ನಮ್ಮೂರಿನ ಪಯಣದ ನೆನಪು

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಮ್ಮೂರಿನ ಪಯಣದ ನೆನಪು
ನಮ್ಮೂರಿನ ಪಯಣವೊಂದು
,
ನಮ್ಮ ಮನದ ಸಂತಸದ ಹೊನು.

ಬೆಳಗಿನ ಜಾವ ಕಾರಿನಲ್ಲಿ ಹೊರಟು,
ನಗುತ ನಗುತ ಸಾಗಿದೆವು ನಾವು.
ಹಸಿರು ಬೆಟ್ಟಗಳ ಸೌಂದರ್ಯ ನೋಡಿ
,

- Advertisement - 

ತಂಪು ಗಾಳಿಯ ಸಿಹಿಯನ್ನು ಅನುಭವಿಸಿ,
ಕುಟುಂಬದ ಜೊತೆ ಕಳೆದ ಕ್ಷಣಗಳು,
ಮನದೊಳಗೇ ಉಳಿದ ನೆನಪುಗಳು.

ಹುಡುಕಿದೆವು ಒಳ್ಳೆಯ ಹೋಟೆಲ್,
ಘಮಘಮಿಸಿದ ರುಚಿಯ ವಾಸನೆ.
ಕರಿದ ಆಲೂಗಡ್ಡೆ ಸುವಾಸನೆ
,

- Advertisement - 

ತಡೆಯಲಾರದ ತಿನ್ನುವ ಬಯಕೆ.
ರುಚಿಯಾದ ಊಟವನ್ನು ಸವಿದು
,
ನಗುವಿನ ಕ್ಷಣಗಳಲ್ಲಿ ಕಳೆದೆವು ದಿನ.

ಸಂತೋಷದಿಂದ ತುಂಬಿದ ಆ ಸಮಯ,
ಮನದಲ್ಲಿ ಉಳಿದ ಅಮೂಲ್ಯ ನೆನಪು.
ನನ್ನಪ್ಪನೊಂದಿಗಿನ ಕಾರಿನ ಪಯಣ
,

ಫೋಟೋಗಳಲ್ಲಿ ಬಂಧಿಸಿದ ಸಿಹಿ ಕ್ಷಣ.
ಹೃದಯದಲ್ಲಿ ಉಳಿದ ಮಧುರ ಅನುಭವ
,
ಅಪ್ಪನ ಜೊತೆಗಿನ ಆ ಪಯಣದ ಸ್ಮರಣ.

ಕೊನೆಯಲ್ಲಿ ಪಯಣ ಮುಗಿಸಿ ನಾವು,
ಸಂತೋಷದಿಂದ ಸೇರಿದೆವು ಅಜ್ಜಿಯ ಮನೆಗೆ.
ಕವಿತೆ
:ಅನುಷ್ಕಾ, 8ನೇ ತರಗತಿ, ಒನ್ ವರ್ಲ್ಡ್ ಇಂಟರ್‌ನ್ಯಾಷನಲ್ ಸ್ಕೂಲ್, ಸರ್ಜಾಪುರ, ಬೆಂಗಳೂರು.

 

 

Share This Article
error: Content is protected !!
";