗಾರರಿಂದ ಪ್ರತಿಭಟನೆಬಡಪ್ಪನಕಟ್ಟೆ   ಕಥೆ ಭಾಗ-6:ಕುಮಾರ್ ಬಡಪ್ಪಬಡಪ್ಪನಕಟ್ಟೆ  ಕಥೆ ಭಾಗ-7:ಕುಮಾರ್ ಬಡಪ್ಪಮೇಕೆದಾಟು ವಿರೋಧಿಸುವವರ ಪರ ಕಾಂಗ್ರೆಸ್ ಪ್ರಚಾರ: ಕುಮಾರಸ್ವಾಮಿ ಆಕ್ರೋಶಅಧಿಕಾರಿಗಳು ಸೂಟ್-ಬೂಟ್ ಸಂಸ್ಕೃತಿಯಿಂದ ಹೊರಬರಲಿ: ಅಧಿಕಾರಿಗಳಿಗೆ ಡಿ.ಕೆ. ಶಿವಕುಮಾರ್ ಕಿವಿಮಾತುಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದ ಮೈಸೂರಿನ ವಿದ್ಯಾರ್ಥಿನಿಮೂಲ ಸೌಕರ್ಯ ಅಭಿವೃದ್ಧಿ ಕುರಿತು ಡಿಕೆಶಿ ಹಾಗೂ ಎಲ್&ಟಿ ಅಧ್ಯಕ್ಷರ ಮಹತ್ವದ ಚರ್ಚೆಲೋಕಭವನದಲ್ಲಿ ನವೀಕೃತ ಸ್ವಾಗತ ಕೇಂದ್ರ ಹಾಗೂ 'ಕಾಮಧೇನು ಲೋಕ' ಉದ್ಘಾಟನೆ