ಜಿಲ್ಲಾಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಪ್ರಶಸ್ತಿ ಪ್ರಕಟ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಅಂಗವಾಗಿ ಪರಿಶಿಷ್ಟ ಜಾತಿ
, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳ ಜನರಿಗಾಗಿ ಶ್ರಮಿಸಿರುವ ಸಾಧಕರನ್ನು ಜಿಲ್ಲಾಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ, ನಗರಸಭೆ  ವತಿಯಿಂದ ಇದೇ ಏಪ್ರಿಲ್ 14ರಂದು ಬೆಳಿಗ್ಗೆ 11 ಗಂಟೆಗೆ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಆಯೋಜಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ವಿತರಿಸಲಾಗುವುದು.

- Advertisement - 

ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಚಿತ್ರದುರ್ಗದ ಡಿ.ಕುಮಾರಸ್ವಾಮಿ (ದಲಿತಪರ ಹಿರಿಯ ಹೋರಾಟಗಾರರು) ಹಿರಿಯೂರಿನ ಕೆ.ರಾಮಚಂದ್ರಪ್ಪ (ಸಮಾಜಸೇವೆ) ಚಳ್ಳಕೆರೆಯ ಟಿ. ವಿಜಯಕುಮಾರ್ (ವಕೀಲರು), ಹೋರಾಟಗಾರರಾದ ಮೊಳಕಾಲ್ಮುರಿನ ಟಿ. ಕರಿಬಸಪ್ಪ, ಹೊಸದುರ್ಗದ ಡಿ. ಸೋಮಶೇಖರ ಹಾಗೂ ಹೊಳಲ್ಕೆರೆಯ ಬಿ. ಜಯಪ್ಪ ಕೆಂಗುಂಟೆ ಅವರನ್ನು ಆಯ್ಕೆ ಮಾಡಲಾಗಿದೆ.

ಡಾ. ಬಾಬು ಜಗಜೀವನ್ ರಾಮ್ ಪ್ರಶಸ್ತಿಗೆ ಚಿತ್ರದುರ್ಗದ ಕೆ. ರಾಜಣ್ಣ, (ದಲಿತಪರ ಹಿರಿಯ ಹೋರಾಟಗಾರರು) ಹಿರಿಯೂರಿನ ಬಿ.ಎಲ್. ನರಸಿಂಹಮೂರ್ತಿ (ದಲಿತಪರ ಹೋರಾಟಗಾರರು), ಸಮಾಜ ಸೇವೆ ಕ್ಷೇತ್ರದಲ್ಲಿ ಚಳ್ಳಕೆರೆಯ ವೀರಭದ್ರಪ್ಪ, ಮೊಳಕಾಲ್ಮುರಿನ ಹೊನ್ನೂರಪ್ಪ, ಹೊಳಲ್ಕೆರೆಯ ಬಿ. ರವಿಕುಮಾರ್ ಹಾಗೂ ಹೊಸದುರ್ಗದ ಜೆ.ಆರ್. ತಿಪ್ಪೇಸ್ವಾಮಿ ಅವರು ಭಾಜನರಾಗಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಹಾಗೂ ಡಾ.ಬಾಬು ಜಗಜೀವನರಾಂ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಸಮಿತಿ ಉಪನಿರ್ದೇಶಕರು ತಿಳಿಸಿದ್ದಾರೆ.

- Advertisement - 

 

Share This Article
error: Content is protected !!
";